AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್: ಬಟಿಂಡಾ ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಿಳಾ ಇನ್​ಫ್ಲುಯೆನ್ಸರ್ ಶವ ಪತ್ತೆ

ಪಂಜಾಬ್​ನ ಇನ್​​ಫ್ಲುಯೆನ್ಸರ್ ಕಾಂಚನ್ ಅಲಿಯಾಸ್ ಕಮಲ್ ಕೌರ್ ಬಂಟಿಂಡಾ ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದೇಶ್ ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಅವರ ಶವ ಪತ್ತೆಯಾಗಿದೆ. ಮೃತರನ್ನು ಲುಧಿಯಾನದ ಲಕ್ಷ್ಮಣ್ ನಗರದ ನಿವಾಸಿ ಕಾಂಚನ್ ಎಂದು ಗುರುತಿಸಲಾಗಿದೆ. ಆಕೆಯ ಶವ ಪತ್ತೆಯಾದ ವಾಹನವು ಆಕೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಪಂಜಾಬ್: ಬಟಿಂಡಾ ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಿಳಾ ಇನ್​ಫ್ಲುಯೆನ್ಸರ್ ಶವ ಪತ್ತೆ
ಕಾಂಚನ್
ನಯನಾ ರಾಜೀವ್
|

Updated on: Jun 12, 2025 | 12:45 PM

Share

ಲುಧಿಯಾನಾ, ಜೂನ್ 12: ಪಂಜಾಬ್​ನ ಇನ್​​ಫ್ಲುಯೆನ್ಸರ್ ಕಾಂಚನ್ ಅಲಿಯಾಸ್ ಕಮಲ್ ಕೌರ್ ಬಂಟಿಂಡಾ ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದೇಶ್ ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಅವರ ಶವ ಪತ್ತೆಯಾಗಿದೆ. ಮೃತರನ್ನು ಲುಧಿಯಾನದ ಲಕ್ಷ್ಮಣ್ ನಗರದ ನಿವಾಸಿ ಕಾಂಚನ್ ಎಂದು ಗುರುತಿಸಲಾಗಿದೆ. ಆಕೆಯ ಶವ ಪತ್ತೆಯಾದ ವಾಹನವು ಆಕೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾಂಚನ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.ಹಾಗೆಯೇ ಹಲವು ವಿವಾದದಲ್ಲಿ ಸಿಲುಕಿಕೊಂಡಿದ್ದರು.

ಪೊಲೀಸರು ತನಿಖೆ ಆರಂಭಿಸಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ತಲುಪಿದ್ದು, ಸಂಪೂರ್ಣ ಪರಿಶೀಲನೆ ನಡೆಸುತ್ತಿದೆ. ಸಂಶೋಧನೆಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ತನಿಖೆ ಮಾಡಲಾಗುವುದು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ:  ತೆಲಂಗಾಣದ ಪೊದೆಯಲ್ಲಿ ಸಿಕ್ಕ ಸೂಟ್​​ಕೇಸ್​​ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ

ಇನ್​ಸ್ಟಾಗ್ರಾಂನಲ್ಲಿ  3.86 ಲಕ್ಷ ಅನುಯಾಯಿಗಳಿದ್ದಾರೆ.ಮೃತದೇಹ ಪತ್ತೆಯಾದ ಕಾರನ್ನು ಮಂಗಳವಾರದಿಂದ ಅಪರಾಧ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಕಾರಿನ ಒಳಗಿನಿಂದ ಕೆಟ್ಟ ವಾಸನೆ ಬರುತ್ತಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಕೊಲೆಯನ್ನು ಬೇರೆಡೆ ಮಾಡಿ ಶವವನ್ನು ತಂದು ಇಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

7 ತಿಂಗಳ ಹಿಂದೆ, ಭಯೋತ್ಪಾದಕ ಅರ್ಶ್ ಡಲ್ಲಾ ಅವರ ಆಡಿಯೋ ವೈರಲ್ ಆಗಿತ್ತು, ಅದರಲ್ಲಿ ಅವರು ಕಮಲ್ ಕೌರ್ ಗೆ ಬೆದರಿಕೆ ಹಾಕಲಾಗಿತ್ತು. ಈಕೆ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಕೆಟ್ಟ ಪೋಸ್ಟ್‌ಗಳನ್ನು ಪೋಸ್ಟ್ ಮಾಡುತ್ತಾಳೆ. ಪಂಜಾಬ್‌ನ ಯುವಕರು ಅವಳಿಂದಾಗಿ ಹಾಳಾಗುತ್ತಿದ್ದಾರೆ. ಅವಳ ಕುಟುಂಬದ ಒಬ್ಬ ಸದಸ್ಯ ಸತ್ತರೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ