AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill Record: ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಶುಭ್​ಮನ್ ಗಿಲ್ ವಿಶಿಷ್ಟ ದಾಖಲೆ

India vs England 1st Test: ಶುಭ್​ಮನ್ ಗಿಲ್ ಟೀಮ್ ಇಂಡಿಯಾ ಪರ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ 9 ನೇ ಭಾರತೀಯ ಮತ್ತು ಅತ್ಯಂತ ಕಿರಿಯ ನಾಯಕರಾದರು. 25 ವರ್ಷ ಮತ್ತು 285 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಮಾತ್ರವಲ್ಲದೆ, ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಗಳಿಸಿದ ಸಾಧನೆಯನ್ನೂ ಗಿಲ್ ಮಾಡಿದ್ದಾರೆ.

Shubman Gill Record: ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಶುಭ್​ಮನ್ ಗಿಲ್ ವಿಶಿಷ್ಟ ದಾಖಲೆ
Shubman Gill Record
Vinay Bhat
|

Updated on: Jun 20, 2025 | 9:14 PM

Share

ಬೆಂಗಳೂರು (ಜೂ. 20): ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಶುಭ್​ಮನ್ ಗಿಲ್ (Shubman Gill), ಬ್ಯಾಟಿಂಗ್‌ನಲ್ಲಿ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಹೆಡಿಂಗ್ಲೆ ಟೆಸ್ಟ್ ಪಂದ್ಯದ ಮೊದಲ ದಿನದಂದು, ಶುಭ್​ಮನ್ ಏಕದಿನ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಕೇವಲ 56 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇದರೊಂದಿಗೆ, ಶುಭ್​ಮನ್ ಗಿಲ್ ತಮ್ಮ ಚೊಚ್ಚಲ ಟೆಸ್ಟ್ ನಾಯಕತ್ವದಲ್ಲಿ ಮಿಂಚಿನ ಪ್ರದರ್ಶನ ತೋರಿದರು. ಶುಭ್​ಮನ್ ಗಿಲ್ ಅವರ ಈ ವೇಗದ ಇನ್ನಿಂಗ್ಸ್‌ನೊಂದಿಗೆ, ಊಟದ ವಿರಾಮದ ಮೊದಲು 2 ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಎರಡನೇ ಸೆಷನ್‌ನಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು.

ಶುಭ್​ಮನ್ ಗಿಲ್ ಟೀಮ್ ಇಂಡಿಯಾ ಪರ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ 9 ನೇ ಭಾರತೀಯ ಮತ್ತು ಅತ್ಯಂತ ಕಿರಿಯ ನಾಯಕರಾದರು. ಶುಭ್​ಮನ್ ಗಿಲ್ 25 ವರ್ಷ ಮತ್ತು 285 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಮಾತ್ರವಲ್ಲದೆ, ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಗಳಿಸಿದ ಸಾಧನೆಯನ್ನೂ ಶುಭ್​ಮನ್ ಗಿಲ್ ಮಾಡಿದ್ದಾರೆ.

ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲು ಬಂದಿತು

ಶುಭ್​ಮನ್ ಗಿಲ್ ತಮ್ಮ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿಯೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರಬಹುದು, ಆದರೆ ಟಾಸ್ ಅವರ ಪರವಾಗಿರಲಿಲ್ಲ. ಪಂದ್ಯದಲ್ಲಿ, ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೆಡಿಂಗ್ಲಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಬಂದ ಟೀಮ್ ಇಂಡಿಯಾಕ್ಕೆ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಇಬ್ಬರ ನಡುವೆ ಮೊದಲ ವಿಕೆಟ್‌ಗೆ 91 ರನ್‌ಗಳ ಪಾಲುದಾರಿಕೆ ಇತ್ತು.

ಇದನ್ನೂ ಓದಿ
Image
ಆಂಗ್ಲರ ನಾಡಲ್ಲಿ ಇತಿಹಾಸ ನಿರ್ಮಿಸಿದ ಯಶಸ್ವಿ ಜೈಸ್ವಾಲ್
Image
39 ವರ್ಷಗಳ ಹಳೆಯ ದಾಖಲೆ ಮುರಿದ ರಾಹುಲ್- ಜೈಸ್ವಾಲ್
Image
‘ಇನ್ನೂ ವಿಶೇಷ’; ಕರುಣ್ ಮಡದಿಯ ವಿಶೇಷ ಪೋಸ್ಟ್ ವೈರಲ್
Image
ಭೋಜನ ವಿರಾಮದಂಚಿನಲ್ಲಿ ಎಡವಿದ ಟೀಂ ಇಂಡಿಯಾ

Yashasvi Jaiswal: ಆಂಗ್ಲರ ನಾಡಲ್ಲಿ ಇತಿಹಾಸ ನಿರ್ಮಿಸಿದ ಯಶಸ್ವಿ ಜೈಸ್ವಾಲ್: 58 ವರ್ಷಗಳ ದಾಖಲೆ ಉಡೀಸ್

ಆದರೆ, ಊಟದ ವಿರಾಮಕ್ಕೆ ಸ್ವಲ್ಪ ಮೊದಲು ಕೆಎಲ್ ರಾಹುಲ್ ಔಟಾದರು. ಕೆಎಲ್ ರಾಹುಲ್ 42 ರನ್​ಗಳ ಇನ್ನಿಂಗ್ಸ್ ಆಡಿದರು. ಇದಾದ ನಂತರ, ಪದಾರ್ಪಣೆ ಪಂದ್ಯದಲ್ಲಿ ಸಾಯಿ ಸುದರ್ಶನ್ ಖಾತೆ ತೆರೆಯದೆ ಕೇವಲ 4 ಎಸೆತಗಳಲ್ಲಿ ಔಟಾದರು. ಈ ರೀತಿಯಾಗಿ, ಟೀಮ್ ಇಂಡಿಯಾ ಮೊದಲ ಅವಧಿಯಲ್ಲಿ 2 ವಿಕೆಟ್‌ಗಳಿಗೆ 92 ರನ್ ಗಳಿಸಿತು, ಆದರೆ ಊಟದ ವಿರಾಮದ ನಂತರ, ನಾಯಕ ಶುಭ್​ಮನ್ ಗಿಲ್ ಯಶಸ್ವಿ ಅವರೊಂದಿಗೆ ಜವಾಬ್ದಾರಿ ವಹಿಸಿಕೊಂಡು ಟೀಮ್ ಇಂಡಿಯಾದ ಸ್ಕೋರ್ ಅನ್ನು 200 ರನ್‌ಗಳಿಗೆ ಕೊಂಡೊಯ್ದರು.

ಯಶಸ್ವಿ ಜೈಸ್ವಾಲ್ ಶತಕದ ದಾಖಲೆ:

ಯಶಸ್ವಿ ಜೈಸ್ವಾಲ್ ಎರಡನೇ ಸೆಷನ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಐದನೇ ಶತಕವನ್ನು ಪೂರೈಸಿದರು. ಇದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಅವರ ಮೂರನೇ ಶತಕವಾಗಿದೆ. ಈ ಶತಕದ ಮೂಲಕ ಜೈಸ್ವಾಲ್ ಅನೇಕ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿ ಒಂದು ವಿಶಿಷ್ಟ ದಾಖಲೆ ಕೂಡ ನಿರ್ಮಾಣವಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುವಾಗ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಐದನೇ ಆಟಗಾರ ಯಶಸ್ವಿ ಜೈಸ್ವಾಲ್. ಇದಲ್ಲದೆ, ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ ಭಾರತದ ಎರಡನೇ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೈಸ್ವಾಲ್ 23 ವರ್ಷ ಮತ್ತು 174 ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ