100 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿಕೆ: ಭಾರತದ ಬದ್ಧತೆ, ನಾಯಕತ್ವವನ್ನು ಶ್ಲಾಘಿಸಿದ ಡಬ್ಲ್ಯೂಎಚ್​ಒದ ಪೂನಂ ಖೇತ್ರಪಾಲ್​ ಸಿಂಗ್​

ಭಾರತದ ಇಂದಿನ ಸಾಧನೆಯನ್ನು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್​ ಮೂಲಕ ಹೊಗಳಿದ್ದಾರೆ. ಇಂಥದ್ದೊಂದು ಮಹತ್ವದ ಸಾಧನೆಗೆ ಸಹಕಾರ ನೀಡಿದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

100 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿಕೆ: ಭಾರತದ ಬದ್ಧತೆ, ನಾಯಕತ್ವವನ್ನು ಶ್ಲಾಘಿಸಿದ ಡಬ್ಲ್ಯೂಎಚ್​ಒದ ಪೂನಂ ಖೇತ್ರಪಾಲ್​ ಸಿಂಗ್​
ಪೂನಂ ಖೇತ್ರಪಾಲ್​ ಸಿಂಗ್​
Follow us
TV9 Web
| Updated By: Lakshmi Hegde

Updated on: Oct 21, 2021 | 12:21 PM

ಭಾರತದಲ್ಲಿಂದು 100 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿಕೆ ಪೂರ್ಣಗೊಂಡಿದ್ದನ್ನು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ಪೂನಂ​ ಖೇತ್ರಪಾಲ್​ ಸಿಂಗ್​ ಶ್ಲಾಘಿಸಿದ್ದಾರೆ. ಭಾರತದಲ್ಲಿ ಜನವರಿ 16ರಂದು ಶುರುವಾದ ಕೊರೊನಾ ಲಸಿಕೆ ಅಭಿಯಾನ ಇಂದು ಮೈಲಿಗಲ್ಲು ತಲುಪಿದೆ. ಬರೋಬ್ಬರಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿ ಹಲವು ರಾಜಕೀಯ ಗಣ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ. ದೇಶದ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದ್ದಾರೆ.  

ಹಾಗೇ, ಭಾರತದ 100 ಕೋಟಿ ಡೋಸ್​ ಲಸಿಕೆ ನೀಡಿಕೆ ಸಾಧನೆ ಬಗ್ಗೆ ಮಾತನಾಡಿದ ಪೂನಂ ಖೇತ್ರಪಾಲ್​ ಸಿಂಗ್​, ಒಂದು ಸದೃಢ ರಾಜಕೀಯ ನಾಯಕತ್ವ, ಒಗ್ಗೂಡಿಸುವಿಕೆ ಮತ್ತು ಆಡೀ ಆರೋಗ್ಯ ಕ್ಷೇತ್ರ, ಮುಂಚೂಣಿಯಲ್ಲಿದ್ದ ಇತರ ಕೊವಿಡ್​ 19 ಫೈಟರ್ಸ್​ ಮತ್ತು ಸಾಮಾನ್ಯ ಜನರ ಸಹಕಾರವಿಲ್ಲದೆ ಹೀಗೆ ಕಡಿಮೆ ಅವಧಿಯಲ್ಲಿ ಶತಕೋಟಿ ಡೋಸ್​ ಲಸಿಕೆ ನೀಡುವ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಭಾರತದ ನಾಯಕತ್ವ ಮತ್ತು ಇಲ್ಲಿನ ಜನರ ಸಮನ್ವಯತೆಯನ್ನು ಹೊಗಳಿದ್ದಾರೆ. ಹಾಗೇ, ಭಾರತದ ಸಾಧನೆಯನ್ನು ಅದರ ಪ್ರಶಂಸನೀಯ ಬದ್ಧತೆ ದೃಷ್ಟಿಯಿಂದ ನೋಡಬೇಕು. ಅದು ತಮ್ಮ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡುತ್ತಿದೆ ಎಂದೂ ಹೇಳಿದ್ದಾರೆ.

ಭಾರತದ ಇಂದಿನ ಸಾಧನೆಯನ್ನು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್​ ಮೂಲಕ ಹೊಗಳಿದ್ದಾರೆ. ಇಂಥದ್ದೊಂದು ಮಹತ್ವದ ಸಾಧನೆಗೆ ಸಹಕಾರ ನೀಡಿದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಹಾಗೇ, ಇದು ಸಾಧ್ಯವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ದೂರದೃಷ್ಟಿಯಿಂದ ಎಂದೂ ಹೇಳಿದ್ದಾರೆ.  ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್​ ಪ್ರತಿಕ್ರಿಯಿಸಿ, 100 ಕೋಟಿ ಡೋಸ್​ ಲಸಿಕೆ ನೀಡಿಕೆಯ ಮೈಲಿಗಲ್ಲನ್ನು ಭಾರತ ತಲುಪಿದೆ. ಈ ಹೊತ್ತಲ್ಲಿ ಇಡೀ ದೇಶ, ಇಲ್ಲಿನ ಜನರು ಅದಕ್ಕೂ ಮುಖ್ಯವಾಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಅಭಿನಂದನಾರ್ಹರು ಎಂದು ಹೇಳಿದ್ದಾರೆ. ಅದರಲ್ಲೂ ಕೊವಿಡ್​ 19 ಲಸಿಕೆ ಅಭಿಯಾನ ಶುರುವಾಗಿ ಕೇವಲ 9 ತಿಂಗಳಲ್ಲಿ ಇಂಥದ್ದೊಂದು ಮಹತ್ವದ ಸಾಧನೆ ಮಾಡಿದ್ದು ನಿಜಕ್ಕೂ ಸಂತೋಷ ಪಡುವ ವಿಚಾರವೇ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Amazon Prime: ಪ್ರೈಮ್ ಸದಸ್ಯರಿಗೆ ಬಿಗ್ ಶಾಕ್ ನೀಡಿದ ಅಮೆಜಾನ್: ವಾರ್ಷಿಕ ಯೋಜನೆಯಲ್ಲಿ ದೊಡ್ಡ ಬದಲಾವಣೆ

ತನ್ನ ಮರಿಯನ್ನು ರಕ್ಷಿಸಲು ಮೊಸಳೆಯನ್ನು ಕೊಂದ ತಾಯಿ ಆನೆ; ವಿಡಿಯೋ ವೈರಲ್