Nokia XR20: 48MP ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ನೋಕಿಯಾದಿಂದ XR20 ಸ್ಮಾರ್ಟ್​ಫೋನ್ ರಿಲೀಸ್

Nokia XR20: 48MP ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ನೋಕಿಯಾದಿಂದ XR20 ಸ್ಮಾರ್ಟ್​ಫೋನ್ ರಿಲೀಸ್
Nokia XR20

ಭಾರತದಲ್ಲಿ ನೋಕಿಯಾ XR20 ಸ್ಮಾರ್ಟ್‌ಫೋನ್‌ ಕೇವಲ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಸ್ನಾಪ್‌ಡ್ರಾಗನ್ ಪ್ರೊಸೆಸರ್‌, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಸೇರಿದಂತೆ ಇತರೆ ಫೀಚರ್​ಗಳಿಂದಲೂ ಕೂಡಿದೆ.

TV9kannada Web Team

| Edited By: Vinay Bhat

Oct 19, 2021 | 2:48 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್​ಸಂಗ್ (Samsung), ರಿಯಲ್ ಮಿ (Realme) ಮೊಬೈಲ್​ಗಳ ಹೊಡೆತಕ್ಕೆ ಸಿಲುಕಿ ನೆಲಕಚ್ಚಿರುವ ನೋಕಿಯಾ ಕಂಪನಿ ಈಗೀಗ ಆಕರ್ಷಕ ಫೀಚರ್​ಗಳುಳ್ಳ ಫೋನುಗಳನ್ನು ಬಿಡುಗಡೆ ಮಾಡಿ ಯಶಸ್ಸು ಸಾಧಿಸುತ್ತಿದೆ. ಇದೀಗ ಭಾರತದಲ್ಲಿ ಹೊಸ ನೋಕಿಯಾ ಎಕ್ಸ್​ಆರ್​ 20 (Nokia XR20) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್​ಫೋನ್ ಪ್ರಮುಖವಾಗಿ 55-ಡಿಗ್ರಿಗಳಿಂದ 20-ಡಿಗ್ರಿ ಸೆಲ್ಸಿಯಸ್‌ ತಾಪಾಮಾನದ ನೀರಿನಲ್ಲಿದ್ದರೂ ಯಾವುದೇ ಹಾನಿಯಾಗುವುದಿಲ್ಲ. ಸ್ನಾಪ್‌ಡ್ರಾಗನ್ ಪ್ರೊಸೆಸರ್‌, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಸೇರಿದಂತೆ ಇತರೆ ಫೀಚರ್​ಗಳಿಂದಲೂ ಕೂಡಿದೆ.

ಭಾರತದಲ್ಲಿ ನೋಕಿಯಾ XR20 ಸ್ಮಾರ್ಟ್‌ಫೋನ್‌ ಕೇವಲ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 46,999 ರೂ. ಬೆಲೆ ಹೊಂದಿದೆ. ಈ ಫೋನ್ ಇದೇ ಅಕ್ಟೋಬರ್ 20 ರಿಂದ ಗ್ರಾನೈಟ್ ಮತ್ತು ಅಲ್ಟ್ರಾ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಫ್ರೀ ಆರ್ಡರ್‌ಗೆ ಲಭ್ಯವಾಗಲಿದೆ. ಅಕ್ಟೋಬರ್ 30 ರಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ನೋಕಿಯಾ.ಕಾಮ್ ಮತ್ತು ರಿಟೇಲ್‌ ಸ್ಟೋರ್‌ಗಳಲ್ಲಿ ಮಾರಾಟವಾಗಲಿದೆ.

ನೋಕಿಯಾ XR20 ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಫುಲ್‌-ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 SoC ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ನಲ್ಲಿ ಸ್ಟಾಕ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಹೊಂದಿದೆ. ಇದರಲ್ಲಿ ಸ್ಪೀಡ್‌ವಾರ್ಪ್ ಮೋಡ್‌ನೊಂದಿಗೆ ಮೊದಲೇ ಲೋಡ್ ಆಗಿದ್ದು, ಇದು ಮಾಂಟೇಜ್‌ನಲ್ಲಿ ಮಲ್ಟಿ ಈವೆಂಟ್ಸ್‌ ಅನ್ನು ಸೆರೆಹಿಡಿಯಲು ನಿಮಗೆ ಅನುವು ಮಾಡಿಕೊಡುತ್ತದೆ. ಜೊತೆಗೆ ಫೋನ್ ಆಕ್ಷನ್ ಕ್ಯಾಮ್ ಮೋಡ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಕ್ಯಾಮೆರಾ ಸೆಟಪ್‌ Zeiss ಆಪ್ಟಿಕ್ಸ್‌ ಅನ್ನು ಒಳಗೊಂಡಿದೆ.

4,630mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು18W ವೈರ್ಡ್ ಮತ್ತು 15W ವೈರ್‌ಲೆಸ್ (Qi ಸ್ಟ್ಯಾಂಡರ್ಡ್) ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ 6, ಬ್ಲೂಟೂತ್ v5.1, ಯುಎಸ್‌ಬಿ ಟೈಪ್‌-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ವಿಂಡ್‌ ನಾಯ್ಸ್‌ ಕ್ಯಾನ್ಸಲೇಶನ್‌ ಹೊಂದಿರುವ OZO ಪ್ರಾದೇಶಿಕ ಆಡಿಯೋ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ. ಇದು ವಿಡಿಯೋ ರೆಕಾರ್ಡಿಂಗ್ ಹೆಚ್ಚಿಸಲು ಸಹಾಯ ಮಾಡುತ್ತದೆ.

Google Pixel 6 series: ಬೊಂಬಾಟ್ ಕ್ಯಾಮೆರಾ, ಭರ್ಜರಿ ಬ್ಯಾಟರಿ: ಗೂಗಲ್ ಪಿಕ್ಸೆಲ್ 6 ಸರಣಿ ಸ್ಮಾರ್ಟ್​ಫೋನ್ ಇಂದು ಬಿಡುಗಡೆ

Apple Event: ಭಾರತದಲ್ಲಿ ಆಪಲ್‌ ಮ್ಯಾಕ್‌ಬುಕ್‌ ಪ್ರೊ, ಏರ್​​ಪಾಡ್ಸ್ ಮಾಡೆಲ್‌ ಬಿಡುಗಡೆ: ಏನು ವಿಶೇಷತೆ?

(Nokia XR20 With Military-Grade Build 48MP Camera Launched in India Here is the Price and Specs)

Follow us on

Related Stories

Most Read Stories

Click on your DTH Provider to Add TV9 Kannada