Operation Kaveri: ಲಕ್ನೋ-ಬೌಂಡ್ ವಿಮಾನದ ಮೂಲಕ ಸುಡಾನ್​​​ನಿಂದ ಭಾರತಕ್ಕೆ ಬರುತ್ತಿರುವ 16 ಭಾರತೀಯರು

|

Updated on: May 04, 2023 | 11:19 AM

ಯುದ್ಧ ಪೀಡಿತ ಸುಡಾನ್‌ನಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆತರುವ ಆಪರೇಷನ್ ಕಾವೇರಿ ಮುಂದುವರಿದೆ, ಇದೀಗ ಮತ್ತೆ ಈ ಆಪರೇಷನ್ ಮೂಲಕ 16 ಭಾರತೀಯರ ತಂಡವನ್ನು ಸೌದಿ ಅರೇಬಿಯಾದ ಜೆಡ್ಡಾದಿಂದ ಲಕ್ನೋಗೆ ವಿಮಾನದಲ್ಲಿ ಗುರುವಾರ ಹೊರಟಿದೆ.

Operation Kaveri: ಲಕ್ನೋ-ಬೌಂಡ್ ವಿಮಾನದ ಮೂಲಕ ಸುಡಾನ್​​​ನಿಂದ ಭಾರತಕ್ಕೆ ಬರುತ್ತಿರುವ 16 ಭಾರತೀಯರು
Operation Kaveri
Follow us on

ದೆಹಲಿ: ಯುದ್ಧ ಪೀಡಿತ ಸುಡಾನ್‌ನಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆತರುವ ಆಪರೇಷನ್ ಕಾವೇರಿ ಮುಂದುವರಿದೆ, ಇದೀಗ ಮತ್ತೆ ಈ ಆಪರೇಷನ್ ಮೂಲಕ 16 ಭಾರತೀಯರ ತಂಡವನ್ನು ಸೌದಿ ಅರೇಬಿಯಾದ ಜೆಡ್ಡಾದಿಂದ ಲಕ್ನೋಗೆ ವಿಮಾನದಲ್ಲಿ ಗುರುವಾರ ಹೊರಟಿದೆ. MEA ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. Operation Kaveri ಮೂಲಕ ಈಗಾಗಲೇ 16 ಜನರನ್ನು ಸ್ಥಳಾಂತರಿಸಲಾಗಿದೆ. ಇದೀಗ ಜೆಡ್ಡಾದಿಂದ ಲಕ್ನೋಗೆ ವಿಮಾನದಲ್ಲಿ ಹೊರಟಿದೆ ಎಂದು ಬರೆದಿದ್ದಾರೆ.

ಈ ವಿಮಾನದ ಮೂಲಕ ಈಗಾಗಲೇ 14 ಜನರನ್ನು ಸ್ಥಳಾಂತರಿಸಲಾಗಿದೆ. ಮತ್ತೊಂದು ವಿಮಾನವು ಜೆಡ್ಡಾದಿಂದ ಮುಂಬೈಗೆ ಹೊರಟಿದೆ ಎಂದು ಬಾಗ್ಚಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಭಾರತಕ್ಕೆ ಬರುತ್ತಿರುವ 22 ನೇ ಬ್ಯಾಚ್. 135 ಭಾರತೀಯರ ಜತೆಗೆ ಸೌದಿ ಅರೇಬಿಯಾದ ಜೆಡ್ಡಾದಿಂದ IAF C-130J ವಿಮಾನದಲ್ಲಿ ಹೊರಟಿದೆ. ಇದಕ್ಕೂ ಮುನ್ನ ಬುಧವಾರ 62 ಭಾರತೀಯ ಪ್ರಜೆಗಳು ನವದೆಹಲಿ ತಲುಪಿದ್ದರು.

ಇದನ್ನೂ ಓದಿ:Operation Kaveri: ಆಪರೇಷನ್ ಕಾವೇರಿ ಅಡಿಯಲ್ಲಿ ಇದುವರೆಗೆ ಸುಡಾನ್​​ನಿಂದ 3,200 ಭಾರತೀಯರ ಸ್ಥಳಾಂತರ

ಮಂಗಳವಾರ ದಕ್ಷಿಣ ಸುಡಾನ್‌ನ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಸುಡಾನ್‌ನಲ್ಲಿ ಸೈನ್ಯಗಳ ಮಧ್ಯೆ ನಡೆಯುತ್ತಿರುವ (ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳು (ಆರ್‌ಎಸ್‌ಎಫ್) ಏಳು ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.

ಆಪರೇಷನ್ ಕಾವೇರಿ ಅಡಿಯಲ್ಲಿ ಇದುವರೆಗೆ 3,200 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ. ನಿನ್ನೆಯವರೆಗೆ ಸುಡಾನ್​​ನಲ್ಲಿದ್ದ ಭಾರತೀಯರು ಐದು ಭಾರತೀಯ ನೌಕಾ ಹಡಗುಗಳು ಮತ್ತು ವಾಡಿ ಸಯ್ಯಿದ್​​​ನ ಮಿಲಿಟರಿ ವಾಯುನೆಲೆ ಸೇರಿದಂತೆ 13 ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಪೋರ್ಟ್ ಸುಡಾನ್‌ನಿಂದ ಹೊರಬಂದಿದ್ದಾರೆ ಎಂದು ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.

ಖಾರ್ಟೂಮ್ ನಗರದಲ್ಲಿ ನಡೆದ ದಾಳಿಗಳು ಸೇರಿದಂತೆ ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮುಂದಿನ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಖರ್ಟೂಮ್ ಮತ್ತು ಸುಡಾನ್‌ನ ಇತರ ಭಾಗಗಳಲ್ಲಿ ಏ.15ರಂದು ಸುಡಾನ್​​ ಸೈನ್ಯಗಳ ನಡುವೆ ಸಂಘರ್ಷ ಪ್ರಾರಂಭವಾಯಿತು. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಸರ್ಕಾರವು ‘ಆಪರೇಷನ್ ಕಾವೇರಿ’ ಅನ್ನು ಪ್ರಾರಂಭಿಸಿತು ಮತ್ತು ಭಾರತೀಯ ನೌಕಾ ಹಡಗುಗಳು, ಭಾರತೀಯ ವಾಯುಪಡೆಯ ವಿಮಾನಗಳು ತ್ವರಿತ ಕಾರ್ಯಚರಣೆ ನಡೆಸಿದೆ ಎಂದು AIR ವರದಿಗಾರರು ವರದಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:18 am, Thu, 4 May 23