Gujarat Plane Crash: ಅಹಮದಾಬಾದ್ನಲ್ಲಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ
ಇಂದು ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಿಂದ ದಟ್ಟ ಹೊಗೆಯ ಮೋಡ ಆವರಿಸುತ್ತಿರುವುದು ಕಂಡುಬಂದಿದೆ. ಟೇಕ್ ಆಫ್ ಆದ ಕೂಡಲೆ ಏರ್ ಇಂಡಿಯಾ ವಿಮಾನ ಪತನವಾಗಿರುವ ದುರಂತ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ ನಡೆದಿದೆ.
ಅಹಮದಾಬಾದ್, ಜೂನ್ 12: ಟೇಕ್ ಆಫ್ ಆದ ಕೂಡಲೆ ಏರ್ ಇಂಡಿಯಾ ವಿಮಾನ ಪತನವಾಗಿರುವ (Air India Plane Crash) ದುರಂತ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ (Ahmedabad Plane Crash) ನಡೆದಿದೆ. ಈ ವಿಮಾನ ನಿಲ್ದಾಣದ ಆವರಣದಿಂದ ದಟ್ಟ ಹೊಗೆ ಹೊರಬರುತ್ತಿರುವುದನ್ನು ನೋಡಬಹುದು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಹಲವಾರು ಸಾವುನೋವುಗಳ ಭೀತಿ ಎದುರಾಗಿದೆ. ಆದರೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದರ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇಂದು ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಿಂದ ದಟ್ಟ ಹೊಗೆಯ ಮೋಡ ಆವರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಈ ವಿಮಾನ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿತ್ತು. ವಿಮಾನದೊಳಗಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ರಕ್ಷಣಾ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆಗಳು ನಡೆಯುತ್ತಿವೆ.
Air India Ahemdabad-London international flight has crashed during take off in Ahemdabad of Gujarat. 133 passengers reportedly were on board. High casualties expected. Emergency response teams are on site now. Rescue work is underway. pic.twitter.com/SxekWpvqTG
— Aditya Raj Kaul (@AdityaRajKaul) June 12, 2025
ಈ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದ ಹತ್ತಿರದ ವಸತಿ ಪ್ರದೇಶದಲ್ಲಿ ಪತನಗೊಂಡಿತು. ಈ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅದು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವಾಗಿತ್ತು. ರಕ್ಷಣಾ ತಂಡಗಳು ಸ್ಥಳದಲ್ಲಿ ಸ್ಥಳಾಂತರಿಸುವಿಕೆ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಳನ್ನು ಸಕ್ರಿಯವಾಗಿ ನಡೆಸುತ್ತಿವೆ. ಸಾವು-ನೋವುಗಳು ಅಥವಾ ಅಪಘಾತದ ಕಾರಣದ ಬಗ್ಗೆ ಇನ್ನೂ ಯಾವುದೇ ಅಧಿಕೃತ ವರದಿಗಳು ಬಿಡುಗಡೆಯಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Thu, 12 June 25




