World Test Championship
World Test Championship
‘ಬಿಜೆಪಿ ಸರ್ಕಾರ ನಾರಿ ಶಕ್ತಿಯನ್ನು ಸದಾ ಪ್ರೋತ್ಸಾಹಿಸುತ್ತದೆ’; ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವಿಗೆ ಪ್ರಧಾನಿ ಮೋದಿ ಶ್ಲಾಘನೆ
ಭಾರತದ ಮಹಿಳಾ ಕ್ರಿಕೆಟ್ ತಂಡ ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ. ನಿನ್ನೆ ರಾತ್ರಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ಗಳಿಂದ ಸೋಲಿಸಿದ ಭಾರತದ ಮಹಿಳಾ ತಂಡ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ನಮ್ಮ ದೇಶದ ಆಟಗಾರ್ತಿಯರ ದೃಢನಿಶ್ಚಯ ಮತ್ತು ಬದ್ಧತೆಯನ್ನು ಮೋದಿ ಶ್ಲಾಘಿಸಿದ್ದಾರೆ.
- Sushma Chakre
- Updated on: Nov 3, 2025
- 4:14 pm
IND vs ENG Test: ಇಂಗ್ಲೆಂಡ್ಗೆ ಭಾರೀ ಅವಮಾನ ತರಿಸಿತು ಈ ಒಂದು ಸೋಲು: ಸ್ಟೋಕ್ಸ್ ಪಡೆಗೆ ದೊಡ್ಡ ಕಳಂಕ
England Cricket Team: ಭಾರತದ ವಿರುದ್ಧದ ಪಂದ್ಯವನ್ನು ಸೋತ ನಂತರ, ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡವಾಗಿದೆ. ಇಂಗ್ಲೆಂಡ್ ಇದುವರೆಗೆ ಡಬ್ಲ್ಯೂಟಿಸಿಯಲ್ಲಿ ಒಟ್ಟು 26 ಪಂದ್ಯಗಳನ್ನು ಸೋತಿದೆ. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳು ಜಂಟಿಯಾಗಿ ಎರಡನೇ ಸ್ಥಾನದಲ್ಲಿವೆ.
- Malashree anchan
- Updated on: Jul 16, 2025
- 6:17 pm
IND vs ENG 1st Test: ಎರಡನೇ ದಿನದಾಟಕ್ಕೆ 5 ಮಾಸ್ಟರ್ ಪ್ಲ್ಯಾನ್ ರೂಪಿಸಿದ ಶುಭ್ಮನ್ ಗಿಲ್
Shubman Gill: ಇಂಗ್ಲೆಂಡ್ ವಿರುದ್ಧದ ಹೆಡಿಂಗ್ಲೆ ಟೆಸ್ಟ್ ಪಂದ್ಯದ ಮೊದಲ ದಿನದಂದು, ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತು. ಮೊದಲ ದಿನವೇ ಭಾರತ ತಂಡ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯದ ಎರಡನೇ ದಿನದಂದು ಭಾರತ ತಂಡ ಬ್ಯಾಟಿಂಗ್ ಮಾಡಲು ಬಂದಾಗ, ಯಾವುದೇ ಬೆಲೆ ತೆತ್ತಾದರೂ ಸ್ಕೋರ್ ಅನ್ನು 500 ರನ್‌ಗಳಿಗಿಂತ ಹೆಚ್ಚು ಗಳಿಸಲು ಪ್ರಯತ್ನಿಸುತ್ತದೆ.
- Vinay Bhat
- Updated on: Jun 21, 2025
- 8:06 am
Shubman Gill Record: ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಶುಭ್ಮನ್ ಗಿಲ್ ವಿಶಿಷ್ಟ ದಾಖಲೆ
India vs England 1st Test: ಶುಭ್ಮನ್ ಗಿಲ್ ಟೀಮ್ ಇಂಡಿಯಾ ಪರ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ 9 ನೇ ಭಾರತೀಯ ಮತ್ತು ಅತ್ಯಂತ ಕಿರಿಯ ನಾಯಕರಾದರು. 25 ವರ್ಷ ಮತ್ತು 285 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಮಾತ್ರವಲ್ಲದೆ, ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಗಳಿಸಿದ ಸಾಧನೆಯನ್ನೂ ಗಿಲ್ ಮಾಡಿದ್ದಾರೆ.
- Vinay Bhat
- Updated on: Jun 20, 2025
- 9:14 pm
Yashasvi Jaiswal: ಆಂಗ್ಲರ ನಾಡಲ್ಲಿ ಇತಿಹಾಸ ನಿರ್ಮಿಸಿದ ಯಶಸ್ವಿ ಜೈಸ್ವಾಲ್: 58 ವರ್ಷಗಳ ದಾಖಲೆ ಉಡೀಸ್
India vs England 1st Test: ಶುಭ್ಮನ್ ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡುತ್ತಿದೆ, ಆದ್ದರಿಂದ ಎಲ್ಲರ ಕಣ್ಣುಗಳು ಈ ಸರಣಿಯ ಮೇಲೆ ಇದೆ. ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮೇಲೂ ಬೆಟ್ಟದಷ್ಟು ನಿರೀಕ್ಷೆಗಳಿವೆ. ನಿರೀಕ್ಷೆಯನ್ನು ಹುಸಿ ಮಾಡದ ಯಶಸ್ವಿ ಮೊದಲು ಕೆಎಲ್ ರಾಹುಲ್ ಜೊತೆಗೆ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.
- Vinay Bhat
- Updated on: Jun 20, 2025
- 8:32 pm
IND vs ENG 1st Test: 3ನೇ ಕ್ರಮಾಂಕದ ಮೇಲೆ ಎಲ್ಲರ ಕಣ್ಣು: ಕರುಣ್-ಸುದರ್ಶನ್ ಮಧ್ಯೆ ಯಾರಿಗೆ ಸ್ಥಾನ?
Karun Nair or Sai Sudarshan: ಈ ಹಿಂದೆ ಶುಭ್ಮನ್ ಗಿಲ್ ಟೆಸ್ಟ್ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೀಗ ಗಿಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕಾರಣ 3ನೇ ಸ್ಥಾನದಲ್ಲಿ ಯಾರು ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸದ್ಯ ಮೂರನೇ ಸ್ಥಾನದಲ್ಲಿ ಆಡಲು ಟೀಮ್ ಇಂಡಿಯಾ ಇಬ್ಬರು ಪ್ರಬಲ ಆಟಗಾರರನ್ನು ಹೊಂದಿದೆ. ಅವರಲ್ಲಿ ಸಾಯಿ ಸುದರ್ಶನ್ ಮತ್ತು ಕರುಣ್ ನಾಯರ್ ಸೇರಿದ್ದಾರೆ.
- Vinay Bhat
- Updated on: Jun 20, 2025
- 10:09 am
98 ಓವರ್ಗಳು, 4 ದಿನಗಳು… ಟೆಸ್ಟ್ ಸ್ವರೂಪದ ಬದಲಾವಣೆಗೆ ಪ್ಲ್ಯಾನ್
World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2027-29ರ ಸರಣಿಯಲ್ಲಿ ಮಹತ್ವದ ಬದಲಾವಣೆಯಾಗುವುದು ಬಹುತೇಕ ಖಚಿತ. ಅದು ಕೂಡ 4 ದಿನಗಳ ಟೆಸ್ಟ್ ಪಂದ್ಯವನ್ನು ಪರಿಚಯಿಸುವ ಮೂಲಕ ಎಂಬುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆ ತರಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
- Zahir Yusuf
- Updated on: Jun 20, 2025
- 10:04 am
WTC 2025 final: ‘ಅನುಮಾನಿಸಿದವರಿಗೆ ಈ ಟ್ರೋಫಿಯೇ ಉತ್ತರ’; ಟೀಕಾಕಾರರಿಗೆ ಬವುಮಾ ಉತ್ತರ
Temba Bavuma's Winning Response to Critics: ದಕ್ಷಿಣ ಆಫ್ರಿಕಾ ತಂಡದ ನಾಯಕ ಬವುಮಾ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದ ನಂತರ ತಮ್ಮ ಗೆಲುವಿನ ಭಾಷಣದಲ್ಲಿ ಟೀಕೆಗಳಿಗೆ ಉತ್ತರಿಸಿದ್ದಾರೆ. ಕಗಿಸೊ ರಬಾಡ ಮತ್ತು ಮಾರ್ಕ್ರಮ್ ಅವರನ್ನು ಹೊಗಳಿ, ಹಿಂದಿನ ಸೋಲುಗಳನ್ನು ನೆನಪಿಸಿಕೊಂಡಿದ್ದಾರೆ. ಈ ಗೆಲುವು ತಮ್ಮ ತಂಡದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
- pruthvi Shankar
- Updated on: Jun 20, 2025
- 10:05 am
WTC 2025-27 ವೇಳಾಪಟ್ಟಿ ಪ್ರಕಟ; ಟೀಂ ಇಂಡಿಯಾ ಯಾವಾಗ, ಯಾರ ವಿರುದ್ಧ ಎಷ್ಟು ಪಂದ್ಯಗಳನ್ನು ಆಡಲಿದೆ ಗೊತ್ತಾ?
ICC World Test Championship 2025-27 Schedule: ಐಸಿಸಿ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಆವೃತ್ತಿಯಲ್ಲಿ ಭಾರತ ತಂಡ 18 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿ ಪ್ರಮುಖವಾಗಿದೆ. ಆಸ್ಟ್ರೇಲಿಯಾ 22 ಪಂದ್ಯಗಳನ್ನು ಆಡಲಿದ್ದು, ಇಂಗ್ಲೆಂಡ್ 21 ಪಂದ್ಯಗಳನ್ನು ಆಡಲಿದೆ. ಜೂನ್ 17 ರಂದು ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದೊಂದಿಗೆ ಚಾಂಪಿಯನ್‌ಶಿಪ್ ಆರಂಭವಾಗುತ್ತದೆ.
- pruthvi Shankar
- Updated on: Jun 20, 2025
- 10:04 am
WTC 2025 final: ಚಾಂಪಿಯನ್ ಆಫ್ರಿಕಾಕ್ಕೆ, ಸೋತ ಆಸೀಸ್ಗೆ, 3ನೇ ಸ್ಥಾನ ಪಡೆದ ಭಾರತಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು?
WTC 2025 Final Prize Money: ದಕ್ಷಿಣ ಆಫ್ರಿಕಾ ತಂಡವು ಟೆಂಬಾ ಬವುಮಾ ನಾಯಕತ್ವದಲ್ಲಿ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಈ ಮೂಲಕ 3.6 ಮಿಲಿಯನ್ ಡಾಲರ್ ಅಂದರೆ ಸುಮಾರು 30 ಕೋಟಿ ರೂ ಬಹುಮಾನ ಪಡೆದಿದೆ. ಆಸ್ಟ್ರೇಲಿಯಾ ಮತ್ತು ಭಾರತಕ್ಕೆ ಕ್ರಮವಾಗಿ 18.5 ಕೋಟಿ ಮತ್ತು 12.32 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಉಳಿದ ತಂಡಗಳಿಗೆ ಸಹ ಬಹುಮಾನ ವಿತರಿಸಲಾಗಿದೆ.
- pruthvi Shankar
- Updated on: Jun 20, 2025
- 10:05 am