LIC Recruitment 2021: ಎಲ್​ಐಸಿ ಎಇ, ಎಎಒ ಹುದ್ದೆ ನೇಮಕಾತಿ ಪರೀಕ್ಷೆ ಅಕ್ಟೋಬರ್​ 31ಕ್ಕೆ; ವೇತನ, ಸೌಲಭ್ಯಗಳ ವಿವರ ಇಲ್ಲಿದೆ

ಅಕ್ಟೋಬರ್​ 31ರಂದು ನಡೆಯಲಿರುವ ನೇಮಕಾತಿ ಪರೀಕ್ಷೆ, ನಂತರದ ಸಂದರ್ಶನ ಮತ್ತು ದಾಖಲೆ ವೆರಿಫಿಕೇಶನ್​​, ವೈದ್ಯಕೀಯ ತಪಾಸಣೆ ಎಲ್ಲದರಲ್ಲೂ ಸರಿಯಾಗಿ ಉತ್ತೀರ್ಣರಾಗಿ ಅರ್ಹರು ಎನ್ನಿಸಿಕೊಂಡ ಅಭ್ಯರ್ಥಿಗಳು ಹುದ್ದೆಗಳಿಗೆ ನೇಮಕವಾಗಲಿದ್ದಾರೆ.

LIC Recruitment 2021: ಎಲ್​ಐಸಿ ಎಇ, ಎಎಒ ಹುದ್ದೆ ನೇಮಕಾತಿ ಪರೀಕ್ಷೆ ಅಕ್ಟೋಬರ್​ 31ಕ್ಕೆ; ವೇತನ, ಸೌಲಭ್ಯಗಳ ವಿವರ ಇಲ್ಲಿದೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Oct 21, 2021 | 1:26 PM

ಲೈಫ್​ ಇನ್ಶೂರೆನ್ಸ್​ ಕಾರ್ಪೋರೇಶನ್​ (LIC)ನ ಅಸಿಸ್ಟೆಂಟ್​ ಇಂಜಿನಿಯರ್ಸ್​ ಮತ್ತು ಅಸಿಸ್ಟೆಂಟ್​ ಅಡ್ಮಿನಿಸ್ಟ್ರೇಟಿವ್​ ಆಫೀಸರ್ಸ್​(ತಜ್ಞರು) ಹುದ್ದೆಗಳ ಪರೀಕ್ಷೇ ಅಕ್ಟೋಬರ್​ 31ರಂದು ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎಲ್​ಐಸಿಯ ಅಧಿಕೃತ ವೆಬ್​ಸೈಟ್​  Licindia.in.ನ್ನು ಪರಿಶೀಲಿಸಬಹುದಾಗಿದೆ.

ಎಲ್​ಐಸಿ ಎಇ (ಎಲ್​ಐಸಿ ಅಸಿಸ್ಟೆಂಟ್​ ಇಂಜಿನಿಯರ್ಸ್​​) ಮತ್ತು ಎಎಒ (ಅಸಿಸ್ಟೆಂಟ್​ ಅಡ್ಮಿನಿಸ್ಟ್ರೇಟಿವ್​ ಆಫೀಸರ್ಸ್) ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಯಲ್ಲಿ ಮಲ್ಟಿಪಲ್​ ಚಾಯಿಸ್​ ಪ್ರಶ್ನೆಗಳು (ಒಂದು ಪ್ರಶ್ನೆ ಕೊಟ್ಟು ಅದಕ್ಕೆ ಮೂರು ಅಥವಾ ನಾಲ್ಕು ಆಯ್ಕೆ ಕೊಟ್ಟಿರುತ್ತಾರೆ. ಅದರಲ್ಲಿ ಒಂದು ಸರಿಯಾದ ಉತ್ತರವನ್ನು ಬರೆಯುವುದು) ಮತ್ತು ವಿವರಣಾತ್ಮಕ ಪ್ರಶ್ನೆಗಳು ಎರಡೂ ಮಾದರಿಯ ಪ್ರಶ್ನೆಗಳಿರುತ್ತವೆ. ಒಟ್ಟು 300 ಅಂಕದ ಈ ಪರೀಕ್ಷೆ ಆನ್​ಲೈನ್​ ಮೂಲಕ ನಡೆಯಲಿದೆ. ವಿವರಣೆ ಬರೆಯಬೇಕಾದ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಕಂಪ್ಯೂಟರ್​​ನಲ್ಲಿ ಟೈಪ್​ ಮಾಡಬೇಕಾಗುತ್ತದೆ.

ಅಕ್ಟೋಬರ್​ 31ರಂದು ನಡೆಯಲಿರುವ ನೇಮಕಾತಿ ಪರೀಕ್ಷೆ, ನಂತರದ ಸಂದರ್ಶನ ಮತ್ತು ದಾಖಲೆ ವೆರಿಫಿಕೇಶನ್​​, ವೈದ್ಯಕೀಯ ತಪಾಸಣೆ ಎಲ್ಲದರಲ್ಲೂ ಸರಿಯಾಗಿ ಉತ್ತೀರ್ಣರಾಗಿ ಅರ್ಹರು ಎನ್ನಿಸಿಕೊಂಡ ಅಭ್ಯರ್ಥಿಗಳು ಹುದ್ದೆಗಳಿಗೆ ನೇಮಕವಾಗಲಿದ್ದಾರೆ. ಹೀಗೆ ಅಂತಿಮವಾಗಿ ನೇಮಕವಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 57 ಸಾವಿರ ರೂಪಾಯಿ ಸಂಬಳ ಇರಲಿದೆ. ಅದರಾಚೆ ಕಂಪನಿಯ ವಿಮೆ, ಮೆಡಿ-ಕ್ಲೇಮ್, ಎಲ್‌ಟಿಸಿ, ಗ್ರಾಚ್ಯುಟಿ ಸೇರಿ ವಿವಿಧ ಭತ್ಯೆಗಳಿಗೆ ಅವರು ಅರ್ಹರಾಗುತ್ತಾರೆ.  ಇನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಐರಿಸ್ (ಕಣ್ಪೊರೆ)​ ಮತ್ತು ಫೋಟೋವನ್ನು ತೆಗೆಯಲು ಮತ್ತು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.  ಮುಖ್ಯ ಪರೀಕ್ಷೆಯ ಪ್ರಾರಂಭಕ್ಕೂ ಮೊದಲು, ಪರೀಕ್ಷೆ ಮುಗಿಸಿ ಆಯಾ ಹಾಲ್​/ಲ್ಯಾಬ್​​ನಿಂದ ಅಭ್ಯರ್ಥಿಗಳು ಹೊರಡುವ ಮೊದಲು, ಸಂದರ್ಶನಕ್ಕೂ ಮೊದಲು ದಾಖಲೆಗಳನ್ನು ಪರಿಶೀಲನೆ ಮಾಡುವಾಗ, ಎಲ್ಲವೂ ಮುಗಿಸಿ ನಂತರ ತರಬೇತಿಗೆ, ಕೆಲಸಕ್ಕೆ ಹಾಜರಾಗುವ ಮೊದಲು ಈ ಫೋಟೋ, ಕಣ್ಪೊರೆ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ರೋಗಿಗೆ ಗಾಳಿಯನ್ನು ಚುಚ್ಚುವ ಮೂಲಕ 4 ಜನರನ್ನು ಕೊಂದ ‘ಸೀರಿಯಲ್ ಕಿಲ್ಲರ್’ ನರ್ಸ್‌ಗೆ ಮರಣದಂಡನೆ ವಿಧಿಸಲು ಒತ್ತಾಯ

Shah Rukh Khan: ಬಾಲಿವುಡ್​ ನಟ ಶಾರುಖ್​ ಖಾನ್, ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ NCB ದಾಳಿ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?