AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat Plane Crash; ನನ್ನ ತಲೆ ಸವರಿತೇನೋ ಎಂಬಷ್ಟು ಕೆಳಮಟ್ಟದಲ್ಲಿ ವಿಮಾನ ಹಾರಿತ್ತು: ಅಹಮದಾಬಾದ್ ನಿವಾಸಿ

Gujarat Plane Crash; ನನ್ನ ತಲೆ ಸವರಿತೇನೋ ಎಂಬಷ್ಟು ಕೆಳಮಟ್ಟದಲ್ಲಿ ವಿಮಾನ ಹಾರಿತ್ತು: ಅಹಮದಾಬಾದ್ ನಿವಾಸಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 14, 2025 | 5:04 PM

ಮತ್ತೊಬ್ಬ ಮಹಿಳೆ ಮಹಿಳೆ ಮನೆಯಲ್ಲೇ ಇದ್ದರಂತೆ, ಆದರೆ ಕಿವಿಗಡಚಿಕ್ಕುವಂಥ ವಿಮಾನದ ಸದ್ದು ಕೇಳಿ ಅದು ಖಚಿತವಾಗಿ ನೆಲಕ್ಕೆ ಅಪ್ಪಳಿಸಲಿದೆ ಅಂದುಕೊಂಡರಂತೆ. ಸ್ವಲ್ಪ ಹೊತ್ತಿನಲ್ಲ್ಲೇ ಬಾಂಬ್ ಸ್ಫೋಟಗೊಂಡಂಥ ಸದ್ದು ಅವರ ಕಿವಿಗೆ ಬಿದ್ದಾಗ ಹೊರಗೋಡಿ ಬಂದು ತಾವು ಅಂದುಕೊಂಡಿದ್ದು ಸತ್ಯವಾಗಿದ್ದನ್ನು ಮನಗಂಡಿದ್ದಾರೆ. ಇವರ ಮನೆಯ ಪಕ್ಕದಲ್ಲಿರುವ ಗಿಡಮರಗಳನ್ನು ಸವರಿಕೊಂಡೇ ಹೋಗಿರುವ ವಿಮಾನ ಹಾಸ್ಟೆಲ್​ಗೆ ಅಪ್ಪಳಿಸಿದೆ.

ಅಹಮದಾಬಾದ್, ಜೂನ್ 14: ನಗರದ ಸರ್ದಾರ್ ವಲ್ಲಭ್​ಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಹೌಸಿಂಗ್ ಬೋರ್ಡ್ ಕಾಲೋನಿ (housing board colony) ನಿವಾಸಿಗಳಲ್ಲಿ ಕೆಲವರು ಏರ್ ಇಂಡಿಯಾ ವಿಮಾನ ತಮ್ಮ ಮನೆಗಳ ಮುಂದಿರುವ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಅಪ್ಪಳಿಸುವುದನ್ನು ಕಣ್ಣಾರೆ ನೋಡಿದ್ದಾರೆ. ನಮ್ಮ ವರದಿಗಾರ ಮಾತಾಡಿರುವ ಈ ಮಹಿಳೆ ಒಗೆದ ಬಟ್ಟೆಗಳನ್ನು ಒಣಹಾಕಲು ಟೆರೇಸ್ ಗೆ ಬಂದಾಗ ವಿಮಾನವು ಇವರ ತಲೆಯನ್ನು ಸವರುವಷ್ಟು ಮೇಲಿಂದ ಹಾರಿ ಹೋಗಿದೆ ಮತ್ತು ಅದರ ಗಾಳಿಗೆ ಅವರು ಉರುಳಿ ನೆಲಕ್ಕೆ ಬಿದ್ದಿದ್ದಾರೆ. ಹಾರುವ ವಿಮಾನಗಳನ್ನು ಪ್ರತಿದಿನ ನೋಡುತ್ತೇವೆ, ಅದರೆ ಅಷ್ಟು ಕೆಳಮಟ್ಟದಲ್ಲಿ ವಿಮಾನ ಹಾರಿದ್ದನ್ನು ಮೊದಲು ಯಾವತ್ತೂ ನೋಡಿರಲಿಲ್ಲ ಎಂದು ಮಹಿಳೆ ಹೇಳುತ್ತಾರೆ.

ಇದನ್ನೂ ಓದಿ:    ಡಾಕ್ಟರ್ ಹಾಸ್ಟೆಲ್ ಕಟ್ಟಡದಿಂದ ನೇತಾಡಿದ ಏರ್ ಇಂಡಿಯಾ ವಿಮಾನ   

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ