Amazon Prime: ಪ್ರೈಮ್ ಸದಸ್ಯರಿಗೆ ಬಿಗ್ ಶಾಕ್ ನೀಡಿದ ಅಮೆಜಾನ್: ವಾರ್ಷಿಕ ಯೋಜನೆಯಲ್ಲಿ ದೊಡ್ಡ ಬದಲಾವಣೆ
Amazon Prime Annual Subscription Plan: ಅಮೆಜಾನ್ ಪ್ರೈಮ್ ತನ್ನ ವಾರ್ಷಿಕ ಯೋಜನೆಯಲ್ಲಿ ಏರಿಕೆ ಮಾಡಲಿದೆ ಎಂದು ವರದಿಯಾಗಿದೆ. ಬರೋಬ್ಬರಿ 500 ರೂ. ಹೆಚ್ಚಳ ಮಾಡಲಿದೆಯಂತೆ. ಅಮೆಜಾನ್ ಪ್ರೈಮ್ನ ಸದ್ಯದ ವಾರ್ಷಿಕ ಯೋಜನೆ 999 ರೂ. ಆಗಿದೆ.
ಭಾರತದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ (Amazon) ತನ್ನ ಪ್ರೈಮ್ ಸದಸ್ಯತ್ವವನ್ನು ಭಾರತೀಯರಿಗಾಗಿ ಮತ್ತೆ ಬದಲಾಯಿಸಲು ಮುದಾಗಿದೆ. ಈ ವರ್ಷದ ಆರಂಭದಲ್ಲಿ ಅಮೆಜಾನ್ ಪ್ರೈಮ್ (Amazon Prime) ತನ್ನ ಮಾಸಿಕ ಯೋಜನೆಯನ್ನು ತೆಗೆದುಹಾಕಿತ್ತು. ಬಳಿಕ ಇತ್ತೀಚೆಗಷ್ಟೆ 129 ರೂಪಾಯಿಗಳ ಒಂದು ತಿಂಗಳ ಪ್ರೈಮ್ ಚಂದಾದಾರಿಕೆಯನ್ನು ಮರಳಿ ತಂದಿತ್ತು. ಇದರ ಬೆನ್ನಲ್ಲೇ ಅಮೆಜಾನ್ ಮತ್ತೊಂದು ಆಘಾತಕಾರಿ ಸುದ್ದಿ ನೀಡಿದೆ. ತನ್ನ ವಾರ್ಷಿಕ ಯೋಜನೆಯಲ್ಲಿ (Amazon Prime Annual Subscription Plan) ದೊಡ್ಡ ಬದಲಾವಣೆ ತರಲು ಮುಂದಾಗಿದೆ.
ಹೌದು, ಅಮೆಜಾನ್ ಪ್ರೈಮ್ ತನ್ನ ವಾರ್ಷಿಕ ಯೋಜನೆಯಲ್ಲಿ ಏರಿಕೆ ಮಾಡಲಿದೆ ಎಂದು ವರದಿಯಾಗಿದೆ. ಬರೋಬ್ಬರಿ 500 ರೂ. ಹೆಚ್ಚಳ ಮಾಡಲಿದೆಯಂತೆ. ಅಮೆಜಾನ್ ಪ್ರೈಮ್ನ ಸದ್ಯದ ವಾರ್ಷಿಕ ಯೋಜನೆ 999 ರೂ. ಆಗಿದೆ. ಇದು ಇನ್ನು ಕೆಲವೇ ದಿನಗಳಲ್ಲಿ 1,499 ರೂ. ಗೆ ಏರಿಕೆಯಾಗಲಿದೆಯಂತೆ.
ಅಮೆಜಾನ್ ಪ್ರೈಮ್ ವಿಡಿಯೋದ ಪ್ಲಾನ್ ಅನ್ನು ನೀವು ಆಯ್ದ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ಮಾತ್ರ ಪಡೆಯಬಹುದು. RBI ಮಾರ್ಗಸೂಚಿಗಳನ್ನು ಅನುಸರಿಸದ ಯಾವುದೇ ಅಥವಾ ಎಲ್ಲಾ ಬ್ಯಾಂಕುಗಳ ಬಳಕೆದಾರರು ಅಮೆಜಾನ್ ನ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ತಮ್ಮ ಸದಸ್ಯತ್ವವನ್ನು ರದ್ದುಗೊಳಿಸಲು ಮರೆಯುವ ಗ್ರಾಹಕರಿಗೆ ಈ ಯೋಜನೆ ಉತ್ತಮವಾಗಿದೆ. RBI ಹೊಸ ಮಾರ್ಗಸೂಚಿಗಳು ಅಕ್ಟೋಬರ್ 1, 2021 ರಿಂದ ಜಾರಿಗೆ ಬಂದಿದೆ.
ಅಮೆಜಾನ್ ಪ್ರೈಮ್ ಚಂದಾದಾರಿಕೆಗಳಿಗಾಗಿ ಮೂರು ಚಂದಾದಾರಿಕೆಯನ್ನು ಪಟ್ಟಿ ಮಾಡಿದೆ- ವಾರ್ಷಿಕ ಯೋಜನೆ 999 ರೂ. ಮೂರು ತಿಂಗಳ ಯೋಜನೆ 329 ರೂ. ಮತ್ತು ಮಾಸಿಕ ಯೋಜನೆ 129 ರೂ. ಪರಿಚಯಿಸಿದೆ. ವಾರ್ಷಿಕ ಮತ್ತು ಮೂರು ತಿಂಗಳ ಯೋಜನೆಯನ್ನು ಎಲ್ಲಾ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೂಲಕ ಮಾಡಬಹುದು ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು. ಆದರೆ 129 ರೂ. ವಿನ ಯೋಜನೆಯನ್ನು ಕ್ರೆಡಿಟ್ ಕಾರ್ಡ್ ಅಥವಾ ಆಯ್ದ ಡೆಬಿಟ್ ಕಾರ್ಡ್ ಮೂಲಕ ಮಾತ್ರ ಖರೀದಿಸಬಹುದು.
ಅಮೆಜಾನ್ನ ನಿಯಮಗಳು ಮತ್ತು ಷರತ್ತುಗಳ ಪುಟವು ಮಾಸಿಕ ಪ್ರೈಮ್ ಚಂದಾದಾರಿಕೆಯನ್ನು ಆರ್ಬಿಐನ ಇ-ಆದೇಶದ ಮಾರ್ಗಸೂಚಿಗಳನ್ನು ಅನುಸರಿಸಿದ ಬ್ಯಾಂಕುಗಳ ಮೂಲಕ ಖರೀದಿಸಬಹುದು ಎಂದು ಹೇಳಿದೆ. ಆರ್ಬಿಐನ ಮಾರ್ಗಸೂಚಿಗಳನ್ನು ಅನುಸರಿಸದ ಬ್ಯಾಂಕುಗಳು ಸ್ವಯಂಚಾಲಿತ ಪಾವತಿಗಳಿಗಾಗಿ ಯಾವುದೇ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ಈ ಮಾರ್ಗಸೂಚಿಗಳಿಂದಾಗಿ, ಅಮೆಜಾನ್ ಮುಂದಿನ ಸೂಚನೆ ಬರುವವರೆಗೂ ಅಮೆಜಾನ್ ಪ್ರೈಮ್ ಉಚಿತ ಪ್ರಯೋಗಕ್ಕಾಗಿ ಹೊಸ ಸದಸ್ಯರ ಸೈನ್-ಅಪ್ಗಳನ್ನು ನಿಲ್ಲಿಸಿದೆ.
Online Bill Payment: ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಈಗ ಮತ್ತಷ್ಟು ಸುಲಭ: ಜಸ್ಟ್ ಹೀಗೆ ಮಾಡಿ
Nokia XR20: 48MP ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ನೋಕಿಯಾದಿಂದ XR20 ಸ್ಮಾರ್ಟ್ಫೋನ್ ರಿಲೀಸ್
(Amazon has announced its plans to increase the cost of Amazon Prime membership in India by 50 percent)