AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಪ್ರಧಾನಿ ಮೋದಿಯವರ ಮನ್ ಕಿ ಬಾತ್ ನ ಪ್ರತಿ ಸಂಚಿಕೆಗೆ ₹8.3 ಕೋಟಿ ವೆಚ್ಚ? ವೈರಲ್ ಸಂದೇಶದ ಸತ್ಯಾಸತ್ಯತೆ ಇಲ್ಲಿದೆ

ಇಲ್ಲಿಯವರೆಗೆ ಜಾಹೀರಾತುಗಳಿಗೆ 830 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬ ವೈರಲ್ ಸಂದೇಶ ಸತ್ಯಕ್ಕೆ ದೂರವಾದುದು ಎಂದು ಪಿಬಿಐ ಫ್ಯಾಕ್ಟ್ ಚೆಕ್ (Fact Check) ಯುನಿಟ್ ಟ್ವೀಟ್ ಮಾಡಿದೆ.

Fact Check: ಪ್ರಧಾನಿ ಮೋದಿಯವರ ಮನ್ ಕಿ ಬಾತ್ ನ ಪ್ರತಿ ಸಂಚಿಕೆಗೆ ₹8.3 ಕೋಟಿ ವೆಚ್ಚ? ವೈರಲ್ ಸಂದೇಶದ ಸತ್ಯಾಸತ್ಯತೆ ಇಲ್ಲಿದೆ
ಮೋದಿ ಮನ್ ಕಿ ಬಾತ್ ಬಗ್ಗೆ ವೈರಲ್ ಆಗಿರುವ ತಪ್ಪು ಸಂದೇಶ
ರಶ್ಮಿ ಕಲ್ಲಕಟ್ಟ
|

Updated on: May 01, 2023 | 3:09 PM

Share

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಾಸಿಕ ಭಾಷಣ ಮನ್ ಕಿ ಬಾತ್ (Mann Ki Baat) ಭಾನುವಾರ ತನ್ನ 100 ನೇ ಸಂಚಿಕೆಯನ್ನು ಪೂರ್ಣಗೊಳಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟೊಂದು ವೈರಲ್ ಆಗಿದ್ದು ಅದರಲ್ಲಿ, ಪ್ರಧಾನಮಂತ್ರಿಯವರ ಮನ್ ಕಿ ಬಾತ್​​ನ  ಪ್ರತಿ ಸಂಚಿಕೆಗೆ ₹8.3 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಇಲ್ಲಿಯವರೆಗೆ ಜಾಹೀರಾತುಗಳಿಗೆ 830 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದೆ. ಆದಾಗ್ಯೂ, ಈ ವೈರಲ್ ಸಂದೇಶದಲ್ಲಿ ಹೇಳಿರುವುದು ಸತ್ಯಕ್ಕೆ ದೂರವಾದುದು ಎಂದು ಪಿಬಿಐ ಫ್ಯಾಕ್ಟ್ ಚೆಕ್ (Fact Check) ಯುನಿಟ್ ಟ್ವೀಟ್ ಮಾಡಿದೆ.

ಈ ಪೋಸ್ಟ್ ನಲ್ಲಿ ಹೇಳಿರುವುದು ಸುಳ್ಳುಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಘಟಕ ಹೇಳಿದೆ. ಇದರ ಪ್ರಕಾರ 8.3 ಕೋಟಿ ರೂ ಎಂಬುದು ಮನ್ ಕಿ ಬಾತ್‌ಗಾಗಿ ಇಲ್ಲಿಯವರೆಗೆ ಸಿಕ್ಕ ಒಟ್ಟು ಜಾಹೀರಾತುಗಳ ಅಂಕಿಅಂಶವಾಗಿದೆ. ವೈರಲ್ ಸಂದೇಶದಲ್ಲಿ ಹೇಳಿದಂತೆ ಒಂದು ಸಂಚಿಕೆಗಾಗಿ ಅಲ್ಲ. ಪ್ರತಿ ಸಂಚಿಕೆ ಜಾಹೀರಾತನ್ನೇ ಅವಲಂಬಿಸಿದೆ ಎಂದು ವೈರಲ್ ಪೋಸ್ಟ್ ಹೇಳುತ್ತಿದೆ. ಅದು ತಪ್ಪು ಎಂದು  ಪಿಐಬಿ ಫ್ಯಾಕ್ಟ್ ಚೆಕ್ ಘಟಕ ಹೇಳಿದೆ.

ಮನ್ ಕಿ ಬಾತ್ 100ನೇ ಸಂಚಿಕೆ

ಮನ್ ಕಿ ಬಾತ್ ಸರಣಿಯು ಭಾನುವಾರ ತನ್ನ 100 ನೇ ಸಂಚಿಕೆಯನ್ನು ಪೂರ್ಣಗೊಳಿಸಿದೆ. ಈ ಸಂಚಿಕೆಯನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಿಂದಲೂ ನೇರ ಪ್ರಸಾರ ಮಾಡಲಾಯಿತು. ಮನ್ ಕಿ ಬಾತ್ ಅನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಆಕಾಶವಾಣಿಯ 500ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳಿಂದ ಮನ್ ಕಿ ಬಾತ್ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಿರತ ಕುಸ್ತಿಪಟುಗಳಿಗೆ ಸಾಥ್ ನೀಡಿದ ನವಜೋತ್ ಸಿಂಗ್ ಸಿಧು

ಇದನ್ನು ಮೊದಲು ಅಕ್ಟೋಬರ್ 3, 2014 ರಂದು ಪ್ರಸಾರ ಮಾಡಲಾಯಿತು. ಪ್ರತಿ ತಿಂಗಳ ಕೊನೆಯ ಭಾನುವಾರದಂದು 11 ಗಂಟೆಗೆ ಆಲ್ ಇಂಡಿಯಾ ರೇಡಿಯೋ (AIR) ಮತ್ತು ದೂರದರ್ಶನ (DD) ನೆಟ್‌ವರ್ಕ್‌ನಲ್ಲಿ ಇದು ಪ್ರಸಾರವಾಗುತ್ತದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ