AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಭಾರತ- ಕಿವೀಸ್ ನಡುವೆ ಏಕದಿನ, ಟಿ20 ಸರಣಿ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

India-New Zealand Cricket Series 2026: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2026ರ ಏಕದಿನ ಮತ್ತು ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಜನವರಿ 11ರಿಂದ 31ರವರೆಗೆ ನಡೆಯಲಿರುವ ಈ ಸರಣಿಯಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳಿವೆ. ಹೈದರಾಬಾದ್, ರಾಜ್‌ಕೋಟ್, ಇಂದೋರ್ ಮುಂತಾದ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. 2026ರ ಟಿ20 ವಿಶ್ವಕಪ್‌ಗೆ ಇದು ಉತ್ತಮ ತಯಾರಿಯಾಗಲಿದೆ.

IND vs NZ: ಭಾರತ- ಕಿವೀಸ್ ನಡುವೆ ಏಕದಿನ, ಟಿ20 ಸರಣಿ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Ind Vs Nz
ಪೃಥ್ವಿಶಂಕರ
|

Updated on:Jun 14, 2025 | 9:51 PM

Share

ಪ್ರಸ್ತುತ ಟೀಂ ಇಂಡಿಯಾ (Team India) ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸದಲ್ಲಿದೆ. ಈ ನಡುವೆ ಬಿಸಿಸಿಐ (BCCI), ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ (Ind vs NZ) ತಂಡಗಳ ನಡುವೆ ಮುಂದಿನ ವರ್ಷ ನಡೆಯಲ್ಲಿರುವ ಏಕದಿನ ಹಾಗೂ ಟಿ20 ಸರಣಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಾಸ್ತವವಾಗಿ 2026 ರಲ್ಲಿ ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಮಿನಿ ವಿಶ್ವಸಮರಕ್ಕೆ ತಯಾರಿಯ ದೃಷ್ಟಿಯಿಂದ ಬಿಸಿಸಿಐ, ನ್ಯೂಜಿಲೆಂಡ್ ವಿರುದ್ಧ ಎರಡು ವೈಟ್ ಬಾಲ್ ಸರಣಿಗಳನ್ನು ಆಯೋಜಿಸುತ್ತಿದೆ.

ಭಾರತ- ಕಿವೀಸ್ ವೇಳಾಪಟ್ಟಿ ಪ್ರಕಟ

ಮೇಲೆ ಹೇಳಿದಂತೆ ಜನವರಿ 2026 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಜನವರಿ 11 ರಂದು ಬರೋಡದಲ್ಲಿ ನಡೆಯಲಿದೆ. ಹಾಗೆಯೇ ಈ ಸರಣಿಯ ಕೊನೆಯ ಪಂದ್ಯ ಜನವರಿ 31 ರಂದು ತಿರುವನಂತಪುರದಲ್ಲಿ ನಡೆಯಲಿದೆ. ಏಕದಿನ ಸರಣಿಯ ಸಮಯದಲ್ಲಿ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಸಹ ನೋಡಬಹುದು. ಆದಾಗ್ಯೂ, ಅದಕ್ಕೂ ಮೊದಲು ಟೀಂ ಇಂಡಿಯಾ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಸಹ ಆಡಬಹುದು. ಆದರೆ, ಈ ಸರಣಿಯ ಕುರಿತು ಬಿಸಿಸಿಐ ಇನ್ನೂ ಏನನ್ನು ಬಹಿರಂಗಪಡಿಸಿಲ್ಲ.

ಭಾರತ vs ನ್ಯೂಜಿಲೆಂಡ್ 2026 ವೇಳಾಪಟ್ಟಿ

ಏಕದಿನ ಸರಣಿ ವೇಳಾಪಟ್ಟಿ

  • ಮೊದಲನೇ ಏಕದಿನ ಪಂದ್ಯ: ಜನವರಿ 11, ಬರೋಡ
  • ಎರಡನೇ ಏಕದಿನ ಪಂದ್ಯ: ಜನವರಿ 14, ರಾಜ್‌ಕೋಟ್
  • ಮೂರನೇ ಏಕದಿನ ಪಂದ್ಯ: ಜನವರಿ 18, ಇಂದೋರ್

ವೇಳಾಪಟ್ಟಿ ಹೀಗಿದೆ

Screenshot 2025 06 14 213022

ಟಿ20 ಸರಣಿ ವೇಳಾಪಟ್ಟಿ

  • ಮೊದಲನೇ ಟಿ20: ಜನವರಿ 21, ನಾಗ್ಪುರ
  • ಎರಡನೇ ಟಿ20: ಜನವರಿ 23, ರಾಂಚಿ
  • ಮೂರನೇ ಟಿ20: ಜನವರಿ 25, ಗುವಾಹಟಿ
  • ನಾಲ್ಕನೇ ಟಿ20: ಜನವರಿ 28, ವೈಜಾಗ್
  • ಐದನೇ ಟಿ20: ಜನವರಿ 31, ತಿರುವನಂತಪುರ

IND vs NZ: ಭಾರತದ 8 ಸ್ಥಳಗಳಲ್ಲಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಕ್ರಿಕೆಟ್ ಫೈಟ್

ಟೀಂ ಇಂಡಿಯಾಗೆ ಉತ್ತಮ ಅವಕಾಶ

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025 ಟೂರ್ನಮೆಂಟ್‌ನಲ್ಲಿ, ಅನೇಕ ಭಾರತೀಯ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದರು. ಈ ಆಟಗಾರರಲ್ಲಿ ಕೆಲವರನ್ನು ಟಿ20 ವಿಶ್ವಕಪ್ 2026 ಟೂರ್ನಮೆಂಟ್‌ಗಾಗಿ ಭಾರತ ತಂಡದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅವರು ಕೂಡ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಟಿ20 ವಿಶ್ವಕಪ್​ಗೆ ತಮ್ಮ ತಯಾರಿಯನ್ನು ಪೂರ್ಣಗೊಳಿಸಿಕೊಳ್ಳಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 pm, Sat, 14 June 25