AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರು ಅಕಾಲಿದಳವನ್ನು ತಿರಸ್ಕರಿಸಿದ್ದಾರೆ; ಸುಖಬೀರ್ ಬಾದಲ್ ವಿರುದ್ಧ ಶಾಹಿ ಇಮಾಮ್ ವಾಗ್ದಾಳಿ

ಜನರು ಅಕಾಲಿದಳವನ್ನು ತಿರಸ್ಕರಿಸಿದ್ದಾರೆ. ಸುಖಬೀರ್ ಹೇಳಿಕೆಯು ಮುಸ್ಲಿಂ ಸಮುದಾಯದ ವಿರುದ್ಧ ಅಲ್ಲ. ಆದರೆ ಸಿಖ್ಖರು ಸುಖಬೀರ್ ಅನ್ನು ತಮ್ಮ ನಾಯಕನನ್ನಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದೆ. ಸುಖಬೀರ್ ಮುಸ್ಲಿಂ ಸಮುದಾಯಕ್ಕೆ ಮಾದರಿಯಾಗಬಾರದು ಎಂದ ಶಾಹಿ ಇಮಾಮ್.

ಜನರು ಅಕಾಲಿದಳವನ್ನು ತಿರಸ್ಕರಿಸಿದ್ದಾರೆ; ಸುಖಬೀರ್ ಬಾದಲ್ ವಿರುದ್ಧ ಶಾಹಿ ಇಮಾಮ್ ವಾಗ್ದಾಳಿ
ಅಕಾಲಿದಳ
ರಶ್ಮಿ ಕಲ್ಲಕಟ್ಟ
|

Updated on: Dec 29, 2023 | 5:07 PM

Share

ದೆಹಲಿ ಡಿಸೆಂಬರ್ 29: ಅಕಾಲಿದಳದ ಅಧ್ಯಕ್ಷ ಸುಖಬೀರ್ ಬಾದಲ್ (Sukhbir badal) ಹೇಳಿಕೆಗೆ ಪಂಜಾಬ್‌ನ (Punjab) ಶಾಹಿ ಇಮಾಮ್ ಉಸ್ಮಾನ್ ಲುಧಿಯಾನ್ವಿ (Shahi imam Usman Ludhianvi) ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.18ರಷ್ಟಿದೆ, ಆದರೆ ಒಗ್ಗಟ್ಟಿಲ್ಲ ಎಂದು ಸುಖಬೀರ್ ಬಾದಲ್ ಹೇಳಿದ್ದರು. ಶಾಹಿ ಇಮಾಮ್ ಇದನ್ನು ಖಂಡಿಸಿದ್ದು ಬಾದಲ್ ತಮ್ಮ ಬಾಲಿಶ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಶ್ರೀ ಗುರುಗ್ರಂಥ ಸಾಹೇಬನ್ನು ಅಪವಿತ್ರಗೊಳಿಸಿದ್ದನ್ನು ಬಾದಲ್ ಹೇಳಬೇಕು. ನಿರಾಯುಧ ಸಂಗತ್ ಮೇಲೆ ಗುಂಡು ಹಾರಿಸಲಾಯಿತು. ಆ ಸಮಯದಲ್ಲಿ ಸಿಖ್ ಸಮುದಾಯಕ್ಕೆ ನ್ಯಾಯವನ್ನು ನೀಡಲು ಸುಖಬೀರ್ ಸಾಧ್ಯವಾಗಲಿಲ್ಲ. ಅವರು ಇಂದು ಸಿಖ್ ಧರ್ಮದ ನಾಯಕ ಎಂದು ಹೇಗೆ ನಟಿಸುತ್ತಾರೆ? ಎಂದು ಶಾಹಿ ಇಮಾಮ್ ಕೇಳಿದ್ದಾರೆ.

ವಾಸ್ತವವಾಗಿ ಅಕಾಲಿದಳದ ಸ್ಥಿತಿ ಪಂಜಾಬ್‌ನಲ್ಲಿ ದಯನೀಯವಾಗಿ ವಿಫಲವಾಗಿದೆ ಎಂದು ಉಸ್ಮಾನ್ ಲುಧಿಯಾನ್ವಿ ಹೇಳಿದ್ದಾರೆ. ಇನ್ನು ಲೋಕಸಭೆ ಚುನಾವಣೆಯ ಬಗ್ಗೆ ಮಾತನಾಡುವುದಾದರೆ ಅಕಾಲಿದಳ ಒಂದೇ ಒಂದು ಸ್ಥಾನವನ್ನೂ ಗೆಲ್ಲುವ ಸಾಧ್ಯತೆ ಕಾಣುತ್ತಿಲ್ಲ ಎಂದಿದ್ದಾರೆ.

25 ವರ್ಷಗಳಿಂದ ಸಿಖ್ಖರಿಗೆ ಯಾವುದೇ ಕೆಲಸ ಮಾಡಿಲ್ಲ

ಸುಖಬೀರ್ ಈಗ ಧರ್ಮದ ಹೆಸರಿನಲ್ಲಿ ತನ್ನ ಜನರ ಬೆಂಬಲ ಪಡೆಯಲು ಬಯಸುತ್ತಿದ್ದಾರೆ . 25 ವರ್ಷಗಳ ಕಾಲ, ಸಿಖ್ ಸಮುದಾಯವು ಅಕಾಲಿದಳಕ್ಕೆ ಪಂಜಾಬ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ನೀಡಿತು. ಆದರೆ ಈ ವರ್ಷಗಳಲ್ಲಿ, ಅಕಾಲಿದಳದಿಂದ ಏನನ್ನೂ ಮಾಡಲಾಗಿಲ್ಲ. ಸಿಖ್ ಸಂಗತ್ ಅವರ ಮೇಲೆ ಗುಂಡು ಹಾರಿಸಲಾಯಿತು. ಆದರೆ ಸುಖಬೀರ್ ಮೌನವಾಗಿದ್ದರು. ಸುಖಬೀರ್ ಬೇಕಿದ್ದರೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ಸಂತ್ರಸ್ತರಿಗೆ ಶೀಘ್ರ ನ್ಯಾಯ ಕೊಡಬಹುದಿತ್ತು, ಆದರೆ ಮಾಡಲಿಲ್ಲ.

ಮುಸ್ಲಿಂ ಸಮುದಾಯವನ್ನು ಉದಾಹರಣೆಯಾಗಿಟ್ಟುಕೊಂಡು ಸಿಖ್ಖರ ನಾಯಕರಾಗಬೇಡಿ

ಪಂಜಾಬ್‌ನಲ್ಲಿ ಅಸಂಖ್ಯಾತ ಸಿಖ್ ಮಕ್ಕಳ ವಿರುದ್ಧ ಪೊಲೀಸರು ಅಕ್ರಮ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸುಖಬೀರ್ ಅವರ ಮೇಲೆ ಯಾವುದೇ ತನಿಖೆ ನಡೆಸಲಿಲ್ಲ. ಯುವಕರು ವಿದೇಶಕ್ಕೆ ಹೋಗುವ ಬದಲು ಪಂಜಾಬ್‌ನಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಯಾವುದೇ ಯೋಜನೆಯನ್ನು ಸುಖಬೀರ್ ಪಂಜಾಬ್‌ನಲ್ಲಿ ತಂದಿಲ್ಲ. ಜನರು ಅಕಾಲಿದಳವನ್ನು ತಿರಸ್ಕರಿಸಿದ್ದಾರೆ. ಸುಖಬೀರ್ ಹೇಳಿಕೆಯು ಮುಸ್ಲಿಂ ಸಮುದಾಯದ ವಿರುದ್ಧ ಅಲ್ಲ. ಆದರೆ ಸಿಖ್ಖರು ಸುಖಬೀರ್ ಅನ್ನು ತಮ್ಮ ನಾಯಕನನ್ನಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದೆ. ಸುಖಬೀರ್ ಮುಸ್ಲಿಂ ಸಮುದಾಯಕ್ಕೆ ಮಾದರಿಯಾಗಬಾರದು.

ಪಂಜಾಬ್‌ನಲ್ಲಿ ಸಿಖ್ಖರ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಸರ್ಕಾರದ ಮುಂದೆ ಇಡಬಲ್ಲ ಅನೇಕ ಸಿಖ್ ನಾಯಕರು ಇದ್ದಾರೆ ಎಂಬುದನ್ನು ಸುಖಬೀರ್ ಬಾದಲ್ ಈಗ ಅರ್ಥಮಾಡಿಕೊಳ್ಳಬೇಕು ಎಂದು ಶಾಹಿ ಇಮಾಮ್ ಹೇಳಿದರು. ಪಂಜಾಬ್‌ನಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್‌ಗಳ ನಡುವಿನ ಸಂಬಂಧವು ರಕ್ತ ಮತ್ತು ಮಾಂಸದಂತಿದೆ. ಸುಖಬೀರ್‌ನ ಇಂತಹ ಹೇಳಿಕೆಗಳು ಭ್ರಾತೃತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಇದನ್ನೂ ಓದಿ:ರಾಜ್ಯಸಭೆಯಲ್ಲಿ ರಾಘವ್ ಚಡ್ಡಾರನ್ನು ಪಕ್ಷದ ಹಂಗಾಮಿ ನಾಯಕರನ್ನಾಗಿ ನೇಮಿಸುವಂತೆ ಎಎಪಿ ಮನವಿ ತಿರಸ್ಕೃತ

ಸುಖಬೀರ್ ತನ್ನ ಸಲಹೆಗಾರರನ್ನು ಬದಲಾಯಿಸಬೇಕು ಎಂದು ಶಾಹಿ ಇಮಾಮ್ ಹೇಳಿದ್ದಾರೆ. ಇಂದು, ಪಂಜಾಬ್‌ನ ಜನರು ಅಕಾಲಿದಳವನ್ನು ತಿರಸ್ಕರಿಸುತ್ತಿದ್ದಾರೆ ಏಕೆಂದರೆ ಅವರು ತಪ್ಪು ಸಲಹೆಗಾರರಾಗಿದ್ದಾರೆ. ತಪ್ಪು ಸಲಹೆಗಾರ ಎಂಬ ಕಾರಣಕ್ಕೆ ಸುಖಬೀರ್ ಪಕ್ಷದ ಅಸ್ತಿತ್ವವನ್ನೇ ಕೊನೆಗೊಳಿಸಿದ್ದಾರೆ ಎಂದು ಇಮಾಮ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ