ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾದ AI 171 ವಿಮಾನ ಅಪಘಾತಕ್ಕೀಡಾಗಿದೆ. ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿಗಳು ಅಧಿಕಾರಿಗಳು ಮತ್ತು ವೈದ್ಯರಿಗೆ ತಕ್ಷಣವೇ ಹಾಜರಿರುವಂತೆ ಸೂಚಿಸಿದ್ದಾರೆ. ಏರ್ ಇಂಡಿಯಾ ವಿಮಾನ ವೈದ್ಯರ ಹಾಸ್ಟೆಲ್ ಒಳಗೆ ನುಗ್ಗಿ ಅಪಘಾತಕ್ಕೀಡಾಗಿದೆ. ಈ ಕಟ್ಟಡದಲ್ಲಿ 50-60 ವೈದ್ಯರು ಇದ್ದರು ಎನ್ನಲಾಗಿದೆ. ಅವರೆಲ್ಲರೂ ಸಾವನ್ನಪ್ಪಿರುವ ಸಾಧ್ಯತೆಯಿದೆ. ಈ ಕಟ್ಟಡದ ಕೆಳಗೆ ಪ್ರಯಾಣಿಕರ ಲಗೇಜ್ ರಾಶಿಯೇ ಬಿದ್ದಿದೆ. ಇದೆಲ್ಲವೂ ಅರ್ಧಂಬರ್ಧ ಸುಟ್ಟುಹೋಗಿದೆ.
ಅಹಮದಾಬಾದ್ ನಿಂದ ಲಂಡನ್ ಗೆ ಹೋಗುತ್ತಿದ್ದ ಏರ್ ಇಂಡಿಯಾ (Air India) ವಿಮಾನ ಅಹಮದಾಬಾದ್ ನ ಮೇಘನಿನಗರ ಬಳಿ ಅಪಘಾತಕ್ಕೀಡಾಗಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ವಿಮಾನದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿದಂತೆ 242 ಜನರಿದ್ದರು. ಸದ್ಯದ ಮಾಹಿತಿಯ ಪ್ರಕಾರ, ವಿಮಾನದ ಹಿಂಭಾಗ ಮರಕ್ಕೆ ಡಿಕ್ಕಿ ಹೊಡೆದ 5 ನಿಮಿಷಗಳಲ್ಲಿ ವಿಮಾನ ಅಪಘಾತಕ್ಕೀಡಾಯಿತು. ಏರ್ ಇಂಡಿಯಾದ AI 171 ವಿಮಾನ ಅಪಘಾತಕ್ಕೀಡಾಗಿದೆ. ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿಗಳು ಅಧಿಕಾರಿಗಳು ಮತ್ತು ವೈದ್ಯರಿಗೆ ತಕ್ಷಣವೇ ಹಾಜರಿರುವಂತೆ ಸೂಚಿಸಿದ್ದಾರೆ. ಏರ್ ಇಂಡಿಯಾ ವಿಮಾನ ವೈದ್ಯರ ಹಾಸ್ಟೆಲ್ ಒಳಗೆ ನುಗ್ಗಿ ಅಪಘಾತಕ್ಕೀಡಾಗಿದೆ. ಈ ಕಟ್ಟಡದಲ್ಲಿ 50-60 ವೈದ್ಯರು ಇದ್ದರು ಎನ್ನಲಾಗಿದೆ. ಅವರೆಲ್ಲರೂ ಸಾವನ್ನಪ್ಪಿರುವ ಸಾಧ್ಯತೆಯಿದೆ. ಈ ಕಟ್ಟಡದ ಕೆಳಗೆ ಪ್ರಯಾಣಿಕರ ಲಗೇಜ್ ರಾಶಿಯೇ ಬಿದ್ದಿದೆ. ಇದೆಲ್ಲವೂ ಅರ್ಧಂಬರ್ಧ ಸುಟ್ಟುಹೋಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ