Gujarat Plane Crash; ಇಷ್ಟು ದೊಡ್ಡ ಪ್ರಮಾಣದ ದುರಂತ ದುರದೃಷ್ಟಕರ: ಜಿ ಪರಮೇಶ್ವರ್
ದುರಂತ ಹೇಗೆ ಸಂಭವಿಸಿತು, ಕಾರಣವೇನು ಮೊದಲಾದ ಸಂಗತಿಗಳು ತನಿಖೆಯ ನಂತರ ಗೊತ್ತಾಗಲಿವೆ, ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸಂಸ್ಥೆಯವರು ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ದುರ್ಘಟನೆ ನಡೆದಿರಬಹುದು, ಸಮಗ್ರವಾದ ತನಿಖೆಯನ್ನು ನಡೆಸಿ ದುರಂತದ ಕಾರಣಗಳನ್ನು ಜನಕ್ಕೆ ತಿಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವುದಾಗಿ ಪರಮೇಶ್ವರ್ ಹೇಳಿದರು.
ಬೆಂಗಳೂರು, ಜೂನ್ 12: ಅಹಮದಾಬಾದ್ನಿಂದ ಲಂಡನ್ಗೆ 242 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗಿದ್ದ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾಗಿದ್ದು ಅತ್ಯಂತ ದುರದೃಷ್ಟಕರ, ವಿಮಾನದಲ್ಲಿದ್ದವರೆಲ್ಲ ಮೃತಪಟ್ಟಿದ್ದಾರೆಂಬ ಸುದ್ದಿ ಬರ್ತಾಯಿದೆ, ಇಂಥ ಘೋರ ದುರಂತ ನಡೆಯಬಾರದಿತ್ತು, ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ, ಮಡಿದವರ ಕುಟುಂಬದ ಸದಸ್ಯರಿಗೆ ನಷ್ಟ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಹೇಳಿದರು. ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ದುರಂತದಲ್ಲಿ ಸತ್ತ್ತಿರುವುದು ಗೊತ್ತಾಗಿದೆ, ಅವರೊಬ್ಬ ಗಣ್ಯವ್ಯಕ್ತಿಯಾಗಿದ್ದರೆನ್ನುವುದಕ್ಕೆ ಮುಖ್ಯ ಅಂತಲ್ಲ, ಮಡಿದವರೆಲ್ಲ ತಮ್ಮ ತಮ್ಮ ಕುಟುಂಬಗಳಿಗೆ ಬಹು ಮುಖ್ಯರು ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: Ahmedabad Plane Crash: ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ