AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Scorpion bite: ಶಾಲಾ ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕುಟುಕಿ ವಿದ್ಯಾರ್ಥಿ ಸಾವು

ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ಕೈಹಾಕಿದ್ದಾನೆ. ಅಷ್ಟೇ... ಚೇಳೊಂದು ಯಾವುದೋ ಮಾಯದಲ್ಲಿ ಅಮಾಯಕ ರವಿ ಕೈಗೆ ಕುಟುಕಿದೆ (Scorpion Sting). ತಕ್ಷಣ ಅವ ಭಯದಿಂದ ಚೀರಾಡಿದ್ದಾನೆ. ಸಹ ವಿದ್ಯಾರ್ಥಿಗಳು ಭಯಭೀತರಾದರು... ಈ ಘಟನೆಯಿಂದ ತತ್ತರಗೊಂಡ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ತೋಟ ರಾಮಕೃಷ್ಣ ಅವರುಗಳು ತಕ್ಷಣ ರವಿಕಿರಣವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಇತ್ತ ಚೇಳನ್ನು ಕೊಂದಿದ್ದಾರೆ.

Scorpion bite: ಶಾಲಾ ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕುಟುಕಿ ವಿದ್ಯಾರ್ಥಿ ಸಾವು
ಚೇಳು ಕುಟುಕಿ ವಿದ್ಯಾರ್ಥಿ ಸಾವು
Follow us
ಸಾಧು ಶ್ರೀನಾಥ್​
|

Updated on:Oct 06, 2023 | 2:16 PM

ಚೇಳುಗಳ ಬಗ್ಗೆ ಸದಾ ಜಾಗ್ರತೆಯಿಂದ ಇರಬೇಕು. ಅವುಗಳ ಬಗ್ಗೆ ಯಾಮಾರಿದರೆ ಕಷ್ಟಕಷ್ಟ. ಕೆಲವು ಚೇಳುಗಳಂತೂ ತುಂಬಾ ವಿಷಪೂರಿತ. ಹಾವು ಕಚ್ಚಿದಂತೆ ಚೇಳು ಕಚ್ಚುವುದೂ (Scorpion bite) ಅಪಾಯಕಾರಿ. ಅವು ಕುಟುಕಿದ ತಕ್ಷಣ.. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಇಲ್ಲವೇ ಪ್ರಾಣಕ್ಕೆ ಸಂಚಕಾರ. ನಾಟಿ ವೈದ್ಯ ಅದೂ ಇದೂ ಅಂತಾ ನಿರ್ಲಕ್ಷ್ಯ ಮಾಡಿದರೆ.. ಅದರ ಫಲ ಅನುಭವಿಸಬೇಕಾಗುತ್ತೆ.

ಅದು ಪ್ರಕಾಶಂ ಜಿಲ್ಲೆಯಲ್ಲಿರುವ (Prakasam District) ರಾಯವರಂ ಜಿಲ್ಲಾ ಪರಿಷತ್ ಹೈಸ್ಕೂಲ್. ಸಮಯ ಸಾಯಂಕಾಲ 4 ಗಂಟೆ… ಕ್ಲಾಸುಗಳು ಮುಗಿದಿವೆ… ಎಲ್ಲೆಡೆ ಪ್ರಶಾಂತತೆ ನೆಲೆಸಿದ್ದ ಸಮಯ ಅದು. ಶಾಲೆ ಮುಗಿಯಿತೆಂದು ಪುಸ್ತಕಗಳಿದ್ದ ಬ್ಯಾಗನ್ನು ಸರಿಪಡಿಸಿಕೊಂಡು ಅದನ್ನು ಭುಜಕ್ಕೆ ನೇತುಹಾಕಿಕೊಂಡು ಇನ್ನೇನು ಭರ್​​ ಅಂತಾ ಮನೆಯ ಕಡೆಗೆ ಹೋಗಬೇಕು. ಆದರೆ ಅಷ್ಟರಲ್ಲೇ ಸರಿಯಾಗಿ 9ನೇ ತರಗತಿಯ ವಿದ್ಯಾರ್ಧಿ ರವಿಕಿರಣನಿಗೆ ಮರಣಶಾಸನ ಎದುರಾಗಿದೆ.

ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ಕೈಹಾಕಿದ್ದಾನೆ. ಅಷ್ಟೇ… ಚೇಳೊಂದು ಯಾವುದೋ ಮಾಯದಲ್ಲಿ ಅಮಾಯಕ ರವಿ ಕೈಗೆ ಕುಟುಕಿದೆ (Scorpion Sting). ತಕ್ಷಣ ಅವ ಭಯದಿಂದ ಚೀರಾಡಿದ್ದಾನೆ. ಸಹ ವಿದ್ಯಾರ್ಥಿಗಳು ಭಯಭೀತರಾದರು… ಈ ಘಟನೆಯಿಂದ ತತ್ತರಗೊಂಡ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ತೋಟ ರಾಮಕೃಷ್ಣ ಅವರುಗಳು ತಕ್ಷಣ ರವಿಕಿರಣವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಇತ್ತ ಚೇಳನ್ನು ಕೊಂದಿದ್ದಾರೆ.

Also read: ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್​ ಕಾರಣವಾಯ್ತಾ?

ಆದರೆ ರವಿಕಿರಣನ ಪರಿಸ್ಥಿತಿ ವಿಷಮಿಸಿದೆ. ಅಕ್ಷರಶಃ ಚೇಳಿನ ವಿಷ ಅವನ ಮೈಯೊಳಗೆ ಇಳಿಯುತ್ತಾ ಸಾಗಿದೆ. ಆದರೂ ಗುಂಟೂರು ಜಿಜಿಎಚ್‌ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಕಿರಣ ಗುರುವಾರ ಅಸುನೀಗಿದ್ದಾನೆ. ಘಟನೆಯಿಂದ ತತ್ತರಗೊಂಡ ರವಿಕಿರಣನ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

ಪ್ರಕಾಶಂ ಜಿಲ್ಲೆ ಮಾರ್ಕಾಪುರಂ ಮಂಡಲ ರಾಯವರಂ ಜಿ.ಪಂ. ಹೈಸ್ಕೂಲ್‌ನಲ್ಲಿ ಚೇಳು ಕುಟುಕಿ ವಿದ್ಯಾರ್ಥಿ ರವಿಕಿರಣ (14) ಸಾವನ್ನಪ್ಪಿದ ಘಟನೆ ನಡೆದಿದೆ. ಮಾರ್ಕಾಪುರದ ನಾಯ್ಡುಪಲ್ಲಿಯಲ್ಲಿ ದಲಿತ ಕಾಲೋನಿ ನಿವಾಸಿ. ವಿದ್ಯಾರ್ಥಿ ಪೋಷಕರು ರಾಮಕೋಟೇಶ್ವರ ರಾವ್​​, ಕೊಂಡಮ್ಮ ದಂಪತಿಯ ಮೂವರು ಮಕ್ಕಳ ಪೈಕಿ ರವಿಕಿರಣ ಕೊನೆಯ ಮಗ. ಕೋಟೆೇಶ್ವರರಾವ್​ ಶಿಕ್ಷಕರಾಗಿ ಜೀವನ ಸಾಗಿಸುತ್ತಿದ್ದಾರೆ. ಮಾರ್ಕಾಪುರದ ರೂರಲ್ ಎಸ್ಸೈ ವೆಂಕಟೇಶ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Fri, 6 October 23

ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ