ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಕನ್ನಡದಲ್ಲಿ ಮಾತನಾಡಿದ್ದಕ್ಕೆ ಉಪನ್ಯಾಸಕ ಕೆಲಸ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೋಣನಕುಂಟೆ RV ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕನ್ನಡದಲ್ಲಿ ಪ್ರಶ್ನೆ ಕೇಳಿದ್ದ ವಿದ್ಯಾರ್ಥಿಗೆ ಉಪನ್ಯಾಸಕ ಕನ್ನಡದಲ್ಲೇ ಉತ್ತರಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೋರ್ವ ವಿದ್ಯಾರ್ಥಿಯೋರ್ವ, ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಉಪನ್ಯಾಸಕನ ವಿರುದ್ಧ ದೂರು ಕಾಲೇಜಿನ ಆಡಳಿ ಮಂಡಳಿಗೆ ದೂರು ನೀಡಿದ್ದು,. ಈ ದೂರಿನ ಮೇರೆಗೆ RV ಕಾಲೇಜಿ ಆಡಳಿ ಮಂಡಳಿ, ಉಪನ್ಯಾಸಕನಿಗೆ ರಾಜೀನಾಮೆ ನಿಡುವಂತೆ ಒತ್ತಾಯಿಸಿದೆ.
ಬೆಂಗಳೂರು, (ಜೂನ್ 14): ಕನ್ನಡದಲ್ಲಿ ಮಾತನಾಡಿದ್ದಕ್ಕೆ ಉಪನ್ಯಾಸಕ ಕೆಲಸ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೋಣನಕುಂಟೆ RV ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕನ್ನಡದಲ್ಲಿ ಪ್ರಶ್ನೆ ಕೇಳಿದ್ದ ವಿದ್ಯಾರ್ಥಿಗೆ ಉಪನ್ಯಾಸಕ ಕನ್ನಡದಲ್ಲೇ ಉತ್ತರಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೋರ್ವ ವಿದ್ಯಾರ್ಥಿ, ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಉಪನ್ಯಾಸಕನ ವಿರುದ್ಧ ದೂರು ಕಾಲೇಜಿನ ಆಡಳಿ ಮಂಡಳಿಗೆ ದೂರು ನೀಡಿದ್ದು,. ಈ ದೂರಿನ ಮೇರೆಗೆ RV ಕಾಲೇಜಿ ಆಡಳಿ ಮಂಡಳಿ, ಉಪನ್ಯಾಸಕನಿಗೆ ರಾಜೀನಾಮೆ ನಿಡುವಂತೆ ಒತ್ತಾಯಿಸಿದೆ. ಇದಕ್ಕೆ ಒಪ್ಪದಿದ್ದಕ್ಕೆ ಬೆದರಿಕೆ ಹಾಕಲಾಗಿದೆ. ಉಪನ್ಯಾಸಕನ ಪುತ್ರಿ RV ಕಾಲೇಜಿನ ಬೇರೆ ಬ್ರ್ಯಾಂಚ್ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಗಳ ಟಿಸಿ ಹಾಗೂ ಇತರೆ ದಾಖಲೆ ಕೊಡಲ್ಲ ಎಂದು ಬೆದರಿಸಿದ್ದಾರೆ. ಮಗಳ ಭವಿಷ್ಯ, ಒತ್ತಡಕ್ಕೆ ಮಣಿದು ಕೊನೆಗೆ ಉಪನ್ಯಾಸಕ ರಾಜೀನಾಮೆ ನೀಡಿದ್ದು, ಈ ಬಗ್ಗೆ ತಮಗಾದ ಅನ್ಯಾಯದ ಬಗ್ಗೆ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಕನ್ನಡ ಮಾತಾಡಿದ್ದಕ್ಕೆ ಹೀಗೆಲ್ಲ ಆಯ್ತು ಎಂದು ಉಪನ್ಯಾಸಕ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕನ್ನಡ ಸಂಘಟನೆಗಳು ಆಕ್ರೋಶಗೊಂಡಿವೆ. ಈ ಸಂಬಂಧ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಲಾಲ್ ಬಾಗ್ ಬಳಿ ಇರುವ ಆರ್ ವಿ ಟ್ರಸ್ಟ್ ಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಇದರ ಬೆನ್ನಲ್ಲೇ ಆಡಳಿತ ಮಂಡಳಿ ಉಪನ್ಯಾಸಕನಿಗೆ ಮತ್ತೆ ಕೆಲಸ ನೀಡುವುದಾಗಿ ಭರವಸೆ ನೀಡಿದೆ.