ದೆಹಲಿ ಡಿಸೆಂಬರ್ 29 : ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram mandhir) ಭಗವಾನ್ ರಾಮನ ಆರತಿಯಲ್ಲಿ (Ram Lalla’s aarti )ಭಾಗಿಯಾಗಲು ಬಯಸುವವರಿಗೆ ರಾಮಮಂದಿರ ಟ್ರಸ್ಟ್ ಪಾಸ್ ವಿತರಿಸುತ್ತಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಮುನ್ನ ರಾಮಲಲ್ಲಾನ ಆರತಿಗಾಗಿ ವಿಶೇಷ ಪಾಸ್‌ಗಳನ್ನು ಪಡೆಯಲು ಬುಕ್ಕಿಂಗ್ ಗುರುವಾರ ಆರಂಭವಾಗಿದೆ.
ಈ ಬಗ್ಗೆ ಮಾತನಾಡಿದ ರಾಮಮಂದಿರ ಟ್ರಸ್ಟ್‌ನ ಸದಸ್ಯರಾದ ಪ್ರಕಾಶ್ ಗುಪ್ತಾ “ವಿತರಿಸುವ ಒಟ್ಟು ಪಾಸ್‌ಗಳಲ್ಲಿ 20 ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲು ಟ್ರಸ್ಟ್ ನಿರ್ಧರಿಸಿದೆ. ಈ ಸೌಲಭ್ಯವು ನಿನ್ನೆ (ಗುರುವಾರ) ಕಾರ್ಯರೂಪಕ್ಕೆ ಬಂದಿದೆ. ಈಗ, ಆರತಿಗೆ ಹಾಜರಾಗಲು ಬಯಸುವ ವ್ಯಕ್ತಿಗಳು ತಮ್ಮ ಪಾಸ್‌ಗಳನ್ನು ಪೂರ್ವಭಾವಿಯಾಗಿ ಪಡೆಯಬಹುದು. ಮೂರು ಆರತಿಗಳಿಗೆ ತಲಾ ಇಪ್ಪತ್ತು ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಯಾರಾದರೂ ವೆಬ್‌ಸೈಟ್‌ಗೆ ಭೇಟಿ ನೀಡಹುದು ಮತ್ತು ನಂತರದ ದಿನಾಂಕಕ್ಕಾಗಿ ಪಾಸ್ ಅನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ದೇವಾಲಯದಲ್ಲಿ ಬೆಳಿಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ದರ್ಶನ ಸಮಯವಾಗಿದೆ. ಭಗವಾನ್ ರಾಮ್ ಲಲ್ಲಾಗೆ ದಿನಕ್ಕೆ ಮೂರು ಬಾರಿ ಆರತಿಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ ಭಕ್ತರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿರುವವರು ಮಾತ್ರ ಮೂರು ಆರತಿಗೆ ಹಾಜರಾಗಬಹುದು. ಈಗಿನಂತೆ, ಪಾಸ್‌ನೊಂದಿಗೆ ಪ್ರತಿ ಆರತಿಯಲ್ಲಿ ಪಾಲ್ಗೊಳ್ಳಲು ಕೇವಲ 30 ಜನರಿಗೆ ಮಾತ್ರ ಅವಕಾಶವಿದೆ.
ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಬಳಸಿದ್ದು ರಾಜಸ್ಥಾನದ ಮಕ್ರಾನ ಮಾರ್ಬಲ್, ತಮಿಳುನಾಡು ಮತ್ತು ತೆಲಂಗಾಣದ ಗ್ರಾನೈಟ್
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಪಾಸ್‌ಗಳನ್ನು ಪಡೆದುಕೊಳ್ಳಲು ಅಗತ್ಯ ಮಾರ್ಗಸೂಚಿಗಳನ್ನು ಸಹ ಒದಗಿಸಿದೆ. ಅದು ಹೀಗಿದೆ
ಆರತಿ ಸಮಯ: ದಿನಕ್ಕೆ ಮೂರು ಬಾರಿ. ರಾಮ ಜನ್ಮಭೂಮಿಯಲ್ಲಿ, ಭಗವಾನ್ ರಾಮ ಲಲ್ಲಾಗೆ ಆರತಿ ಸಮಾರಂಭಗಳನ್ನು ಪ್ರತಿದಿನ ಮೂರು ಬಾರಿ ನಡೆಸಲಾಗುತ್ತದೆ. ಬೆಳಗ್ಗೆ 6.30ಕ್ಕೆ -ಶೃಂಗಾರ ಆರತಿ, ಮಧ್ಯಾಹ್ನ 12 ಗಂಟೆಗೆ – ಭೋಗ್ ಆರತಿ ಮತ್ತುಸಂಜೆ 7.30 – ಸಂಧ್ಯಾ ಆರತಿ ಇರುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Fri, 29 December 23