AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC 2025 final: ಚಾಂಪಿಯನ್ ಆಫ್ರಿಕಾಕ್ಕೆ, ಸೋತ ಆಸೀಸ್​ಗೆ, 3ನೇ ಸ್ಥಾನ ಪಡೆದ ಭಾರತಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

WTC 2025 Final Prize Money: ದಕ್ಷಿಣ ಆಫ್ರಿಕಾ ತಂಡವು ಟೆಂಬಾ ಬವುಮಾ ನಾಯಕತ್ವದಲ್ಲಿ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಈ ಮೂಲಕ 3.6 ಮಿಲಿಯನ್ ಡಾಲರ್ ಅಂದರೆ ಸುಮಾರು 30 ಕೋಟಿ ರೂ ಬಹುಮಾನ ಪಡೆದಿದೆ. ಆಸ್ಟ್ರೇಲಿಯಾ ಮತ್ತು ಭಾರತಕ್ಕೆ ಕ್ರಮವಾಗಿ 18.5 ಕೋಟಿ ಮತ್ತು 12.32 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಉಳಿದ ತಂಡಗಳಿಗೆ ಸಹ ಬಹುಮಾನ ವಿತರಿಸಲಾಗಿದೆ.

WTC 2025 final: ಚಾಂಪಿಯನ್ ಆಫ್ರಿಕಾಕ್ಕೆ, ಸೋತ ಆಸೀಸ್​ಗೆ, 3ನೇ ಸ್ಥಾನ ಪಡೆದ ಭಾರತಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು?
Wtc Final
ಪೃಥ್ವಿಶಂಕರ
| Edited By: |

Updated on:Jun 20, 2025 | 10:05 AM

Share

ಟೆಂಬಾ ಬವುಮಾ (Temba Bavuma) ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಇತಿಹಾಸ ಸೃಷ್ಟಿಸಿದೆ. ಲಾರ್ಡ್ಸ್‌ನಲ್ಲಿ ನಡೆದ 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship 2025) ಫೈನಲ್‌ನಲ್ಲಿ, ನಾಲ್ಕು ದಿನಗಳಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ತನ್ನ 27 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿತು. ಗೆಲುವಿಗೆ ಆಸ್ಟ್ರೇಲಿಯಾ ನೀಡಿದ 282 ರನ್​ಗಳ ಗುರಿಯನ್ನು ಆಫ್ರಿಕಾ ತಂಡ 5 ವಿಕೆಟ್ ಕಳೆದುಕೊಂಡು ಸಾಧಿಸಿತು. ಆಫ್ರಿಕಾ ಪರ ಆರಂಭಿಕ ಐಡೆನ್ ಮಾರ್ಕ್ರಾಮ್ (Aiden Markram) 136 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಟೆಂಬಾ ಬವುಮಾ ಕೂಡ 66 ರನ್​ಗಳ ಪ್ರಮುಖ ಕಾಣಿಕೆ ನೀಡಿದರು. ಇದೀಗ ಡಬ್ಲ್ಯುಟಿಸಿಯ ಮೂರನೇ ಆವೃತ್ತಿ ಮುಗಿದಿದ್ದು ಯಾವ ತಂಡಕ್ಕೆ ಎಷ್ಟೆಷ್ಟು ಬಹುಮಾನ ಸಿಕ್ಕಿದೆ ಎಂಬುದನ್ನು ನೋಡುವ ಸಮಯ ಬಂದಿದೆ.

ಚಾಂಪಿಯನ್ ತಂಡಕ್ಕೆ ಸಿಕ್ಕಿದೆಷ್ಟು?

ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಒಟ್ಟು 3.6 ಮಿಲಿಯನ್ ಡಾಲರ್ ಬಹುಮಾನ ದೊರೆತಿದೆ. ಅಂದರೆ, ಬವುಮಾ ಪಡೆಗೆ ಸುಮಾರು 30.88 ಕೋಟಿ ರೂ. ಬಹುಮಾನ ಸಿಕ್ಕಿದೆ. ಈ ಬಹುಮಾನದ ಹಣವು ಕಳೆದ ಎರಡು ಆವೃತ್ತಿಗಳಾದ 2021 ಮತ್ತು 2023 ಗಿಂತ ಹೆಚ್ಚಾಗಿದೆ. ಹಾಗೆಯೇ ಫೈನಲ್ ಸೋತ ಆಸ್ಟ್ರೇಲಿಯಾ ತಂಡಕ್ಕೆ ಸುಮಾರು 18.5 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಈ ಎರಡು ತಂಡಗಳು ಮಾತ್ರವಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ಭಾರತ ತಂಡಕ್ಕೆ ಸುಮಾರು 12.32 ಕೋಟಿ ರೂ. ಬಹುಮಾನ ದೊರೆತಿದೆ. ಉಳಿದಂತೆ ಈ ಆವೃತ್ತಿಯಲ್ಲಿ ಭಾಗವಹಿಸಿದ್ದ 9 ತಂಡಗಳಿಗೆ ಸಿಕ್ಕ ಬಹುಮಾನದ ವಿವರ ಹೀಗಿದೆ.

WTC 2025 final: ಸೋಲಿಲ್ಲದ ಸರದಾರರಾಗಿ ಸೋಲಿನ ಶಾಕ್ ನೀಡಿದ ಸೌತ್ ಆಫ್ರಿಕಾ

ಬಹುಮಾನದ ವಿವರ ಹೀಗಿದೆ

  • ಮೊದಲ ಸ್ಥಾನ: ದಕ್ಷಿಣ ಆಫ್ರಿಕಾ; ಸುಮಾರು 30 ಕೋಟಿ ರೂ.
  • ಎರಡನೇ ಸ್ಥಾನ: ಆಸ್ಟ್ರೇಲಿಯಾ; ಸುಮಾರು 18 ಕೋಟಿ ರೂ.
  • ಮೂರನೇ ಸ್ಥಾನ: ಭಾರತ; ಸುಮಾರು 12 ಕೋಟಿ ರೂ.
  • ನಾಲ್ಕನೇ ಸ್ಥಾನ: ನ್ಯೂಜಿಲೆಂಡ್; ಸುಮಾರು 10 ಕೋಟಿ ರೂ.
  • ಐದನೇ ಸ್ಥಾನ: ಇಂಗ್ಲೆಂಡ್; ಸುಮಾರು 8 ಕೋಟಿ ರೂ.
  • ಆರನೇ ಸ್ಥಾನ: ಶ್ರೀಲಂಕಾ; ಸುಮಾರು 7 ಕೋಟಿ ರೂ.
  • 7ನೇ ಸ್ಥಾನ: ಬಾಂಗ್ಲಾದೇಶ; ಸುಮಾರು 6 ಕೋಟಿ ರೂ.
  • ಎಂಟನೇ ಸ್ಥಾನ: ವೆಸ್ಟ್ ಇಂಡೀಸ್; ಸುಮಾರು 5 ಕೋಟಿ ರೂ.
  • 9ನೇ ಸ್ಥಾನ: ಪಾಕಿಸ್ತಾನ; ಸುಮಾರು ಸುಮಾರು 4 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Sat, 14 June 25

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ