AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC 2025 final: ಸೋಲಿಲ್ಲದ ಸರದಾರರಾಗಿ ಸೋಲಿನ ಶಾಕ್ ನೀಡಿದ ಸೌತ್ ಆಫ್ರಿಕಾ

WTC 2025 final: ದಕ್ಷಿಣ ಆಫ್ರಿಕಾ ತಂಡವು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ದೊಡ್ಡ ಆಘಾತ ನೀಡಿದೆ. ಸ್ಟಾರ್ಕ್, ಹೇಜಲ್‌ವುಡ್ ಮತ್ತು ಕಮ್ಮಿನ್ಸ್‌ರಂತಹ ಆಟಗಾರರು ಫೈನಲ್‌ನಲ್ಲಿ ಎಂದಿಗೂ ಸೋಲನ್ನು ಕಂಡಿರಲಿಲ್ಲ. ಆದರೆ ಈ ಬಾರಿ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದಾರೆ. ಅಲ್ಲದೆ ದಕ್ಷಿಣ ಆಫ್ರಿಕಾ ತಂಡವು ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮೊದಲ ಬಾರಿಗೆ ಸೋಲಿಸಿದೆ.

ಪೃಥ್ವಿಶಂಕರ
|

Updated on: Jun 14, 2025 | 7:22 PM

Share
ಐಸಿಸಿ ಟೂರ್ನಿಗಳಲ್ಲಿ ಫೈನಲ್​ಗೇರಿತ್ತೇಂದರೆ ಟ್ರೋಫಿ ನನ್ನದೆ ಎಂಬಂತೆ ಬೀಗುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಶಾಕ್ ನೀಡುವಲ್ಲಿ ದಕ್ಷಿಣ ಆಫ್ರಿಕಾ ತಂಡ ಯಶಸ್ವಿಯಾಗಿದೆ. ಅದರಲ್ಲೂ ಇದುವರೆಗೂ ಒಂದೇ ಒಂದು ಫೈನಲ್ ಪಂದ್ಯದಲ್ಲಿ ಸೋಲಿನ ರುಚಿಯನ್ನೇ ಸವಿಯದ ಆಸ್ಟ್ರೇಲಿಯಾದ ಕೆಲವು ಅದೃಷ್ಟವಂತ ಆಟಗಾರರಿಗೆ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದೆ.

1 / 5
ಹೌದು.. ಆಸ್ಟ್ರೇಲಿಯಾ ತಂಡದಲ್ಲಿರುವ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್​ನಂತಹ ಆಟಗಾರರ ಅಡಿಯಲ್ಲಿ ಆಸ್ಟ್ರೇಲಿಯಾ ಎಂದಿಗೂ ಫೈನಲ್‌ನಲ್ಲಿ ಸೋತಿಲ್ಲ. ಸ್ಟಾರ್ಕ್ ಮತ್ತು ಹೇಜಲ್‌ವುಡ್ ಇದಕ್ಕೂ ಮೊದಲು ತಲಾ 7 ಫೈನಲ್‌ಗಳನ್ನು ಗೆದ್ದಿದ್ದರು. ಅಂದರೆ ಇವರಿಬ್ಬರು ಫೈನಲ್ ಪಂದ್ಯವನ್ನು ಆಡಿದರೆಂದರೆ ತಂಡವು ಪ್ರಶಸ್ತಿ ಗೆಲ್ಲುವುದು 100 ಪ್ರತಿಶತ ಖಚಿತವಾಗಿರುತ್ತಿತ್ತು. ಆದರೀಗ ಈ ಮೂವರು ಆಟಗಾರರು ತಂಡದಲ್ಲಿದ್ದರೂ ಗೆಲುವು ದಕ್ಕಲಿಲ್ಲ.

2 / 5
ಆದರೆ ಇದಕ್ಕೆ ತದ್ವಿರುದ್ಧವಾಗಿ ಆಫ್ರಿಕಾ ನಾಯಕ  ಟೆಂಬಾ ಬವುಮಾ ಟೆಸ್ಟ್ ನಾಯಕತ್ವದಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ದಾಖಲೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾಸ್ತವವಾಗಿ, ಡಬ್ಲ್ಯುಟಿಸಿ 2025 ರ ಫೈನಲ್ ಟೆಂಬಾ ಬವುಮಾ ಅವರ ನಾಯಕ ವೃತ್ತಿಜೀವನದ 10 ನೇ ಟೆಸ್ಟ್ ಆಗಿತ್ತು. ಈ 10 ಟೆಸ್ಟ್‌ಗಳಲ್ಲಿ, ಅವರು ಎಂದಿಗೂ ಸೋಲನ್ನು ಎದುರಿಸಿಲ್ಲ. ಬವುಮಾ ತಮ್ಮ ನಾಯಕತ್ವದಲ್ಲಿ 9 ಟೆಸ್ಟ್‌ಗಳನ್ನು ಗೆದ್ದಿದ್ದರೆ, 1 ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

3 / 5
ಇತ್ತ ಈ ಫೈನಲ್ ಸೋಲಿನೊಂದಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಹ್ಯಾಟ್ರಿಕ್ ಐಸಿಸಿ ಟ್ರೋಫಿ ಕನಸು ಭಗ್ನವಾಗಿದೆ. ಕಮ್ಮಿನ್ಸ್ ತಮ್ಮ ನಾಯಕತ್ವದಲ್ಲಿ 2021-23 ರ ಟೆಸ್ಟ್ ಚಾಂಪಿಯನ್​ಶಿಪ್ ಮತ್ತು 2023 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರಯ. ಇದೀಗ ಅವರಿಗೆ 2025 ರ ಡಬ್ಲ್ಯುಟಿಸಿ ಫೈನಲ್ ಗೆಲ್ಲುವ ಅವಕಾಶವಿತ್ತು. ಆದರೆ ಆಫ್ರಿಕಾ ತಂಡಕ್ಕೆ ಅದಕ್ಕೆ ಅವಕಾಶ ಕೊಡಲಿಲ್ಲ.

4 / 5
ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆಫ್ರಿಕಾ ತಂಡ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮೊದಲ ಬಾರಿಗೆ ಸೋಲಿಸಿದ ದಾಖಲೆ ಬರೆದಿದೆ. 1999ರ ವಿಶ್ವಕಪ್‌ನಲ್ಲಿ ಇಬ್ಬರ ನಡುವಿನ ಪಂದ್ಯವು ಸಮಬಲಗೊಂಡಿತ್ತು. 2007 ರ ವಿಶ್ವಕಪ್ ಘರ್ಷಣೆಯಲ್ಲಿ, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು. 2023 ರ ವಿಶ್ವಕಪ್‌ನಲ್ಲಿಯೂ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಆದರೆ, 2025ರ ಡಬ್ಲ್ಯುಟಿಸಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

5 / 5
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ

ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್

ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್

ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು

ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು

ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ

ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ

ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ

ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ

ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು