ದ್ವಾರಕದಲ್ಲಿ ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ
ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮವನ್ನು ದ್ವಾರಕದಲ್ಲಿ ಆರಂಭಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಸಮುದ್ರದ ಆಳದಲ್ಲಿರುವ ಹುದುಗಿ ಹೋಗಿದೆ ಎನ್ನಲಾದ ಪ್ರಾಚೀನ ನಗರವಾದ ದ್ವಾರಕಾದಲ್ಲಿ ಈ ಯೋಜನೆಯನ್ನು ಶೀಘ್ರ ಆರಂಭಿಸಲಾಗುತ್ತದೆ. ಜಲಾಂತರ್ಗಾಮಿ ಪ್ರವಾಸೋದ್ಯಮ ಪ್ರಾರಂಭಿಸಲು ರಾಜ್ಯದ ಸರ್ಕಾರವು ಮಜಗಾಂವ್ ಡಾಕ್ ಹಡಗು ನಿರ್ಮಾಣಗಾರರೊಂದಿಗೆ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದೆ. ಇದು ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರದೊಳಗೆ ಹೋಗುವ ಮೊದಲ ಅಂಡರ್ವಾಟರ್ ಪ್ರವಾಸೋದ್ಯಮ ಇದಾಗಿದೆ.
ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯ( Submarine Tourism)ಮವನ್ನು ದ್ವಾರಕದಲ್ಲಿ ಆರಂಭಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಸಮುದ್ರದ ಆಳದಲ್ಲಿರುವ ಹುದುಗಿ ಹೋಗಿದೆ ಎನ್ನಲಾದ ಪ್ರಾಚೀನ ನಗರವಾದ ದ್ವಾರಕಾದಲ್ಲಿ ಈ ಯೋಜನೆಯನ್ನು ಶೀಘ್ರ ಆರಂಭಿಸಲಾಗುತ್ತದೆ. ಜಲಾಂತರ್ಗಾಮಿ ಪ್ರವಾಸೋದ್ಯಮ ಪ್ರಾರಂಭಿಸಲು ರಾಜ್ಯದ ಸರ್ಕಾರವು ಮಜಗಾಂವ್ ಡಾಕ್ ಹಡಗು ನಿರ್ಮಾಣಗಾರರೊಂದಿಗೆ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದೆ. ಇದು ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರದೊಳಗೆ ಹೋಗುವ ಮೊದಲ ಅಂಡರ್ವಾಟರ್ ಪ್ರವಾಸೋದ್ಯಮ ಇದಾಗಿದೆ.
ಅಕ್ಟೋಬರ್ 2024ರಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಪ್ರವಾಸಿಗರನ್ನು ಜಲಾಂತರ್ಗಾಮಿ ಮೂಲಕ ಸಮುದ್ರದ ಬದುಕನ್ನು ನೋಡಲು 100 ಮೀ ಆಳದವರೆಗೂ ಕರೆದುಕೊಂಡು ಹೋಗಲಾಗುತ್ತದೆ. ದ್ವಾರಕಾ ನಗರದ ಅವಶೇಷಗಳನ್ನು ತೋರಿಸುತ್ತದೆ. ಎರಡು ಗಂಟೆಗಳ ಈ ದರ್ಶನ ಯಾತ್ರೆಗೆ ಗುಜರಾತ್ ಸರ್ಕಾರ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡಿದೆ.
ದ್ವಾರಕಾ ಜೊತೆಗೆ ಗುಜರಾತ್‌ನ ಪ್ರವಾಸೋದ್ಯಮ ಹೊಸ ಎತ್ತರವನ್ನು ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ದ್ವಾರಕೆಗೆ ಹೋಗುವ ಪ್ರವಾಸಿಗರು ದ್ವಾರಕಾಧೀಶನ ಜಗತ್ ಮಂದಿರಕ್ಕೆ ಭೇಟಿ ನೀಡುತ್ತಾರೆ. ಮುಳುಗಿರುವ ಶ್ರೀಕೃಷ್ಣನ ದ್ವಾರಕಾ ನಗರವನ್ನು ಈಗ ನೋಡಬಹುದು. ಈ ನಿಟ್ಟಿನಲ್ಲಿ ಜಲಾಂತರ್ಗಾಮಿ ಯೋಜನೆ ಆರಂಭಿಸಲಾಗುವುದು. ಈಗಿನ ದ್ವಾರಕಾದಿಂದ ಹಳೆ ದ್ವಾರಕೆಗೆ ಎರಡು ಗಂಟೆಯಲ್ಲಿ ಜಲಾಂತರ್ಗಾಮಿ ಮೂಲಕ ಜನರು ಹೋಗುತ್ತಾರೆ.
6 ಸಿಬ್ಬಂದಿಯೊಂದಿಗೆ 24 ಪ್ರವಾಸಿಗರು ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ವೈಬ್ರೆಂಟ್ ಶೃಂಗಸಭೆಯಲ್ಲಿ ಇದನ್ನು ಘೋಷಿಸಲಾಗುವುದು. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯು ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಜನವರಿ 10 ರಿಂದ 12 ರವರೆಗೆ ನಡೆಯಲಿದೆ.
ಮತ್ತಷ್ಟು ಓದಿ:Belagavi Session: ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ವಿಧೇಯಕ ಅಂಗೀಕಾರ: ಏನಿದು?
ಗುಜರಾತ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರಕ್ಕೆ ಭೇಟಿ ನೀಡಿದ ನಂತರ ದ್ವಾರಕಾಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳು ವೇಗ ಪಡೆದುಕೊಂಡಿದ್ದಲ್ಲದೆ, ದೇವಭೂಮಿ ದ್ವಾರಕಾದಿಂದ ದ್ವಾರಕಾ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಬಹುತೇಕ ಸಿದ್ಧವಾಗಿದೆ.