Apple Event: ಭಾರತದಲ್ಲಿ ಆಪಲ್‌ ಮ್ಯಾಕ್‌ಬುಕ್‌ ಪ್ರೊ, ಏರ್​​ಪಾಡ್ಸ್ ಮಾಡೆಲ್‌ ಬಿಡುಗಡೆ: ಏನು ವಿಶೇಷತೆ?

Apple Event: ಭಾರತದಲ್ಲಿ ಆಪಲ್‌ ಮ್ಯಾಕ್‌ಬುಕ್‌ ಪ್ರೊ, ಏರ್​​ಪಾಡ್ಸ್ ಮಾಡೆಲ್‌ ಬಿಡುಗಡೆ: ಏನು ವಿಶೇಷತೆ?
Apple MacBook Pro

MacBook Pro: ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಗಳ ವಿನ್ಯಾಸದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದ್ದು, 1080ಪಿ ಕ್ಯಾಮೆರಾ ಅಳವಡಿಸಲಾಗಿದೆ. 14 ಇಂಚು ಮತ್ತು 16 ಇಂಚು ಎರಡು ಮಾದರಿಗಳಲ್ಲಿ ಲ್ಯಾಪ್‌ಟಾಪ್‌ ಲಭ್ಯವಿದೆ.

TV9kannada Web Team

| Edited By: Vinay Bhat

Oct 19, 2021 | 12:47 PM

ಆಪಲ್‌ ಕಂಪೆನಿಯ ‘ಅನ್‌ಲೀಶ್ಡ್’ ಈವೆಂಟ್‌ನಲ್ಲಿ (Apple Event) ಹೊಸ ಮ್ಯಾಕ್‌ಬುಕ್ ಪ್ರೊ (MacBook Pro) ಮಾಡೆಲ್‌ಗಳನ್ನು ಪರಿಚಯಿಸಲಾಗಿದೆ. ಇದರ ಜೊತೆಗೆ ಎರಡು ಹೊಸ ಚಿಪ್‌ಗಳು ಹಾಗೂ ಮೂರನೇ ತಲೆಮಾರಿನ ಏರ್‌ಪಾಡ್‌ ವೈರ್‌ಲೆಸ್‌ ಇಯರ್‌ಬಡ್‌ (AirPods 3)ಬಿಡುಗಡೆ ಮಾಡಿದೆ. ಮ್ಯಾಕ್‌ಬುಕ್‌ ಮಾಡೆಲ್‌ಗಳು ಹೊಸ ಸಿಲಿಕಾನ್ ಆಧಾರಿತ ಹೊಸ ಎಂ 1 ಪ್ರೊ ಮತ್ತು ಎಂ 1 ಮ್ಯಾಕ್ಸ್ ಪ್ರೊಸೆಸರ್‌ (M1 Pro and M1 Max chipsets) ಹೊಂದಿವೆ. 14 ಇಂಚಿನ Apple ಮ್ಯಾಕ್‌ಬುಕ್ ಪ್ರೊ 2021 ಎರಡು ಕಾನ್ಫಿಗರೆಷೆನ್ ನಲ್ಲಿ ಬರುತ್ತದೆ. M1 ಪ್ರೊ ಚಾಲಿತ ನೋಟ್ಬುಕ್ 8-ಕೋರ್ CPU, 14-ಕೋರ್ GPU, 16GB ಯುನಿಫೈಡ್ ಮೆಮೊರಿ, 512GB SSD ಸ್ಟೋರೇಜ್ ಮತ್ತು 67W USB-C ಪವರ್ ಅಡಾಪ್ಟರ್ ಹೊಂದಿದೆ. ಈ ಮಾದರಿಯನ್ನು ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ ರೂ. 194,900 ರ ಆರಂಭಿಕ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ.

ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಗಳ ವಿನ್ಯಾಸದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದ್ದು, 1080ಪಿ ಕ್ಯಾಮೆರಾ ಅಳವಡಿಸಲಾಗಿದೆ. 14 ಇಂಚು ಮತ್ತು 16 ಇಂಚು ಎರಡು ಮಾದರಿಗಳಲ್ಲಿ ಲ್ಯಾಪ್‌ಟಾಪ್‌ ಲಭ್ಯವಿದೆ. ಹೊಸ ಚಿಪ್‌ಗಳಿಂದಾಗಿ ಬ್ಯಾಟರಿ ಚಾರ್ಜ್‌ ಉಳಿಯುವಿಕೆ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಒಮ್ಮೆ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿ, 14 ಇಂಚಿನ ಲ್ಯಾಪ್‌ಟಾಪ್‌ ಮಾದರಿಯಲ್ಲಿ ನಿರಂತರ 17 ಗಂಟೆಗಳ ವಿಡಿಯೊ ಪ್ಲೇಬ್ಯಾಕ್‌ ಮಾಡಬಹುದು, 16 ಇಂಚಿನ ಮ್ಯಾಕ್‌ಬುಕ್‌ನಲ್ಲಿ 21 ಗಂಟೆಗಳ ವರೆಗೂ ವಿಡಿಯೊ ವೀಕ್ಷಣೆ ಸಾಧ್ಯವಾಗಲಿದೆ.

ಇದರಲ್ಲಿ ಮತ್ತೆ SDXC ಕಾರ್ಡ್ ಸ್ಲಾಟ್ ಹಾಗೂ HDMI ಪೋರ್ಟ್‌ ಅನ್ನು ಸೇರಿಸಲಾಗಿದೆ. ಇದರಿಂದ ಬೆಜೆಲ್‌ಗಳನ್ನು ಕಡಿಮೆ ಮಾಡಬಹುದಾಗಿದೆ. ಹಾಗೆಯೇ ಬಳಕೆದಾರರಿಗೆ ಹೆಚ್ಚಿನ ಸ್ಕ್ರೀನ್ ರಿಯಲ್ ಎಸ್ಟೇಟ್ ಅನ್ನು ಒದಗಿಸಲು ಸಹಾಯವಾಗಲಿದೆ. ಇನ್ನು ಈ ಮಾಡೆಲ್‌ನಲ್ಲಿ 1080p ಸಾಮರ್ಥ್ಯದ ಫೇಸ್‌ಟೈಮ್ ವೆಬ್‌ಕ್ಯಾಮ್ ಅನ್ನು ನೀಡಲಾಗಿದೆ. ಆದರೆ ಈ ಮ್ಯಾಕ್‌ಬುಕ್‌ ಪ್ರೊ ನಲ್ಲಿ ಫೇಸ್ ಐಡಿಯನ್ನು ಒದಗಿಸಿಲ್ಲ ಅನ್ನೊದನ್ನ ಗಮನಿಸಬೇಕಿದೆ.

ಮ್ಯಾಕ್‌ಬುಕ್ ಪ್ರೊ ಮಾಡೆಲ್‌ಗಳು ಮ್ಯಾಜಿಕ್ ಕೀಬೋರ್ಡ್‌ ಹೊಂದಿವೆ. ಹಿಂದೆ ಲಭ್ಯವಿದ್ದ ಟಚ್ ಬಾರ್ ಅನ್ನು ಬದಲಾಯಿಸಿದ್ದು, ವಿಶಾಲವಾದ ಎಸ್ಕೇಪ್ ಕೀಯೊಂದಿಗೆ ಬದಲಾಯಿಸುತ್ತದೆ. ನೀವು ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್ ಅನ್ನು ಸಹ ನೀಡಲಾಗಿದೆ. ಹೊಸ ಮ್ಯಾಕೋಸ್ ಆವೃತ್ತಿಯು ಹಳೆಯ ಮೆಷಿನ್‌ಗಳಿಗೆ ಅಕ್ಟೋಬರ್ 25ರ ಸೋಮವಾರದಿಂದ ಉಚಿತ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಲಭ್ಯವಾಗಲಿದೆ. ಮ್ಯಾಕ್‌ಬುಕ್‌ ಪ್ರೊ (2021) ಮಾಡೆಲ್‌ 14 ಇಂಚಿನ ಆಯ್ಕೆಯ ಬೆಲೆ 1,94,900.ರೂ ಆಗಿದೆ. ಇದು ಶೈಕ್ಷಣಿಕ ಬಳಕೆಗೆ 1,75,410.ರೂ ಗಳಿಗೆ ಲಭ್ಯವಾಗಲಿದೆ. ಇನ್ನು 16 ಇಂಚಿನ ಆಪಲ್ ಮ್ಯಾಕ್ ಬುಕ್ ಪ್ರೊ (2021) ಮಾಡೆಲ್‌ ಸಾಮಾನ್ಯ ಗ್ರಾಹಕರಿಗೆ 2,39,900ರೂ. ಮತ್ತು ಶಿಕ್ಷಣಕ್ಕಾಗಿ 2,15,910.ರೂ. ಬೆಲೆಗೆ ಲಭ್ಯವಾಗಲಿದೆ.

ಇನ್ನು ಆ್ಯಪಲ್‌ ‘ಎಂ1 ಪ್ರೊ’ ಮತ್ತು ‘ಎಂ1 ಮ್ಯಾಕ್ಸ್‌’ ಹೆಸರಿನ ಎರಡು ಚಿಪ್‌ಗಳು ಹಿಂದಿನ ಎಂ1 ಚಿಪ್‌ಗಳಿಗಿಂತ ಮತ್ತಷ್ಟು ವೇಗ ಹಾಗೂ ಸಮರ್ಥಗೊಳಿಸಲಾಗಿದೆ. ಕಂಪ್ಯೂಟರ್‌ಗಳಲ್ಲಿ ವಿಡಿಯೊ ಪ್ರೊಸೆಸಿಂಗ್‌ ಉತ್ತಮಗೊಳಿಸುತ್ತದೆ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಬ್ಯಾಟರಿ ಬಾಳಿಕೆ ಹೆಚ್ಚಿಸುತ್ತದೆ.

ಏರ್‌ಪಾಡ್ಸ್‌ನ ಮೂರನೇ ಆವೃತ್ತಿಯ ಬೆಲೆ ₹18,500 (179 ಡಾಲರ್‌) ಇದೆ. ಏರ್‌ಪಾಡ್ಸ್‌ ಪ್ರೊನಲ್ಲಿ ಕೊಡಲಾಗಿರುವ ಹಲವು ಗುಣಲಕ್ಷಣಗಳು ಇದರಲ್ಲೂ ಇವೆ. ಉತ್ತಮ ಗುಣಮಟ್ಟದ ಆಡಿಯೊ, ಹೆಚ್ಚುವರಿ ಬ್ಯಾಟರಿ ಸಾಮರ್ಥ್ಯ ಹಾಗೂ ಹೊಸ ವಿನ್ಯಾಸದೊಂದಿಗೆ ಮೂರನೇ ತಲೆಮಾರಿನ ಏರ್‌ಪಾಡ್ಸ್‌ ಬಿಡುಗಡೆಯಾಗಿದೆ.

Battery Life Smartphones: ನೀವು ಕಡಿಮೆ ಬೆಲೆಗೆ ಬಿಗ್ ಬ್ಯಾಟರಿಯ ಬೆಸ್ಟ್ ಸ್ಮಾರ್ಟ್​ಫೋನ್ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ

WhatsApp backup: ಸದ್ಯದಲ್ಲೇ ಗೂಗಲ್ ಡ್ರೈವ್‌ನಲ್ಲಿ ವಾಟ್ಸ್​ಆ್ಯಪ್ ಬ್ಯಾಕಪ್ ಸ್ಥಗಿತ: ತಕ್ಷಣವೇ ಹೀಗೆ ಮಾಡಿರಿ

(Apple Event Apple launches new MacBook Pro models M1 Pro and M1 Max chipsets new AirPods 3)

Follow us on

Related Stories

Most Read Stories

Click on your DTH Provider to Add TV9 Kannada