AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online Bill Payment: ಆನ್​ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಈಗ ಮತ್ತಷ್ಟು ಸುಲಭ: ಜಸ್ಟ್ ಹೀಗೆ ಮಾಡಿ

Make Electricity Bill Payment Online: ಗ್ಯಾಸ್​, ಟಿವಿ ಹೀಗೆ ಯಾವುದೇ ಬಿಲ್​ಗಳನ್ನ ಅಧಿಕೃತ ಆ್ಯಪ್​ಗಳ  ಮೂಲಕ ಆನ್​ಲೈನ್​ನಲ್ಲಿ ಪಾವತಿ ಮಾಡಬಹುದಾಗಿದೆ. ಇದರಂತೆ ವಿದ್ಯುತ್ ಬಿಲ್ ಕೂಡ ಪಾವತಿಸಬಹುದಾಗಿದೆ. ಅದು ಸುಲಭವಾಗಿ ಮತ್ತು ಕೆಲವೇ ನಿಮಿಷಗಳಲ್ಲಿ.

Online Bill Payment: ಆನ್​ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಈಗ ಮತ್ತಷ್ಟು ಸುಲಭ: ಜಸ್ಟ್ ಹೀಗೆ ಮಾಡಿ
Online Bill Payment
TV9 Web
| Updated By: Vinay Bhat|

Updated on: Oct 19, 2021 | 3:25 PM

Share

ಕೋವಿಡ್ (COVID) ಸಮಸ್ಯೆ ಆರಂಭಗೊಂಡ ನಂತರದಲ್ಲಿ ಜಗತ್ತಿನಲ್ಲಿ ಡಿಜಿಟಲ್ ಮಾಧ್ಯಮಗಳು ಹೆಚ್ಚು ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕಿಂಗ್ ಚಟುವಟಿಕೆ ಸೇರಿದಂತೆ ಹಲವಾರು ಕೆಲಸಗಳು ಅಪ್ಲಿಕೇಶನ್ ಗಳ ಮುಖಾಂತರವೇ ನಡೆಯುತ್ತಿದೆ. ಗ್ಯಾಸ್ ಬಿಲ್ (Gas Bill) ಕಟ್ಟಲು, ಮೊಬೈಲ್ ರೀಚಾರ್ಜ್ (Mobile Reacharg), ಡಿಟಿಎಚ್ ರೀಚಾರ್ಜ್ ಎಲ್ಲದಕ್ಕೂ ಪ್ರತ್ಯೇಕವಾದ ಆ್ಯಪ್ ಗಳಿವೆ. ಅದೇ ರೀತಿ ಮನೆಯ ವಿದ್ಯುತ್ ಬಿಲ್ (Electricity Bill) ಕಟ್ಟಲು ಕೂಡಾ ಹಲವು ಆ್ಯಪ್ ಗಳು ಲಭ್ಯವಿದೆ. ಅನೇಕರಿಗೆ ಆನ್​ಲೈನ್​ ಮೂಲಕ ಬಿಲ್​ ಪಾವತಿ (Online Bill Payment) ಮಾಡಬಹುದು ಎಂಬ ವಿಚಾರ ಗೊತ್ತಿಲ್ಲ. ಗ್ಯಾಸ್​, ಟಿವಿ ಹೀಗೆ ಯಾವುದೇ ಬಿಲ್​ಗಳನ್ನ ಅಧಿಕೃತ ಆ್ಯಪ್​ಗಳ  ಮೂಲಕ ಆನ್​ಲೈನ್​ನಲ್ಲಿ ಪಾವತಿ ಮಾಡಬಹುದಾಗಿದೆ. ಇದರಂತೆ ವಿದ್ಯುತ್ ಬಿಲ್ ಕೂಡ ಪಾವತಿಸಬಹುದಾಗಿದೆ. ಅದು ಸುಲಭವಾಗಿ ಮತ್ತು ಕೆಲವೇ ನಿಮಿಷಗಳಲ್ಲಿ.

ಫೋನ್‌ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

  • ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
  • ‘ರೀಚಾರ್ಜ್ ಮತ್ತು ಪಾವತಿ ಬಿಲ್‌ಗಳು’ ವಿಭಾಗದ ಅಡಿಯಲ್ಲಿ ವಿದ್ಯುತ್’ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ವಿದ್ಯುತ್ ಮಂಡಳಿಯನ್ನು ಆಯ್ಕೆ ಮಾಡಿ.
  • ನಿಮ್ಮ ಬಿಲ್ ವಿವರಗಳನ್ನು ನಮೂದಿಸಿ.
  • ನಿಮ್ಮ ಬಿಲ್ ಅನ್ನು UPI/ಡೆಬಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪಾವತಿಸಿ.

ಗೂಗಲ್ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:

  • ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಆ್ಯಪ್ ತೆರೆಯಿರಿ.
  • ಪರದೆಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ, “+ ಹೊಸ ಪಾವತಿ” ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಟ್ಯಾಪ್ ಮಾಡಿ.
  • ಈಗ ಮುಂದಿನದರಲ್ಲಿ “ಬಿಲ್ ಪಾವತಿಗಳು” ಆಯ್ಕೆಯನ್ನು ಆರಿಸಿ.
  • ವಿವಿಧ ಬಿಲ್ ಪಾವತಿ ಆಯ್ಕೆಗಳಿಂದ ‘ವಿದ್ಯುತ್’ ಟ್ಯಾಬ್ ಆಯ್ಕೆಮಾಡಿ ನಂತರ ನೀವು ಪಾವತಿ ಮಾಡಲು ಬಯಸುವ ಏಜೆನ್ಸಿಯನ್ನು ಆಯ್ಕೆ ಮಾಡಿ.
  • ನೀವು ಬಯಸಿದ ಕಂಪನಿಯನ್ನು ಆಯ್ಕೆ ಮಾಡಿದ ನಂತರ, ಪಾವತಿ ಪ್ರಕ್ರಿಯೆಯನ್ನು ಮುಗಿಸಲು ನಿಮ್ಮ ಗ್ರಾಹಕ ಖಾತೆಯನ್ನು ನೀವು ಲಿಂಕ್ ಮಾಡಬೇಕಾಗುತ್ತದೆ.
  • ನೀವು ಬಿಲ್ ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು UPI ಪಿನ್ ಬಳಸಿ ಬಿಲ್ ಪಾವತಿಸಿ.

ಇನ್ನು ಕರೆಂಟ್ ಬಿಲ್​ಗಳನ್ನು ಸುಲಭವಾಗಿ ಪಾವತಿ ಮಾಡಲು ಮೊಬಿಕ್ವಿಕ್ ಬೆಸ್ಟ್ ಆ್ಯಪ್ ಆಗಿದೆ. ಮೊಬಿಕ್ವಿಕ್ ಖಾತೆಯಲ್ಲಿ ಹಣ ಕ್ರೆಡಿಟ್ ಮಾಡುವ ಮೂಲಕ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ. ಆ್ಯಪ್ ತೆರೆದು ಸ್ಕ್ರಾಲ್ ಮಾಡಿದಂತೆ ವಿದ್ಯುತ್ ಪಾವತಿ ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಗ್ರಾಹಕ ಸಂಖ್ಯೆಯನ್ನು ನಮೂದಿಸಿದ ಬೇಕು. ಆಗ ಸ್ಕ್ರೀನ್ ಮೇಲೆ ಎಲೆಕ್ಟ್ರಿಕ್ ಮೊತ್ತ ತೋರಿಸುತ್ತದೆ. ನಂತರ ಪೇಮೆಂಟ್ ವಿಭಾಗಕ್ಕೆ ತೆರಳಿ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ.

ಅಂತೆಯೆ ಪೇಟಿಯಂ ಆ್ಯಪ್​​ನಲ್ಲಿ ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್, ಟಿವಿ ರೀಚಾರ್ಜ್, ಗ್ಯಾಸ್ ಬಿಲ್ ಹೀಗೆ ಆಯ್ಕೆಗಳಿರುತ್ತವೆ. ಆ್ಯಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್​ನಲ್ಲಿ ದೊರಕುವ ಪೇಟಿಯಂ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಲಾಗಿನ್ ಆದ ನಂತರ ಸ್ಟೇ ಎಟ್ ಹೋಂ ಎಸೆಸ್ಸೆಂಶಿಯಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಎಲೆಕ್ಟ್ರಿಸಿಟಿ ಆಯ್ಕೆ ಕಾಣಸಿಗುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆನ್​ಲೈನ್​ ಮೂಲಕ ಹಣ ಪಾವತಿಸಬಹುದು.

Nokia XR20: 48MP ಕ್ಯಾಮೆರಾ, ಸ್ನಾಪ್‌ಡ್ರಾಗನ್ ಪ್ರೊಸೆಸರ್: ನೋಕಿಯಾದಿಂದ XR20 ಸ್ಮಾರ್ಟ್​ಫೋನ್ ರಿಲೀಸ್

Google Pixel 6 series: ಬೊಂಬಾಟ್ ಕ್ಯಾಮೆರಾ, ಭರ್ಜರಿ ಬ್ಯಾಟರಿ: ಗೂಗಲ್ ಪಿಕ್ಸೆಲ್ 6 ಸರಣಿ ಸ್ಮಾರ್ಟ್​ಫೋನ್ ಇಂದು ಬಿಡುಗಡೆ

(Electricity bill Online Here is the Tips to pay electricity bill using Google Pay PhonePe Paytm)