Ayodhya Ram temple aarti: ಆನ್‌ಲೈನ್‌ನಲ್ಲಿ ಆರತಿ ಪಾಸ್‌ ಬುಕ್ ಮಾಡುವುದು ಹೇಗೆ?

ದೇವಾಲಯದಲ್ಲಿ ಬೆಳಿಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ದರ್ಶನ ಸಮಯವಾಗಿದೆ.  ಭಗವಾನ್ ರಾಮ್ ಲಲ್ಲಾಗೆ ದಿನಕ್ಕೆ ಮೂರು ಬಾರಿ ಆರತಿಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ ಭಕ್ತರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿರುವವರು ಮಾತ್ರ ಮೂರು ಆರತಿಗೆ ಹಾಜರಾಗಬಹುದು. ಆನ್​​ಲೈನ್​​ನಲ್ಲಿ ಪಾಸ್ ಪಡೆಯುವುದು ಹೇಗೆ? ಇಲ್ಲಿದೆ ನಿರ್ದೇಶನ

Ayodhya Ram temple aarti: ಆನ್‌ಲೈನ್‌ನಲ್ಲಿ ಆರತಿ ಪಾಸ್‌ ಬುಕ್ ಮಾಡುವುದು ಹೇಗೆ?
ಅಯೋಧ್ಯೆ ರಾಮ ಮಂದಿರ
Follow us
ರಶ್ಮಿ ಕಲ್ಲಕಟ್ಟ
|

Updated on:Dec 29, 2023 | 2:58 PM

ದೆಹಲಿ ಡಿಸೆಂಬರ್ 29 : ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram mandhir) ಭಗವಾನ್ ರಾಮನ ಆರತಿಯಲ್ಲಿ (Ram Lalla’s aarti )ಭಾಗಿಯಾಗಲು ಬಯಸುವವರಿಗೆ  ರಾಮಮಂದಿರ ಟ್ರಸ್ಟ್ ಪಾಸ್‌ ವಿತರಿಸುತ್ತಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ  ಸಮಾರಂಭಕ್ಕೆ ಮುನ್ನ ರಾಮಲಲ್ಲಾನ ಆರತಿಗಾಗಿ ವಿಶೇಷ ಪಾಸ್‌ಗಳನ್ನು ಪಡೆಯಲು ಬುಕ್ಕಿಂಗ್ ಗುರುವಾರ ಆರಂಭವಾಗಿದೆ.

ಈ ಬಗ್ಗೆ ಮಾತನಾಡಿದ ರಾಮಮಂದಿರ ಟ್ರಸ್ಟ್‌ನ ಸದಸ್ಯರಾದ ಪ್ರಕಾಶ್ ಗುಪ್ತಾ “ವಿತರಿಸುವ ಒಟ್ಟು ಪಾಸ್‌ಗಳಲ್ಲಿ 20 ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲು ಟ್ರಸ್ಟ್ ನಿರ್ಧರಿಸಿದೆ. ಈ ಸೌಲಭ್ಯವು ನಿನ್ನೆ (ಗುರುವಾರ) ಕಾರ್ಯರೂಪಕ್ಕೆ ಬಂದಿದೆ. ಈಗ, ಆರತಿಗೆ ಹಾಜರಾಗಲು ಬಯಸುವ ವ್ಯಕ್ತಿಗಳು ತಮ್ಮ ಪಾಸ್‌ಗಳನ್ನು ಪೂರ್ವಭಾವಿಯಾಗಿ ಪಡೆಯಬಹುದು. ಮೂರು ಆರತಿಗಳಿಗೆ ತಲಾ ಇಪ್ಪತ್ತು ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಯಾರಾದರೂ ವೆಬ್‌ಸೈಟ್‌ಗೆ ಭೇಟಿ ನೀಡಹುದು ಮತ್ತು ನಂತರದ ದಿನಾಂಕಕ್ಕಾಗಿ ಪಾಸ್ ಅನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ದೇವಾಲಯದಲ್ಲಿ ಬೆಳಿಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ದರ್ಶನ ಸಮಯವಾಗಿದೆ.  ಭಗವಾನ್ ರಾಮ್ ಲಲ್ಲಾಗೆ ದಿನಕ್ಕೆ ಮೂರು ಬಾರಿ ಆರತಿಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ ಭಕ್ತರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿರುವವರು ಮಾತ್ರ ಮೂರು ಆರತಿಗೆ ಹಾಜರಾಗಬಹುದು. ಈಗಿನಂತೆ, ಪಾಸ್‌ನೊಂದಿಗೆ ಪ್ರತಿ ಆರತಿಯಲ್ಲಿ ಪಾಲ್ಗೊಳ್ಳಲು ಕೇವಲ 30 ಜನರಿಗೆ ಮಾತ್ರ ಅವಕಾಶವಿದೆ.

ಆರತಿಗಾಗಿ ಪಾಸ್‌ ಪಡೆಯುವುದು ಹೇಗೆ?

  • ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ಸೈಟ್ – srjbtkshetra.org ನಿಂದ ಪಾಸ್‌ಗಳನ್ನು ಬುಕ್ ಮಾಡಬಹುದು
  • ಮುಖಪುಟದಲ್ಲಿರುವ ‘ಆರತಿ’ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ.
  • ನೀವು ಹಾಜರಾಗಲು ಬಯಸುವ ಆರತಿಯ ಅಪೇಕ್ಷಿತ ದಿನಾಂಕ ಮತ್ತು ಪ್ರಕಾರವನ್ನು ಆಯ್ಕೆಮಾಡಿ.
  • ನಿಮ್ಮ ಹೆಸರು, ವಿಳಾಸ, ಫೋಟೋ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಒದಗಿಸಿ.
  • ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಕೌಂಟರ್‌ನಿಂದ ನಿಮ್ಮ ಪಾಸ್‌ಗಳನ್ನು ಸಂಗ್ರಹಿಸಿ ಮತ್ತು ಆರತಿ ಸಮಾರಂಭದಲ್ಲಿ ಭಾಗವಹಿಸಬಹುದು.
  • ಆರತಿ ಪಾಸ್‌ಗಳಿಗಾಗಿ ಈ ನಾಲ್ಕು ದಾಖಲೆಗಳನ್ನು ಹೊಂದಿರಬೇಕು: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಾಸ್‌ಪೋರ್ಟ್. ಯಾವುದೇ ಪರಿಶೀಲನೆ/ಸುರಕ್ಷತಾ ಕಾರ್ಯವಿಧಾನಗಳಿಗೆ ಇವುಗಳಲ್ಲಿ ಒಂದನ್ನು ಹೊಂದಿರಬೇಕು.

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಬಳಸಿದ್ದು ರಾಜಸ್ಥಾನದ ಮಕ್ರಾನ ಮಾರ್ಬಲ್, ತಮಿಳುನಾಡು ಮತ್ತು ತೆಲಂಗಾಣದ ಗ್ರಾನೈಟ್

ರಾಮ ಜನ್ಮಭೂಮಿ ಆರತಿ: ಮಾರ್ಗಸೂಚಿಗಳು

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಪಾಸ್‌ಗಳನ್ನು ಪಡೆದುಕೊಳ್ಳಲು ಅಗತ್ಯ ಮಾರ್ಗಸೂಚಿಗಳನ್ನು ಸಹ ಒದಗಿಸಿದೆ. ಅದು ಹೀಗಿದೆ

  • 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಆರತಿ ಪಾಸ್ ಅಗತ್ಯವಿಲ್ಲ.
  • ಆರತಿ ಬುಕಿಂಗ್ ಸಮಯದಲ್ಲಿ ಸಲ್ಲಿಸಿದ ID ಪ್ರೂಫ್ ನಿರ್ದಿಷ್ಟಪಡಿಸಿದ ಆರತಿ ದಿನಾಂಕದಂದು ದೇವಾಲಯದ ಪ್ರವೇಶಕ್ಕೆ ಕಡ್ಡಾಯವಾಗಿದೆ.
  • ಗಾಲಿಕುರ್ಚಿಯ ಅಗತ್ಯವಿದ್ದರೆ ದುಡ್ಡು ಕೊಟ್ಟು  ಗಾಲಿಕುರ್ಚಿ ಸಹಾಯವನ್ನು ಪಡೆಯಬಹುದು.
  • ಭಕ್ತರೊಬ್ಬರು ತಮ್ಮ ಆರತಿ ಬುಕಿಂಗ್ ಅನ್ನು ರದ್ದುಗೊಳಿಸಿದರೆ, ಲಭ್ಯವಿರುವ ಸ್ಲಾಟ್‌ಗಳು ಇತರ ಭಕ್ತರಿಗೆ ತೆರೆದಿರುತ್ತವೆ.
  • ನಿಗದಿತ ಆರತಿಗೆ 24 ಗಂಟೆಗಳ ಮೊದಲು ಹಾಜರಾತಿಯನ್ನು ಖಚಿತಪಡಿಸಲು SRJBTK SMS/ಇಮೇಲ್ ಜ್ಞಾಪನೆಯನ್ನು ಕಳುಹಿಸುತ್ತದೆ.
  • ರಿಮೈಂಡರ್ ಲಿಂಕ್ (SMS/ಇಮೇಲ್ ಮೂಲಕ) ಆರತಿ ಸಮಯಕ್ಕಿಂತ ಒಂದು ಗಂಟೆ ಮೊದಲು ಸಕ್ರಿಯವಾಗಿರುತ್ತದೆ. ಲಿಂಕ್ ಅವಧಿ ಮುಗಿಯುವ ಮೊದಲು ದಯವಿಟ್ಟು ಪ್ರತಿಕ್ರಿಯಿಸಿ.
  • Home -> Transaction History -> Select Aarti -> Update ಮೂಲಕ ಆರತಿ ವರದಿ ಮಾಡುವ ಸಮಯಕ್ಕೆ ಒಂದು ಗಂಟೆ ಮೊದಲು ಹಾಜರಾತಿಯನ್ನು ದೃಢೀಕರಿಸಿ.
  • ಭಕ್ತರು  ಸ್ಥಳದಲ್ಲಿರುವ ಆರತಿ ಪಾಸ್ ಕೌಂಟರ್‌ನಿಂದ ಪಾಸ್ ಅನ್ನು ಪಡೆದುಕೊಳ್ಳಬಹುದು.

ಆರತಿ ಸಮಯ: ದಿನಕ್ಕೆ ಮೂರು ಬಾರಿ. ರಾಮ ಜನ್ಮಭೂಮಿಯಲ್ಲಿ, ಭಗವಾನ್ ರಾಮ ಲಲ್ಲಾಗೆ ಆರತಿ ಸಮಾರಂಭಗಳನ್ನು ಪ್ರತಿದಿನ ಮೂರು ಬಾರಿ ನಡೆಸಲಾಗುತ್ತದೆ. ಬೆಳಗ್ಗೆ 6.30ಕ್ಕೆ -ಶೃಂಗಾರ ಆರತಿ, ಮಧ್ಯಾಹ್ನ 12 ಗಂಟೆಗೆ – ಭೋಗ್ ಆರತಿ ಮತ್ತುಸಂಜೆ 7.30 – ಸಂಧ್ಯಾ ಆರತಿ ಇರುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Fri, 29 December 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್