AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಿರತ ಕುಸ್ತಿಪಟುಗಳಿಗೆ ಸಾಥ್ ನೀಡಿದ ನವಜೋತ್ ಸಿಂಗ್ ಸಿಧು

ಅವರು ಅಧಿಕಾರದಲ್ಲಿರುವಾಗ ನ್ಯಾಯಯುತ ತನಿಖೆ ಅಸಾಧ್ಯ. ಸಮಿತಿಯ ರಚನೆಗಳು ವಿಳಂಬವಾಗಿರುವ ದ್ದೇ ದೇಶದ ಜನರಿಗೆ ಅರ್ಥವಾಗಿದೆ. ಅರ್ಥಪೂರ್ಣ ತನಿಖೆಗೆ ಮತ್ತು ಸತ್ಯವನ್ನು ಬಹಿರಂಗಪಡಿಸುವ ಏಕೈಕ ಮಾರ್ಗವೆಂದರೆ "ಕಸ್ಟಡಿಯಲ್ ವಿಚಾರಣೆ" , ಅದು ಇಲ್ಲದೆ ನ್ಯಾಯಯುತ ತನಿಖೆ ಅರ್ಥಹೀನ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಿರತ ಕುಸ್ತಿಪಟುಗಳಿಗೆ ಸಾಥ್ ನೀಡಿದ ನವಜೋತ್ ಸಿಂಗ್ ಸಿಧು
ಪ್ರತಿಭಟನೆಯಲ್ಲಿ ನವಜೋತ್ ಸಿಂಗ್ ಸಿಧು
ರಶ್ಮಿ ಕಲ್ಲಕಟ್ಟ
|

Updated on: May 01, 2023 | 2:31 PM

Share

ಭಾರತದ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu)ಸೋಮವಾರ ಸಾಥ್ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಚಿತ್ರಗಳನ್ನು ಟ್ವೀಟ್ ಮಾಡಿದ ಸಿಧು,”ಪ್ರತಿಯೊಬ್ಬ ಮಹಿಳೆಯ ಗೌರವ, ಸಮಗ್ರತೆ ಮತ್ತು ಘನತೆಗಾಗಿ ಈ ಹೋರಾಟ ಎಂದು ಹೇಳಿದ್ದಾರೆ. ಅದೇ ವೆ ಡಬ್ಲ್ಯುಎಫ್‌ಐ ಮುಖ್ಯಸ್ಥನ ವಿರುದ್ಧ ಕಸ್ಟಡಿ ವಿಚಾರಣೆಗೆ ಅವರು ಒತ್ತಾಯಿಸಿದರು. ಬ್ರಿಜ್ ಭೂಷಣ್ ವಿರುದ್ಧದ ಎಫ್‌ಐಆರ್ ಏಕೆ ವಿಳಂಬವಾಯಿತು ಎಂದು ಪ್ರಶ್ನಿಸಿದ ಸಿಧು, ಯಾವುದು ಸರಿ ಮತ್ತು ಯಾವುದು ಮಾಡಬಾರದು ಎಂಬುದು ಗೊತ್ತಿದ್ದೂ ಈ ರೀತಿ ಮಾಡಿದ್ದು ಹೇಡಿತನ ಎಂದು ಹೇಳಿದರು. ಎಫ್‌ಐಆರ್ ಅನ್ನು ಸಾರ್ವಜನಿಕಗೊಳಿಸದಿರುವುದು ಎಫ್‌ಐಆರ್ ತೀವ್ರವಾಗಿಲ್ಲ ಮತ್ತು ದೂರುದಾರರ ದೂರನ್ನು ದೃಢೀಕರಿಸುವುದಿಲ್ಲ ಎಂದು ಪ್ರತಿಬಿಂಬಿಸುತ್ತದೆ. ಈ ಉದ್ದೇಶವು ಪ್ರಶ್ನಾರ್ಹವಾಗಿದೆ. ಇದು ಆರೋಪಿಯನ್ನು ರಕ್ಷಿಸುವ ಉದ್ದೇಶವಾಗಿದೆ. ವಿಷಯಗಳನ್ನು ಸದ್ದಿಲ್ಲದೆ ತಳ್ಳಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಎಫ್‌ಐಆರ್ ಅನ್ನು ವಿಳಂಬ ಮಾಡಿದ ಅಧಿಕಾರಿಯನ್ನು ಐಪಿಸಿಯ ಸೆಕ್ಷನ್ 166 ರ ಅಡಿಯಲ್ಲಿ ಏಕೆ ವಿಚಾರಣೆಗೆ ಒಳಪಡಿಸಲಾಗಿಲ್ಲ? ಲಲಿತಾ ಕುಮಾರಿ vs ಯುಪಿ ಸರ್ಕಾರದ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಎಫ್‌ಐಆರ್ ನೋಂದಣಿ ಕಡ್ಡಾಯ ಎಂದು ಸಿಧು ಹೇಳಿದ್ದಾರೆ. ಸಾಕ್ಷಿ ಮಲಿಕ್, ಭಜರಂಗ್ ಪುನಿಯಾ ಸೇರಿದಂತೆ ದೇಶದ ಪ್ರಮುಖ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಆರು ದಿನಗಳ ನಂತರ, ದೆಹಲಿ ಪೊಲೀಸರು ಏಪ್ರಿಲ್ 28 ರಂದು ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಮೊದಲ ಎಫ್‌ಐಆರ್ ಅನ್ನು ಪೋಕ್ಸೊ ಅಡಿಯಲ್ಲಿ ದಾಖಲಿಸಲಾಗಿದೆ. ಎರಡನೇ ಎಫ್‌ಐಆರ್ ಅನ್ನು ಲೈಂಗಿರ ದೌರ್ಜನ್ಯಕ್ಕೆ ಸಂಬಂಧಿಸಿದ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಇತರ ದೂರುದಾರರು ನೀಡಿದ ದೂರುಗಳ ಬಗ್ಗೆ ಸಮಗ್ರ ತನಿಖೆಗಾಗಿ ದಾಖಲಿಸಲಾಗಿದೆ. ಈ ಕುರಿತು ಪ್ರಶ್ನಿಸಿದ ಸಿಧು ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳು ಜಾಮೀನು ರಹಿತವಾಗಿವೆ. ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ? ಉನ್ನತ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಕಾನೂನು ವಿಭಿನ್ನವಾಗಿದೆಯೇ? ಆ ವ್ಯಕ್ತಿ ಯಾರೊಬ್ಬರ ವೃತ್ತಿಜೀವನವನ್ನು ಮುಗಿಸಬಹುದು. ಅಂಥಾ ವ್ಯಕ್ತಿ ಪ್ರಭಾವಿ ಸ್ಥಾನದಲ್ಲಿ ಮುಂದುವರಿಯಬಹುದೆ?

ಅವರು ಅಧಿಕಾರದಲ್ಲಿರುವಾಗ ನ್ಯಾಯಯುತ ತನಿಖೆ ಅಸಾಧ್ಯ. ಸಮಿತಿಯ ರಚನೆಗಳು ವಿಳಂಬವಾಗಿರುವ ದ್ದೇ ದೇಶದ ಜನರಿಗೆ ಅರ್ಥವಾಗಿದೆ. ಅರ್ಥಪೂರ್ಣ ತನಿಖೆಗೆ ಮತ್ತು ಸತ್ಯವನ್ನು ಬಹಿರಂಗಪಡಿಸುವ ಏಕೈಕ ಮಾರ್ಗವೆಂದರೆ “ಕಸ್ಟಡಿಯಲ್ ವಿಚಾರಣೆ” , ಅದು ಇಲ್ಲದೆ ನ್ಯಾಯಯುತ ತನಿಖೆ ಅರ್ಥಹೀನ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಕ್ಕೆ ಕೀರ್ತಿ ತಂದಂತಹ ಉನ್ನತ ಗೌರವ ಮತ್ತು ಸಾಧನೆಯ ಮಹಿಳೆಯರನ್ನು ಇಷ್ಟು ಹೀನಾಯವಾಗಿ ನಡೆಸಿಕೊಂಡರೆ ಬೀದಿಗಿಳಿದವರ ಗತಿಯೇನು ಎಂದು ಊಹಿಸಿಕೊಳ್ಳಿ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿಹಣಕಾಸಿನ ಮೂಲ ಬಹಿರಂಗಪಡಿಸಲು ನಿರಾಕರಿಸಿದ ಅಮೃತಪಾಲ್ ಸಿಂಗ್, ಅದಕ್ಕೂ ಕಾರಣವಿದೆ ಎಂದ ಪಂಜಾಬ್ ಪೊಲೀಸ್

ಭಾನುವಾರ ಸುಪ್ರೀಂ ಕೋರ್ಟ್‌ನ ನಿರ್ದೇಶನದ ನಂತರ, ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿದ ಅಪ್ರಾಪ್ತ ವಯಸ್ಕ ಸೇರಿದಂತೆ ಮಹಿಳಾ ಕುಸ್ತಿಪಟುಗಳಿಗೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದರು. ದೂರುದಾರರು ತಮ್ಮ ಹೇಳಿಕೆಗಳನ್ನು ಶೀಘ್ರದಲ್ಲಿ ದಾಖಲಿಸಿಕೊಳ್ಳುವಂತೆ ತಿಳಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ