ಹಣಕಾಸಿನ ಮೂಲ ಬಹಿರಂಗಪಡಿಸಲು ನಿರಾಕರಿಸಿದ ಅಮೃತಪಾಲ್ ಸಿಂಗ್, ಅದಕ್ಕೂ ಕಾರಣವಿದೆ ಎಂದ ಪಂಜಾಬ್ ಪೊಲೀಸ್
Amritpal Singh: ಅವರು ದೀರ್ಘಕಾಲದವರೆಗೆ ಈ ಹೋರಾಟವನ್ನು ಮಾಡಲು ಬಯಸುತ್ತಾರೆ. ಲಂಬೀ ರೇಸ್ ಕಾ ಘೋಡಾ.ಇದು ಅಪಾಯಕಾರಿ.ಅವರು ಡ್ರಗ್ಸ್ ಮತ್ತು ಕ್ರಿಶ್ಚಿಯನ್ ಮಿಷನರಿಗಳ ಮತಾಂತರದ ವಿರುದ್ಧ ಹೋರಾಡುತ್ತೇನೆ ಎಂದು ಹೇಳುತ್ತಾರೆ. ಹಾಗೆ ಮಾಡದಂತೆ ನಾವು ಖಚಿತ ಪಡಿಸುತ್ತೇವೆ ಎಂದಿದ್ದಾರೆ ಪಂಜಾಬ್ ಪೊಲೀಸ್
ದೆಹಲಿ: ಪ್ರಸ್ತುತ ಅಸ್ಸಾಂನ (Assam) ದಿಬ್ರುಗಢ್ (Dibrugarh)ಸೆಂಟ್ರಲ್ ಜೈಲಿನಲ್ಲಿರುವ ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ (Amritpal Singh) ತಮ್ಮ ಹಣಕಾಸಿನ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಮಿತಿಯನ್ನು ತಾವು ದಾಟುವುದಿಲ್ಲ ಎಂದು ಹೇಳಿರುವುದಾಗಿ ಪಂಜಾಬ್ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ. ಹೀಗೆ ಹಣಕಾಸಿನ ಮೂಲ ಬಹಿರಂಗ ಪಡಿಸಿದರೆ ಶಾಂತಿ ಮತ್ತು ಭದ್ರತೆಗೆ ಸಂಭಾವ್ಯ ಬೆದರಿಕೆಯುಂಟಾಗಬಹುದು ಎಂದು ಅಮೃತಪಾಲ್ ಸಿಂಗ್ ಹೇಳಿರುವುದಾಗಿ ಪಂಜಾಬ್ ಪೊಲೀಸರು ಹೇಳಿದ್ದಾರೆ ಎಂಬುದು ವರದಿಯಲ್ಲಿದೆ. ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಮತ್ತು ಸಂಘಟನೆಯ ಇತರ ಒಂಬತ್ತು ಕಾರ್ಯಕರ್ತರನ್ನು ಪಂಜಾಬ್‌ನಿಂದ ಬಂಧಿಸಿದ ನಂತರ ದಿಬ್ರುಗಢ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿದೆ. ಅಮೃತಪಾಲ್ ಮತ್ತು ಅವರ ಸಹಚರರ ಮೇಲೆ ವರ್ಗಗಳ ನಡುವೆ ದ್ವೇಷ ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಸಂಬಂಧ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ನ್ಯೂಸ್ 18 ‘ವಿಶೇಷ’ ವರದಿಯಲ್ಲಿ ತಾನು ಪಂಜಾಬ್‌ನಲ್ಲಿನ ಮಾದಕವಸ್ತು ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುವುದಾಗಿ ಪಂಜಾಬ್ ಗೆ ಪೊಲೀಸರಿಗೆ ಹೇಳಿದ್ದಾರೆ ಎನ್ನಲಾಗಿದೆ. ಅವರು ಶಾಂತಿಯುತ ಚಳುವಳಿಯನ್ನು ಪ್ರಾರಂಭಿಸಿದರೆ ಮತ್ತು ಬೆಂಬಲ ಗಳಿಸಿದರೆ ಅದು ಅಪಾಯಕಾರಿ. ಅದು ಸಂಭವಿಸುವುದನ್ನು ನಾವು ನಿಲ್ಲಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅವರು ದೀರ್ಘಕಾಲದವರೆಗೆ ಈ ಹೋರಾಟವನ್ನು ಮಾಡಲು ಬಯಸುತ್ತಾರೆ. ಲಂಬೀ ರೇಸ್ ಕಾ ಘೋಡಾ.ಇದು ಅಪಾಯಕಾರಿ.ಅವರು ಡ್ರಗ್ಸ್ ಮತ್ತು ಕ್ರಿಶ್ಚಿಯನ್ ಮಿಷನರಿಗಳ ಮತಾಂತರದ ವಿರುದ್ಧ ಹೋರಾಡುತ್ತೇನೆ ಎಂದು ಹೇಳುತ್ತಾರೆ. ಹಾಗೆ ಮಾಡದಂತೆ ನಾವು ಖಚಿತ ಪಡಿಸುತ್ತೇವೆ ಎಂದಿದ್ದಾರೆ ಪಂಜಾಬ್ ಪೊಲೀಸ್
ಅಮೃತಪಾಲ್ ಸಿಂಗ್ ಜೈಲಿನಲ್ಲಿ ಹೆಚ್ಚಿನ ಉತ್ಸಾಹದಲ್ಲಿದ್ದಾನೆ ಎಂದು ಆತನ ವಕೀಲ ಭಗವಂತ್ ಸಿಂಗ್ ಸಿಯಾಲ್ಕಾ ಹೇಳಿದ್ದಾರೆ. ಇತ್ತೀಚೆಗೆ ದಿಬ್ರುಗಢಕ್ಕೆ ಭೇಟಿ ನೀಡಿ ಜೈಲಿನಲ್ಲಿ ಭೇಟಿಯಾದ ಬಂಧಿತ ‘ವಾರಿಸ್ ಪಂಜಾಬ್ ದೇ’ ಕಾರ್ಯಕರ್ತರ ಕುಟುಂಬ ಸದಸ್ಯರೊಂದಿಗೆ ಸಿಯಾಲ್ಕಾ ತೆರಳಿದ್ದರು.
ಸಿಂಗ್ ಗುರುಮುಖಿಯಲ್ಲಿ ಬರೆದ ಪತ್ರವನ್ನು ಜೈಲಿನೊಳಗೆ ಸಿಯಾಲ್ಕಾಗೆ ಹಸ್ತಾಂತರಿಸಿದ್ದಾರೆ. ಅದರಲ್ಲಿ ಅವರು ಸರ್ವಶಕ್ತನ ಆಶೀರ್ವಾದದೊಂದಿಗೆ, ನಾನು ಇಲ್ಲಿ ಚಡ್ದೀ ಕಲಾ(ಹೆಚ್ಚಿನ ಉತ್ಸಾಹ)ದಲ್ಲಿದ್ದೇನೆ ಎಂದು ಬರೆದಿದ್ದಾರೆ. ತನ್ನ ಸಂಘಟನೆಯ ಸದಸ್ಯರ ವಿರುದ್ಧ ದಾಖಲಾದ ಪ್ರಕರಣಗಳನ್ನು ಉಲ್ಲೇಖಿಸಿದ ಅಮೃತಪಾಲ್, ಪಂಜಾಬ್ ಸರ್ಕಾರವು ಸಿಖ್ಖರ ವಿರುದ್ಧ ಹಲವಾರು ನಕಲಿ ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಪಿಸಿದರು.
ಈ ಸಂಪೂರ್ಣ ವಿಷಯವು ‘ಖಾಲ್ಸಾ ಪಂಥ್’ಗೆ ಸಂಬಂಧಿಸಿದೆ.ಈ ಎಲ್ಲಾ ಪ್ರಕರಣಗಳನ್ನು ಮುಂದುವರಿಸಲು ಸಮರ್ಥ ವಕೀಲರ ಸಮಿತಿಯನ್ನು ಸ್ಥಾಪಿಸಬೇಕು ಎಂದು ನಾನು ‘ಪಂಥ್’ಗೆ ಮನವಿ ಮಾಡುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಯಾವುದೇ ಸ್ಟಾರ್ಟ್ಅಪ್ಗಳಿಗಿಂತ ಹೆಚ್ಚು ಎಫ್‌ಡಿಐ ಭಾರತಕ್ಕೆ ತಂದಿದ್ದೇವೆ: ಬೈಜೂಸ್ ಸಿಇಒ ಬೈಜು ರವೀಂದ್ರನ್
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (ಎಸ್‌ಜಿಪಿಸಿ) ಕಾರ್ಯಕಾರಿ ಸದಸ್ಯರೂ ಆಗಿರುವ ಸಿಯಾಲ್ಕಾ, ದಿಬ್ರುಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಶೇಷ ವಕೀಲರ ಸಮಿತಿಯನ್ನು ರಚಿಸಲಾಗುವುದು. ಅದರ ಸದಸ್ಯರು ತಮ್ಮ ನ್ಯಾಯಾಂಗ ಪ್ರಕ್ರಿಯೆಯನ್ನು ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ