Operation Kaveri: ಸುಡಾನ್‌ನಿಂದ ಇಲ್ಲಿಯವರೆಗೆ ವಾಯುಪಡೆ ಕರೆತಂದಿದ್ದು 1,400 ಭಾರತೀಯರನ್ನು
Sudan Crisis: ಅಧಿಕಾರಿಗಳ ಪ್ರಕಾರ, ಭಾರತ ಸರ್ಕಾರವು ಸುಮಾರು 3,000 ಭಾರತೀಯ ಮೂಲದ ಪ್ರಯಾಣಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸಲಿದೆ. ಇಲ್ಲಿಯವರೆಗೆ, ಸುಮಾರು 2,500 ನಾಗರಿಕರನ್ನು ದೇಶಕ್ಕೆ ಕರೆತರಲಾಗಿದೆ.
ದೆಹಲಿ: ಕಳೆದ ವಾರ ಭಾರತವು ‘ಆಪರೇಷನ್ ಕಾವೇರಿ’ (Operation Kaveri) ಆರಂಭಿಸಿದಾಗಿನಿಂದ ಭಾರತೀಯ ವಾಯುಪಡೆ (IAF) ಸುಮಾರು 1,400 ಭಾರತೀಯ ನಾಗರಿಕರನ್ನು ಯುದ್ಧ ಪೀಡಿತ ಸುಡಾನ್‌ನಿಂದ (Sudan) ಮರಳಿ ಕರೆತಂದಿದೆ. ಎರಡು C-130 J ವಿಮಾನಗಳು 90 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಸೇರಿದಂತೆ 260 ಜನರನ್ನು ಸ್ಥಳಾಂತರಿಸಿವೆ ಎಂದು ವಾಯುಪಡೆ ಮಾಹಿತಿ ನೀಡಿದೆ. ಪ್ರಯಾಣಿಕರಲ್ಲಿ ಒಬ್ಬರು 102 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಅದು ಹೇಳಿದೆ. ಹಿಂದಿನ ದಿನ ಸುಡಾನ್‌ನಿಂದ ಒಟ್ಟು 186 ಭಾರತೀಯರು ಆಪರೇಷನ್ ಕಾವೇರಿ ಅಡಿಯಲ್ಲಿ ಕೊಚ್ಚಿಗೆ ಆಗಮಿಸಿದ್ದಾರೆ. ಇವರನ್ನು ಜಿದ್ದಾದಿಂದ ಕರೆ ತರಲಾಗಿದೆ. ಆಪರೇಷನ್ ಕಾವೇರಿ ಭಾರತೀಯರನ್ನು ಮನೆಗೆ ಕರೆತರುವುದನ್ನು ಮುಂದುವರೆಸಿದೆ. 186 ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನ ಕೊಚ್ಚಿಗೆ ತಲುಪಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಭಾರತ ಸರ್ಕಾರವು ಸುಮಾರು 3,000 ಭಾರತೀಯ ಮೂಲದ ಪ್ರಯಾಣಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸಲಿದೆ. ಇಲ್ಲಿಯವರೆಗೆ, ಸುಮಾರು 2,500 ನಾಗರಿಕರನ್ನು ದೇಶಕ್ಕೆ ಕರೆತರಲಾಗಿದೆ.
#OperationKaveri Update.
With almost 1400 Indians evacuated in IAF aircraft over the past few days, two C-130 J aircraft have evacuated 260 personnel including elders who were above 90 years of age & one above 102 years of age.#HarKaamDeshKeNaam pic.twitter.com/Chuo1DBCtu
— Indian Air Force (@IAF_MCC) May 1, 2023
ಖಾರ್ಟೋಮ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್ ಪ್ರಕಾರ, ಸುಡಾನ್‌ನಲ್ಲಿ ಸುಮಾರು 2,800 ಭಾರತೀಯ ಪ್ರಜೆಗಳಿದ್ದರು. ಇದರೊಂದಿಗೆ, ಸುಮಾರು 150 ವರ್ಷಗಳಿಂದ ದೇಶದಲ್ಲಿ ನೆಲೆಸಿರುವ 1,200 ಜನರ ನೆಲೆಸಿರುವ ಭಾರತೀಯ ಸಮುದಾಯವೂ ಇದೆ.
ಐಎಎಫ್ ವಿಮಾನಗಳ ಹೊರತಾಗಿ, ಇಂಡಿಗೋ ಆಪರೇಷನ್ ಕಾವೇರಿಯ ಭಾಗವಾಗಿ ಸೌದಿ ಅರೇಬಿಯಾದ ಜಿದ್ದಾದಿಂದ ಕ್ರಮವಾಗಿ ದೆಹಲಿ ಮತ್ತು ಬೆಂಗಳೂರಿಗೆ ಎರಡು ವಿಮಾನಗಳನ್ನು ನಿರ್ವಹಿಸುತ್ತಿದೆ.
ಇದನ್ನೂ ಓದಿ: Fact Check: ಪ್ರಧಾನಿ ಮೋದಿಯವರ ಮನ್ ಕಿ ಬಾತ್ ನ ಪ್ರತಿ ಸಂಚಿಕೆಗೆ ₹8.3 ಕೋಟಿ ವೆಚ್ಚ? ವೈರಲ್ ಸಂದೇಶದ ಸತ್ಯಾಸತ್ಯತೆ ಇಲ್ಲಿದೆ
ಸುಡಾನ್ ಸೈನ್ಯದ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅವರ ಉಪನಾಯಕ ಅರೆಸೇನಾ ಕ್ಷಿಪ್ರ ಬೆಂಬಲ ಸೈನಿಕರ (RSF) ಕಮಾಂಡರ್ ಮೊಹಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಸೈನಿಕರ ನಡುವಿನ ಹೋರಾಟದ ನಂತರ ಸುಡಾನ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ವರದಿಗಳ ಪ್ರಕಾರ, ಇದುವರೆಗೆ ಹಿಂಸಾಚಾರದಲ್ಲಿ ಕನಿಷ್ಠ 528 ಜನರು ಸಾವನ್ನಪ್ಪಿದ್ದಾರೆ ಮತ್ತು 4,599 ಮಂದಿ ಗಾಯಗೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ