Operation Kaveri: ಆಪರೇಷನ್ ಕಾವೇರಿ ಅಡಿಯಲ್ಲಿ ಇದುವರೆಗೆ ಸುಡಾನ್‌ನಿಂದ 3,200 ಭಾರತೀಯರ ಸ್ಥಳಾಂತರ
ಆಪರೇಷನ್ ಕಾವೇರಿ ಅಡಿಯಲ್ಲಿ ಇದುವರೆಗೆ 3,200 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ. ನಿನ್ನೆಯವರೆಗೆ ಸುಡಾನ್ನಲ್ಲಿದ್ದ ಭಾರತೀಯರು ಐದು ಭಾರತೀಯ ನೌಕಾ ಹಡಗುಗಳು ಮತ್ತು ವಾಡಿ ಸಯ್ಯಿದ್ನ ಮಿಲಿಟರಿ ವಾಯುನೆಲೆ ಸೇರಿದಂತೆ 13 ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಪೋರ್ಟ್ ಸುಡಾನ್‌ನಿಂದ ಹೊರಬಂದಿದ್ದಾರೆ.
ದೆಹಲಿ: ಯುದ್ಧಪೀಡಿತ ಸುಡಾನ್‌ನಲ್ಲಿ ಭಾರತೀಯರನ್ನು ಭಾರತಕ್ಕೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದೆ, ಸುಡಾನ್‌ನಿಂದ ಭಾರತಕ್ಕೆ ಕರೆತರಲು ಆಪರೇಷನ್ ಕಾವೇರಿ ಎಂಬ ಕಾರ್ಯಚರಣೆ ಪ್ರಾರಂಭಿಸಲಾಗಿತ್ತು. ಇದೀಗ ಆಪರೇಷನ್ ಕಾವೇರಿ ಅಡಿಯಲ್ಲಿ ಇದುವರೆಗೆ 3,200 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲಾಗಿದೆ. ನಿನ್ನೆಯವರೆಗೆ ಸುಡಾನ್ನಲ್ಲಿದ್ದ ಭಾರತೀಯರು ಐದು ಭಾರತೀಯ ನೌಕಾ ಹಡಗುಗಳು ಮತ್ತು ವಾಡಿ ಸಯ್ಯಿದ್ನ ಮಿಲಿಟರಿ ವಾಯುನೆಲೆ ಸೇರಿದಂತೆ 13 ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಪೋರ್ಟ್ ಸುಡಾನ್‌ನಿಂದ ಹೊರಬಂದಿದ್ದಾರೆ ಎಂದು ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಸುಡಾನ್‌ನ ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋರ್ಟ್ ಸುಡಾನ್‌ಗೆ ಸ್ಥಳಾಂತರಿಸಲಾಗುತ್ತದೆ.
ಖಾರ್ಟೂಮ್ ನಗರದಲ್ಲಿ ನಡೆದ ದಾಳಿಗಳು ಸೇರಿದಂತೆ ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮುಂದಿನ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Operation Kaveri: ಸುಡಾನ್‌ನಿಂದ ಇಲ್ಲಿಯವರೆಗೆ ವಾಯುಪಡೆ ಕರೆತಂದಿದ್ದು 1,400 ಭಾರತೀಯರನ್ನು
ಖರ್ಟೂಮ್ ಮತ್ತು ಸುಡಾನ್‌ನ ಇತರ ಭಾಗಗಳಲ್ಲಿ ಏ.15ರಂದು ಸುಡಾನ್ ಸೈನ್ಯಗಳ ನಡುವೆ ಸಂಘರ್ಷ ಪ್ರಾರಂಭವಾಯಿತು. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಸರ್ಕಾರವು ‘ಆಪರೇಷನ್ ಕಾವೇರಿ’ ಅನ್ನು ಪ್ರಾರಂಭಿಸಿತು ಮತ್ತು ಭಾರತೀಯ ನೌಕಾ ಹಡಗುಗಳು, ಭಾರತೀಯ ವಾಯುಪಡೆಯ ವಿಮಾನಗಳು ತ್ವರಿತ ಕಾರ್ಯಚರಣೆ ನಡೆಸಿದೆ ಎಂದು AIR ವರದಿಗಾರರು ವರದಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ