Gujarat Plane Crash: ಭಯಾನಕ ದುರಂತದ ವಿಡಿಯೋಗಳು ಲಭ್ಯ, ಭರದಿಂದ ಸಾಗಿರುವ ರಕ್ಷಣಾ ಕಾರ್ಯಾಚರಣೆ
ವಿಮಾನ ದುರಂತದಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ, ಗಾಯಗೊಂಡವರೆಷ್ಟು ಅಂತ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ದೂರದ ಪ್ರಯಾಣವಾದ್ದರಿಂದ ವಿಮಾನದ ಸಾಮರ್ಥ್ಯದಷ್ಟು ಇಂಧನವನ್ನು ತುಂಬಿಸಲಾಗಿತ್ತು. ಪ್ರಾಯಶಃ ಅದೇ ಕಾರಣಕ್ಕೆ ವಿಮಾನ ಪತನಗೊಂಡ ಕೂಡಲೆ ಭಾರೀ ಬೆಂಕಿ ಮತ್ತು ದಟ್ಟವಾದ ಹೊಗೆ ಸ್ಥಳವನ್ನಾವರಿಸಿತು. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಬೆಂಗಳೂರು, ಜೂನ್ 12: ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಬೋಯಿಂಗ್ 787 ವಿಮಾನ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಸ್ವಲ್ಪ ಹೊತ್ತಿನ ನಂತರ ಪತನಗೊಂಡ (plane crash) ಭಯಾನಕ ಧೃಶ್ಯಗಳು ಮಾಧ್ಯಮಗಳಿಗೆ ಲಬ್ಯವಾಗುತ್ತಿವೆ. ಈ ವಿಡಿಯೋದಲ್ಲಿ ಪತನಗೊಂಡ ವಿಮಾನದ ಅವಶೇಷಗಳನ್ನು ನೋಡಬಹುದು. ಬೆಂಕಿ ಆರಿಸುವ ಕೆಲಸ ಈಗಲೂ ಜಾರಿಯಲ್ಲಿದೆ. ಏಳು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಮಾನವು ಅಹಮದಾಬಾದ್ ನಗರ ಮೇಘಾನಿ ಏರಿಯಾದಲ್ಲಿದ್ದ ಕಟ್ಟಡವೊಂದರ ಮೇಲೆ ಅಪ್ಪಳಿಸಿದೆ.
ಇದನ್ನೂ ಓದಿ: ವಿಮಾನದ ಚಕ್ರಗಳಡಿ ಮೃತದೇಹ ಪತ್ತೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Jun 12, 2025 03:47 PM
Latest Videos