AFSOD: ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗದ ತ್ರಿ-ಸೇವಾ ಘಟಕ ಪ್ರಧಾನ ಕಛೇರಿ ಬೆಂಗಳೂರಿನಲ್ಲಿ ಸ್ಥಾಪನೆ
ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗವು ತನ್ನ ಪ್ರಧಾನ ಕಛೇರಿಯನ್ನು ಆಗ್ರಾದಿಂದ ಬೆಂಗಳೂರಿಗೆ ಸ್ಥಳಾಂತರಿಸಿದೆ.
ದೆಹಲಿ: ಭಾರತ ಸೇನೆಯಲ್ಲಿ ಹೊಸದಾಗಿ ರಚಿಸಲಾದ ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗವನ್ನು (ಎಎಫ್‌ಎಸ್‌ಒಡಿ) ಬಲಪಡಿಸುವ ನಿಟ್ಟಿನಲ್ಲಿ ತ್ರಿ-ಸೇವಾ ಘಟಕವನ್ನು ಉತ್ತರ ಪ್ರದೇಶದ ಆಗ್ರಾದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. AFSOD (Armed Forces Special Operations Division) ಈಗಾಗಲೇ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ, ಇದು ವಿಶೇಷ ಪಡೆಗಳ ತರಬೇತಿ ಚಟುವಟಿಕೆಗಳ ಕೇಂದ್ರವಾಗಿದೆ, ಏಕೆಂದರೆ ಇದು ಪ್ಯಾರಾಚೂಟ್ ರೆಜಿಮೆಂಟ್ ಪಡೆಗಳಿಗೆ ತರಬೇತಿ ನೀಡುವ ಸೌಲಭ್ಯಗಳನ್ನು ಹೊಂದಿದೆ ಎಂದು ರಕ್ಷಣಾ ಮೂಲಗಳು ಇಲ್ಲಿ ತಿಳಿಸಿವೆ.
ಮೂರು ಸೇವೆಗಳ ನಡುವೆ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತ್ರಿ-ಸೇವಾ ಘಟಕವನ್ನು ಸ್ಥಾಪಿಸಲಾಯಿತು. AFSODಯ ಪಡೆಗಳಲ್ಲಿ ಸೇನೆಯ ಪ್ಯಾರಾ (ವಿಶೇಷ ಪಡೆಗಳು), ನೌಕಾಪಡೆಯ ಮೆರೈನ್ ಕಮಾಂಡೋಸ್ (MARCOS) ಮತ್ತು ಭಾರತೀಯ ವಾಯುಪಡೆಯ ಗರುಡ್ ಸೇರಿವೆ. ಈ ಸಿಬ್ಬಂದಿಯನ್ನು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. AFSOD ಪಡೆಗಳನ್ನು ಪಶ್ಚಿಮ ಬಂಗಾಳದ ಸಿಲಿಗುರಿ ಕಾರಿಡಾರ್‌ನಲ್ಲಿ ಭಾರತ-ಚೀನಾ ಗಡಿಯಲ್ಲಿ ನಿಯೋಜಿಸಲಾಗಿದೆ. ಆಪ್ ಕ್ಯಾಕ್ಟಸ್ ಲಿಲ್ಲಿಯಂತಹ ಬಾಹ್ಯ ಪ್ರದೇಶದ ಕಾರ್ಯಾಚರಣೆಗಳನ್ನು ಎದುರಿಸಲು ಈ ಪಡೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಪಡೆಗಳಿಗೆ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಅದರ ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ಸಾಧನಗಳನ್ನು ನೀಡುತ್ತಿದೆ.
ಇದನ್ನೂ ಓದಿ: Indian Army trains kites: ಶತ್ರು ರಾಷ್ಟ್ರಗಳ ಡ್ರೋನ್ ಹೊಡೆದುರುಳಿಸಲು ‘ಅರ್ಜುನ್’ಗೆ ತರಬೇತಿ
ಭಾರತೀಯ ಸೇನೆಯ ವಾಯುಗಾಮಿ ಕ್ಷಿಪ್ರ ಪ್ರತಿಕ್ರಿಯೆ ತಂಡಗಳ 600 ಪ್ಯಾರಾಟ್ರೂಪರ್‌ಗಳು ವಿವಿಧ ವಾಯುನೆಲೆಗಳಿಂದ ಏರ್‌ಲಿಫ್ಟ್ ಮಾಡಿದ ನಂತರ ಸಿಲಿಗುರಿ ಕಾರಿಡಾರ್ ಬಳಿ ದೊಡ್ಡ ಪ್ರಮಾಣದ ಏರ್‌ಡ್ರಾಪ್‌ಗಳನ್ನು ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.