ದೆಹಲಿ ಅಕ್ಟೋಬರ್ 06: ಆನ್‌ಲೈನ್ ಕಲಿಕೆ ವೇದಿಕೆ ಫಿಸಿಕ್ಸ್‌ವಾಲಾ (PhysicsWallah )ಶಿಕ್ಷಕರೊಬ್ಬರು ಲೈವ್-ಸ್ಟ್ರೀಮಿಂಗ್ (live-streaming) ತರಗತಿ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದೆ. ಈ ವೇಳೆ ಮತ್ತೋರ್ವ ವಿದ್ಯಾರ್ಥಿ ಲೈವ್ ಸೆಷನ್ ವೀಕ್ಷಿಸುತ್ತಾ, ವಿಡಿಯೊ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ್ದಾನೆ. 9 ಸೆಕೆಂಡುಗಳ ವೈರಲ್ ವಿಡಿಯೊದಲ್ಲಿ, ಶಿಕ್ಷಕ ಕಪ್ಪು ಹಲಗೆಯ ಮುಂದೆ ನಿಂತು ತರಗತಿಗೆ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಏಕಾಏಕಿ ಅವರ ಮೇಲೆ ದಾಳಿ ಮಾಡಿ ಎರಡು ಬಾರಿ ಚಪ್ಪಲಿಯಿಂದ ಹೊಡೆದಿದ್ದಾನೆ. ಹಲವಾರು ಖಾತೆಗಳು ಅದನ್ನು ಮಾಡಿದ ನಂತರ ವಿಡಿಯೊ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ.
ಅಂದಹಾಗೆ ವಾಗ್ವಾದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ಕಳೆದ ತಿಂಗಳು, ಈ ಸಂಸ್ಥೆಯ ಶಿಕ್ಷಕರೊಬ್ಬರು ಆನ್‌ಲೈನ್ ಪಾಠದ ಸಮಯದಲ್ಲಿ ಮಾಡಿದ ಜಾತಿವಾದಿ ನಿಂದನೆಗಾಗಿ ಕ್ಷಮೆಯಾಚಿಸಿದ್ದರು. ತಮ್ಮ ಅಧಿಕೃತ ಫಿಸಿಕ್ಸ್ ವಾಲಾ ಖಾತೆಯಲ್ಲಿ ಶಿಕ್ಷಕ ಮನೀಶ್ ರಾಜ್ ಅವರ ವಿಡಿಯೊ ಹೇಳಿಕೆಯನ್ನು ಅಪ್‌ಲೋಡ್ ಮಾಡಿದ್ದು ಕಂಪನಿಯ ಪ್ರಮುಖ ಮೌಲ್ಯಗಳಲ್ಲಿ ಒಳಗೊಳ್ಳುವಿಕೆ ಎಂದು ಒತ್ತಿ ಹೇಳಿದರು.
In Live Class Student Slaps Physics Wallah Teacher With A Slipper.#teachersday2023 #TeachersDay #StudentsProtest#teacher #TEACHers #TeacherDay #Physicswallah pic.twitter.com/FDDuYgTobC
— Aanchal (@SweetLilQueen) October 6, 2023
ಈ ಹಿಂದೆ ವೈರಲ್ ಆದ ವಿಡಿಯೊ ತುಣುಕೊಂದರಲ್ಲಿ ಶಿಕ್ಷಕ ಮನೀಶ್ ರಾಜ್ “ನಾನೇಕೆ ಈ ವೃತ್ತಿಯನ್ನು ತೆಗೆದುಕೊಂಡೆ? ಕೆಲವೊಮ್ಮೆ, ನಾನು ಇದನ್ನು ಮಾಡಲು ವಿಷಾದಿಸುತ್ತೇನೆ (ಕಲಿಸಲು). ದೇವರೇ, ನೀನು ನನ್ನನ್ನು ಚಮ್ಮಾರ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ನಾನು ಬೂಟುಗಳನ್ನು ಪಾಲಿಶ್ ಮಾಡುತ್ತಿದ್ದೆ. ಆಗ ನನ್ನ ಬದುಕು ನೆಮ್ಮದಿಯಾಗಿರುತ್ತಿತ್ತು ಎಂದು ಹೇಳಿದ್ದರು.
ದಲಿತ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದ ನಮ್ಮ ಶಿಕ್ಷಕರೊಬ್ಬರ ಅನುಚಿತ ಟೀಕೆಗಳಿಗಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ. ಸಂಬಂಧಪಟ್ಟ ಶಿಕ್ಷಕರು ಔಪಚಾರಿಕವಾಗಿ ಕ್ಷಮೆಯಾಚಿಸಿದ್ದಾರೆ. ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ನಮ್ಮ ಪ್ರಮುಖ ಮೌಲ್ಯಗಳಲ್ಲಿ ಒಂದಾಗಿದೆ ಮತ್ತು ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ನೋಯ್ಡಾ ಮೂಲದ ಕಂಪನಿ ನಂತರ ಪೋಸ್ಟ್‌ನಲ್ಲಿ ತಿಳಿಸಿತ್ತು.
ಇದನ್ನೂ ಓದಿ: ಆಗ್ರಾ: ಕೋಚಿಂಗ್ ಸೆಂಟರ್ ಎದುರು ಶಿಕ್ಷಕರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿಗಳು
ಈ ವರ್ಷದ ಮಾರ್ಚ್‌ನಲ್ಲಿ ಫಿಸಿಕ್ಸ್‌ವಾಲಾ ಶಿಕ್ಷಕ ಪಂಕಜ್ ಸಿಜೈರ್ಯ ಅವರು ಮೂವರು ಶಿಕ್ಷಕರು ತರುಣ್ ಕುಮಾರ್, ಮನೀಶ್ ದುಬೆ ಮತ್ತು ಸರ್ವೇಶ್ ದೀಕ್ಷಿತ್ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು. ಅಲಖ್ ಪಾಂಡೆ ನೇತೃತ್ವದ ಕಂಪನಿಯೊಂದಿಗಿನ ನಿಲುವಿನ ವ್ಯತ್ಯಾಸಗಳನ್ನು ಉಲ್ಲೇಖಿಸಿ ಮತ್ತು ವಾತಾವರಣವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಲ್ಲ ಎಂದು ಶಿಕ್ಷಕರು ವೇದಿಕೆಯನ್ನು ತೊರೆದಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ