AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಿರುವ ರಾಮಲಲ್ಲಾ ವಿಗ್ರಹವನ್ನು ನಿರ್ಧರಿಸಲು ಮತದಾನ ಇಂದು

ಐದು ವರ್ಷದ ರಾಮ ಲಲ್ಲಾನನ್ನು ಚಿತ್ರಿಸುವ 51 ಇಂಚು ಎತ್ತರದ ರಾಮನ ವಿಗ್ರಹವನ್ನು ಮೂರು ವಿನ್ಯಾಸಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಬುಧವಾರ ತಿಳಿಸಿದ್ದಾರೆ. ಅತ್ಯುತ್ತಮ ದೈವಿಕತೆಯನ್ನು ಹೊಂದಿರುವ, ಮಗುವಿನಂತೆ ಕಾಣುವ ವಿಗ್ರಹವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಿರುವ ರಾಮಲಲ್ಲಾ ವಿಗ್ರಹವನ್ನು ನಿರ್ಧರಿಸಲು ಮತದಾನ ಇಂದು
ರಾಮಮಂದಿರ
ರಶ್ಮಿ ಕಲ್ಲಕಟ್ಟ
|

Updated on: Dec 29, 2023 | 3:26 PM

Share

ಅಯೋಧ್ಯೆ ಡಿಸೆಂಬರ್ 29: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಜನ್ಮಭೂಮಿಯಲ್ಲಿರುವ (Ram Janmabhoomi) ರಾಮಮಂದಿರದಲ್ಲಿ (Ram mandir) ಪ್ರತಿಷ್ಠಾಪಿಸುವ ರಾಮಲಲ್ಲಾ (Ram Lalla Idol) ವಿಗ್ರಹವನ್ನು ನಿರ್ಧರಿಸಲು ಇಂದು (ಶುಕ್ರವಾರ) ಮತದಾನ ನಡೆಯಲಿದೆ. ಜನವರಿ 22 ರಂದು ಪ್ರಾಣಪ್ರತಿಷ್ಠೆಯಾಗಲಿರುವ ವಿಗ್ರಹ ಯಾವುದು ಎಂಬುದನ್ನು ಮತದಾನ ಮೂಲಕ ನಿರ್ಧರಿಸಲಾಗುತ್ತದೆ. ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿರುವ ಟ್ರಸ್ಟ್‌ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಭೆಯಲ್ಲಿ ಮತದಾನವನ್ನು ನಡೆಸಲಾಗುತ್ತದೆ. ಪ್ರತ್ಯೇಕ ಶಿಲ್ಪಿಗಳಿಂದ ರಚಿಸಲಾದ ಮೂರು ವಿಭಿನ್ನ ವಿನ್ಯಾಸಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆದ ವಿಗ್ರಹವನ್ನು ಪ್ರತಿಷ್ಠಾಪನಾ ಸಮಾರಂಭದ ಸಮಯದಲ್ಲಿ ಗರ್ಭಗುಡಿಯೊಳಗೆ ಪ್ರತಿಪ್ಠಾಪನೆ ಮಾಡಲಾಗುತ್ತದೆ.

ಐದು ವರ್ಷದ ರಾಮ ಲಲ್ಲಾನನ್ನು ಚಿತ್ರಿಸುವ 51 ಇಂಚು ಎತ್ತರದ ರಾಮನ ವಿಗ್ರಹವನ್ನು ಮೂರು ವಿನ್ಯಾಸಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಬುಧವಾರ ತಿಳಿಸಿದ್ದಾರೆ. ಅತ್ಯುತ್ತಮ ದೈವಿಕತೆಯನ್ನು ಹೊಂದಿರುವ, ಮಗುವಿನಂತೆ ಕಾಣುವ ವಿಗ್ರಹವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪ್ರಾಣ ಪ್ರತಿಷ್ಠೆ ದಿನಾಂಕ ಸಮೀಪಿಸುತ್ತಿದ್ದಂತೆ, ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮ ಜನ್ಮಭೂಮಿ ಪಥ ಮತ್ತು ದೇವಾಲಯ ಸಂಕೀರ್ಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಸಂಪೂರ್ಣ ಯೋಜನೆಯನ್ನು ಪೂರ್ಣಗೊಳಿಸಲು ಮೂರು-ಹಂತದ ಯೋಜನೆಯೊಂದಿಗೆ ನಿರ್ಮಾಣವು ತರಾತುರಿಗಿಂತ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುತ್ತಿದೆ ಎಂದು ಮಿಶ್ರಾ ಭರವಸೆ ನೀಡಿದರು.

ಏಳು ದಿನಗಳ ಕಾಲ ನಡೆಯುವ ಪ್ರಾಣಪ್ರತಿಷ್ಠಾ ಸಮಾರಂಭವು ಜನವರಿ 16 ರಂದು ದೇವಾಲಯದ ಟ್ರಸ್ಟ್ ನೇಮಿಸಿದ ಅರ್ಚಕರು ನಡೆಸುವ ಪೂಜಾ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಸಮಾರಂಭದಲ್ಲಿ ಭಗವಾನ್ ರಾಮನ ಮಗುವಿನಂತಹ ವಿಗ್ರಹವನ್ನು ಹೊತ್ತ ಮೆರವಣಿಗೆ, ಧಾರ್ಮಿಕ ಸ್ನಾನ, ಪೂಜೆ ಇರಲಿದೆ. ಜನವರಿ 22 ರಂದು, ಬೆಳಗಿನ ಪೂಜೆಯ ನಂತರ, ಮಧ್ಯಾಹ್ನದ ಸಮಾರಂಭವು ಮಂಗಳಕರವಾದ ‘ಮೃಗಶಿರಾ ನಕ್ಷತ್ರ’ದಲ್ಲಿ ನೆರವೇರಲಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಭಾಗಿಯಾಗುವ ಸಾಧ್ಯತೆ: ಕಾಂಗ್ರೆಸ್​​​

ಅಯೋಧ್ಯೆ ದೇವಾಲಯ ಸಂಕೀರ್ಣ

ದೇವಾಲಯದ ಟ್ರಸ್ಟ್ ಸಂಕೀರ್ಣದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಅನಾವರಣಗೊಳಿಸಿದ್ದು, ಪರಿಸರ ಸುಸ್ಥಿರತೆ ಮತ್ತು ಸ್ವಾವಲಂಬನೆಗೆ ಅದರ ಬದ್ಧತೆಯನ್ನು ಒತ್ತಿಹೇಳಿದೆ. ವಿಸ್ತಾರವಾದ 70 ಎಕರೆ ಸಂಕೀರ್ಣವು ಪ್ರಧಾನವಾಗಿ ಹಚ್ಚ ಹಸಿರಿನಿಂದ ಕೂಡಿರುತ್ತದೆ, ಸರಿಸುಮಾರು 70 ಪ್ರತಿಶತವು ನೂರಾರು ಮರಗಳಿಂದ ಅಲಂಕರಿಸಲ್ಪಟ್ಟ ಹಸಿರು ಪ್ರದೇಶಕ್ಕೆ ಮೀಸಲಾಗಿರುತ್ತದೆ. ಟ್ರಸ್ಟ್ ಸಂಕೀರ್ಣದೊಳಗೆ ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕಗಳು, ಅಗ್ನಿಶಾಮಕ ದಳದ ಪೋಸ್ಟ್ ಮತ್ತು ಮೀಸಲಾದ ವಿದ್ಯುತ್ ಮಾರ್ಗದಂತಹ ಅತ್ಯಾಧುನಿಕ ಸೌಲಭ್ಯಗಳಿರಲಿವೆ. ಆತ್ಮನಿರ್ಭರ್ (ಸ್ವಾವಲಂಬಿ) ಸಂಕೀರ್ಣವು ಆಧ್ಯಾತ್ಮಿಕ ಧಾಮವಾಗುವುದಲ್ಲದೆ ಜವಾಬ್ದಾರಿಯುತ ಪರಿಸರ ಅಭ್ಯಾಸಗಳ ಮಾದರಿಯೂ ಆಗಿರುತ್ತದೆ ಎಂದು ರಾಯ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?