Azad Hind Formation Anniversary: ಇಂದು ‘ಆಜಾದ್ ಹಿಂದ್ ಸರ್ಕಾರ’ ರಚನೆಯ ವಾರ್ಷಿಕೋತ್ಸವ; ಈ ಕುರಿತ ಮಾಹಿತಿ ಇಲ್ಲಿದೆ

| Updated By: shivaprasad.hs

Updated on: Oct 21, 2021 | 12:35 PM

Subhas Chandra Bose: ಇಂದು (ಅಕ್ಟೋಬರ್ 21) ‘ಆಜಾದ್ ಹಿಂದ್ ಗವರ್ನಮೆಂಟ್​​’ನ ಸ್ಥಾಪನಾ ದಿನ. ಈ ಹಿನ್ನೆಲೆಯಲ್ಲಿ ಅದರ ಕುರಿತ ಕೆಲವು ಕುತೂಹಲಕರ ಮಾಹಿತಿಗಳು ಇಲ್ಲಿವೆ.

Azad Hind Formation Anniversary: ಇಂದು ‘ಆಜಾದ್ ಹಿಂದ್ ಸರ್ಕಾರ’ ರಚನೆಯ ವಾರ್ಷಿಕೋತ್ಸವ; ಈ ಕುರಿತ ಮಾಹಿತಿ ಇಲ್ಲಿದೆ
ಸುಭಾಷ್ ಚಂದ್ರ ಬೋಸ್ (ಸಂಗ್ರಹ ಚಿತ್ರ)
Follow us on

ಪ್ರತಿ ವರ್ಷ ಅಕ್ಟೋಬರ್ 21ರಂದು ‘ಆಜಾದ್ ಹಿಂದ್ ಗವರ್ನಮೆಂಟ್​’ನ ವಾರ್ಷಿಕೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಮೊದಲ ತಾತ್ಕಾಲಿಕ ಸ್ವತಂತ್ರ ಸರ್ಕಾರವಾದ ‘ಆಜಾದ್ ಹಿಂದ್ ಸರ್ಕಾರ’ ಘೋಷಣೆಯಾಗಿತ್ತು. 1942ರಲ್ಲಿ ಮೋಹನ್ ಸಿಂಗ್ ಅವರಿಂದ ಸ್ಥಾಪಿತವಾದ ‘ಆಜಾದ್ ಹಿಂದ್ ಫೌಜ್’ ಅಥವಾ ‘ಇಂಡಿಯನ್ ನ್ಯಾಷನಲ್ ಆರ್ಮಿ’ (ಐಎನ್​ಎ) ನಂತರ ಸುಭಾಷ್ ಚಂದ್ರ ಬೋಸ್​ರಿಂದ 21 ಅಕ್ಟೋಬರ್ 1943ರಲ್ಲಿ ಮರುಸ್ಥಾಪನೆಗೊಂಡಿತು. ಜಪಾನ್, ಕ್ರೊವೇಷಿಯಾ, ಜರ್ಮನಿ, ಇಟಲಿ, ಬರ್ಮಾ ಸೇರಿದಂತೆ ಹಲವು ದೇಶಗಳು ಈ ಸರ್ಕಾರಕ್ಕೆ ಮಾನ್ಯತೆ ನೀಡಿದ್ದವು. 

ಆಜಾದ್ ಹಿಂದ್ ಸರ್ಕಾರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೇತಾಜಿ ಮತ್ತು ಅವರ ಆಜಾದ್ ಹಿಂದ್ ಫೌಜ್ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ:

  • ಸುಭಾಷ್ ಚಂದ್ರ ಬೋಸ್ ಬ್ರಿಟಿಷರೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರದ ಕಾರಣ, ಅವರು ಸ್ವಾತಂತ್ರ್ಯ ಚಳುವಳಿಗೆ ಸೇರಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ಮಹಾತ್ಮ ಗಾಂಧಿ ಮತ್ತು ಜವಾಹರ್ ಲಾಲ್ ನೆಹರು ಅವರಂತಹ ಪ್ರಮುಖ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದರೂ, ಬೋಸ್ ಪ್ರಮುಖ ಸೈದ್ಧಾಂತಿಕ ಭಿನ್ನತೆಗಳನ್ನು ಹೊಂದಿದ್ದರು.
  • ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ನಾಯಕರಾಗಿದ್ದ ಬೋಸ್ 1938 ರಲ್ಲಿ ಪಕ್ಷದ ಅಧ್ಯಕ್ಷರಾದರು. ನಂತರ ಗಾಂಧಿ ಮತ್ತು ಪಕ್ಷದ ಹೈಕಮಾಂಡ್ ಜೊತೆ ಭಿನ್ನಾಭಿಪ್ರಾಯ ಹೊಂದಿದ ನಂತರ ಅವರನ್ನು ಉಚ್ಚಾಟಿಸಲಾಯಿತು. ಬೋಸ್ ನಿಲುವು ಗಾಂಧಿಯವರ ಅಹಿಂಸೆಯ ವಿಧಾನಗಳಿಗಿಂತ ಭಿನ್ನವಾಗಿತ್ತು. ಹಾಗೂ ಅವರು ವಸಾಹತುಶಾಹಿ ಆಡಳಿತಗಾರರ ವಿರುದ್ಧ ಯುದ್ಧ ಮಾಡಲು ಬಯಸಿದ್ದರು.
  • ಕ್ಯಾಪ್ಟನ್-ಜನರಲ್ ಮೋಹನ್ ಸಿಂಗ್ ಅವರು 1942 ರಲ್ಲಿ ಸಿಂಗಾಪುರದಲ್ಲಿ ಬ್ರಿಟಿಷ್ ಭಾರತೀಯ ಸೇನೆಯ ಭಾರತೀಯ ಖೈದಿಗಳೊಂದಿಗೆ ಆಜಾದ್ ಹಿಂದ್ ಫೌಜ್ ಅನ್ನು ಸ್ಥಾಪಿಸಿದರು. ಆದರೆ ನಂತರ ಅದನ್ನು ವಿಸರ್ಜಿಸಲಾಯಿತು. ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿರುವ ಭಾರತೀಯರ ಸಹಾಯದಿಂದ ಬೋಸ್ ಮತ್ತೆ ಐಎನ್ಎಯನ್ನು ರಚಿಸಿದರು ಮತ್ತು ಹೆಮ್ಮೆಯಿಂದ ಅದರ ಜವಾಬ್ದಾರಿಯನ್ನು ವಹಿಸಿಕೊಂಡರು.
  • 1944 ರಲ್ಲಿ ಬ್ರಿಟಿಷ್ ಪಡೆಗಳೊಂದಿಗೆ ಕೊಹಿಮಾ ಮತ್ತು ಇಂಫಾಲ್ ಸುತ್ತಮುತ್ತ ಐಎನ್​ಎ ಯುದ್ಧ ನಡೆಸಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ವಿರುದ್ಧ ಬ್ರಿಟನ್ ಸೇನೆ ಕಷ್ಟಪಡುತ್ತಿತ್ತು. ನೇತಾಜಿ ಜಂಟಿ ಸೇನೆಗಳೊಂದಿಗೆ ಮುನ್ನಡೆಸಿದ ಯುದ್ಧವು, ‘ಬ್ರಿಟಿಷ್ ಸೇನೆ ಭಾಗಿಯಾದ ಶ್ರೇಷ್ಠ ಯುದ್ಧಗಳಲ್ಲಿ ಒಂದು’ ಎಂದು ಲಂಡನ್​ನಲ್ಲಿರುವ ರಾಷ್ಟ್ರೀಯ ಸೇನಾ ಸಂಗ್ರಹಾಲಯದ ದಾಖಲೆಗಳು ಹೇಳುತ್ತವೆ.

ಇದನ್ನೂ ಓದಿ:

ಅಮೃತ ಮಹೋತ್ಸವ ವಿಶೇಷ: ಸುಭಾಷ್ ಚಂದ್ರ ಬೋಸ್​ರಿಗೆ ಗೌರವ ಸಲ್ಲಿಸಲೆಂದು ಕದಂ ಕದಂ ಬಢಾಯೆ ಜಾ ಹಾಡಲಿದ್ದಾರೆ ವಿದ್ಯಾರ್ಥಿಗಳು

100 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿಕೆ: ಭಾರತದ ಬದ್ಧತೆ, ನಾಯಕತ್ವವನ್ನು ಶ್ಲಾಘಿಸಿದ ಡಬ್ಲ್ಯೂಎಚ್​ಒದ ಪೂನಂ ಖೇತ್ರಪಾಲ್​ ಸಿಂಗ್​

Amazon Prime: ಪ್ರೈಮ್ ಸದಸ್ಯರಿಗೆ ಬಿಗ್ ಶಾಕ್ ನೀಡಿದ ಅಮೆಜಾನ್: ವಾರ್ಷಿಕ ಯೋಜನೆಯಲ್ಲಿ ದೊಡ್ಡ ಬದಲಾವಣೆ