AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC 2025 final: ಚೋಕರ್ಸ್​ ಅಲ್ಲ, ಚಾಂಪಿಯನ್ಸ್; ಅವಮಾನದ ಹಣೆಪಟ್ಟಿ ಅಳಿಸಿದ ಆಫ್ರಿಕಾ

South Africa Ends "Chokers" Tag: "ಚೋಕರ್ಸ್" ಎಂಬ ಹಣೆಪಟ್ಟಿಯನ್ನು ಕಿತ್ತೆಸೆಯುವಲ್ಲಿ ಆಫ್ರಿಕಾ ತಂಡ ಕೊನೆಗೂ ಯಶಸ್ವಿಯಾಗಿದೆ. ಮಹತ್ವದ ಪಂದ್ಯಗಳಲ್ಲಿ ಸೋಲಿನಿಂದ ಬಳಲುತ್ತಿದ್ದ ಆಫ್ರಿಕಾ ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಈ ಹಣೆಪಟ್ಟಿಯನ್ನು ತೊಡೆದುಹಾಕಿದೆ. ಟೆಂಬಾ ಬವುಮಾ ನೇತೃತ್ವದ ತಂಡದ ಹೋರಾಟದ ಮನೋಭಾವ ಮತ್ತು ಒತ್ತಡ ನಿರ್ವಹಣೆ ಈ ಗೆಲುವಿಗೆ ಪ್ರಮುಖ ಕಾರಣ. ಹಿಂದಿನ ಸೋಲುಗಳನ್ನು ಮರೆತು ಅದ್ಭುತ ಪ್ರದರ್ಶನ ನೀಡಿದ ಆಫ್ರಿಕಾ ಇತಿಹಾಸ ನಿರ್ಮಿಸಿದೆ.

WTC 2025 final: ಚೋಕರ್ಸ್​ ಅಲ್ಲ, ಚಾಂಪಿಯನ್ಸ್; ಅವಮಾನದ ಹಣೆಪಟ್ಟಿ ಅಳಿಸಿದ ಆಫ್ರಿಕಾ
Wtc Final 2025
ಪೃಥ್ವಿಶಂಕರ
| Updated By: Digi Tech Desk|

Updated on:Jun 20, 2025 | 10:07 AM

Share

ದಕ್ಷಿಣ ಆಫ್ರಿಕಾ…. ಪ್ರತಿಯೊಂದು ಐಸಿಸಿ (ICC) ಈವೆಂಟ್​ನಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಪಂದ್ಯಾವಳಿಗೆ ಕಾಲಿಡುತ್ತಿದ್ದ ಆಫ್ರಿಕಾ ತಂಡ ಕೊನೆ ಹಂತದಲ್ಲಿ ಎಡವುತ್ತಿತ್ತು. ಇದು ಕಳೆದ ಹಲವು ವರ್ಷಗಳಿಂದ ನಡೆದುಬಂದ ವಾಡಿಕೆಯಾಗಿತ್ತು. ಹೀಗಾಗಿಯೇ ತಂಡಕ್ಕೆ ಚೋಕರ್ಸ್​ ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿತ್ತು. ಆಫ್ರಿಕಾ ತಂಡಕ್ಕೆ ಸುಖಾಸುಮ್ಮನೆ ಈ ಹಣೆಪಟ್ಟಿ ಸಿಕ್ಕಿದಲ್ಲ. ಎಷ್ಟೋ ಪ್ರಶಸ್ತಿ ಸುತ್ತಿನ ಪಂದ್ಯಗಳಲ್ಲಿ ಪಂದ್ಯದ ಕೊನೆಯವರೆಗೂ ಗೆಲುವಿನ ಫೇವರೇಟ್ ಆಗಿರುತ್ತಿದ್ದ ಆಫ್ರಿಕಾ, ಕೊನೆ ಗಳಿಗೆಯಲ್ಲಿ ಮಾಡಿಕೊಳ್ಳುತ್ತಿದ್ದ ಎಡವಟ್ಟಿನಿಂದ ಪ್ರಶಸ್ತಿಯಿಂದ ವಂಚಿತವಾಗುತ್ತಿತ್ತು. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಫೈನಲ್ (T20 World Cup Final)​ ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು.

ಬಹು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರಾದಾಯದ ಪ್ರಕಾರ ಈ ಬಾರಿಯೂ ಐಸಿಸಿ ಟ್ರೋಫಿ ಆಫ್ರಿಕಾ ಕೈಜಾರಲಿದೆ ಎಂಬುದು ಪ್ರತಿಯೊಬ್ಬರ ಮಾತಾಗಿತ್ತು. ಆದರೆ ಈ ಬಾರಿ ಆ ಮಾತನ್ನು ಸುಳ್ಳು ಮಾಡುವಲ್ಲಿ ನಾಯಕ ಬವುಮಾ ಹಾಗೂ ಆಟಗಾರರು ಯಶಸ್ವಿಯಾಗಿದ್ದಾರೆ. ತಂಡದ ಈ ಯಶಸ್ಸಿಗೆ ಪ್ರಮುಖ ಕಾರಣ, ಪಂದ್ಯ ಕೈಜಾರುವ ಸ್ಥಿತಿಯಲ್ಲೂ ಬಿಟ್ಟುಕೊಡದ ಹೋರಾಟದ ಮನೋಬಾವ ಈ ಬಾರಿ ಆಫ್ರಿಕಾ ಆಟಗಾರರಲ್ಲಿ ಕಂಡುಬಂತು. ಈ ಫೈನಲ್ ಪಂದ್ಯದಲ್ಲಿ ತಂಡವು ಯಾವುದೇ ಒತ್ತಡದಲ್ಲಿ ಕಾಣಲಿಲ್ಲ. ಆದರೆ ಇದೇ ಆಫ್ರಿಕಾ ತಂಡ ಒಂದು ವರ್ಷದ ಹಿಂದೆ ನಡೆದಿದ್ದ ಟಿ20 ವಿಶ್ವಕಪ್ ಫೈನಲ್​ನಲ್ಲಿ ಒತ್ತಡಕ್ಕೊಳಗಾಗಿದ್ದು ಮಾತ್ರವಲ್ಲದೆ, ತನ್ನ ಕೈಯಾರೆ ಪಂದ್ಯವನ್ನು ಕೈಚೆಲ್ಲಿತು.

ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಅದ್ಭುತ ಪ್ರದರ್ಶನ ನೀಡಿ ತನ್ನ ಮೊದಲ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಪ್ರಶಸ್ತಿ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಕಠಿಣ ಹೋರಾಟ ನೀಡಿತ್ತಾದರೂ ರೋಹಿತ್ ಪಡೆ ಆ ಪಂದ್ಯವನ್ನು 6 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಫೈನಲ್ ಸೋಲಿನ ಬಳಿಕ ಆಫ್ರಿಕಾ ತಂಡವನ್ನು ಪ್ರಪಂಚದಾದ್ಯಂತ ಬಹಳಷ್ಟು ಟೀಕಿಸಲಾಯಿತು. ಏಕೆಂದರೆ, 30 ಎಸೆತಗಳಲ್ಲಿ 30 ರನ್ ಬೇಕಾಗಿದ್ದಾಗ, ತಂಡದ ಪ್ರಮುಖ ಆಟಗಾರರು ಕ್ರೀಸ್​ನಲ್ಲಿದ್ದಾಗ ಆಫ್ರಿಕಾ ತಂಡಕ್ಕೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್

ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ ಆಫ್ರಿಕಾ ತಂಡ ಇದೇ ಟೆಂಬಾ ಬವುಮಾ ಅವರ ನಾಯಕತ್ವದಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆಟವಾಡಿ ಸೆಮಿಫೈನಲ್‌ಗೆ ತಲುಪಿತು. ಆದರೆ ಮತ್ತೊಮ್ಮೆ ಸೋಲನ್ನು ಎದುರಿಸಬೇಕಾಯಿತು. ಸೆಮಿಫೈನಲ್ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡದ ವಿರುದ್ಧ 50 ರನ್‌ಗಳಿಂದ ಸೋತಿದ್ದ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂಟಿರುವ ಚೋಕರ್ಸ್​ ಕಳಂಕ ಎಂದಿಗೂ ದೂರವಾಗುವುದಿಲ್ಲ ಎಂದು ಖಚಿತವಾಗಿತ್ತು. ಆದರೀಗ ಆ ಕಳಂಕವನ್ನು ಅಳಿಸಿ ಹಾಕುವಲ್ಲಿ ಅಫ್ರಿಕಾ ಯಶಸ್ವಿಯಾಗಿದೆ.

ಸತತ 7 ಟೆಸ್ಟ್‌ ಗೆಲುವು

ನಾಯಕ ಟೆಂಬಾ ಬವುಮಾ ಅವರ ನಾಯಕತ್ವದಲ್ಲಿ, ತಂಡವು ಸತತ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದು 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿತು, ಆದರೆ ಈ ಬಾರಿಯೂ ದಕ್ಷಿಣ ಆಫ್ರಿಕಾ ದೊಡ್ಡ ಪಂದ್ಯದಲ್ಲಿ ಎಡವುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು. ಮುಂದಿರುವ ಆಸ್ಟ್ರೇಲಿಯಾ ತಂಡವನ್ನು ನೋಡಿದಾಗ, ಎಲ್ಲರಿಗೂ ಹಾಗೆ ಅನಿಸುತ್ತಿತ್ತು. ಏಕೆಂದರೆ ಐಸಿಸಿ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದು ತುಂಬಾ ಕಷ್ಟ, ಆದರೆ ಪ್ರಶಸ್ತಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತನ್ನ ಆಟವನ್ನು ಆಡಿದ ರೀತಿ ಎಲ್ಲರನ್ನೂ ಬೆರಗುಗೊಳಿಸಿತು. ದಕ್ಷಿಣ ಆಫ್ರಿಕಾ ಚೋಕರ್ಸ್​ ಕಳಂಕವನ್ನು ತೊಳೆದು ಈ ದೀರ್ಘ ಸ್ವರೂಪದ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Sat, 14 June 25

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ