ಕೊಚ್ಚಿ: ಕ್ರೂರಿ ಕೊರೊನಾ ಲಾಕ್ಡೌನ್ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಪರಡಾಡುತ್ತಿದ್ದ ಭಾರತೀಯರನ್ನು INS ಜಲಾಶ್ವ ಕರೆತಂದಿದೆ. ಮಾಲ್ಡೀವ್ಸ್ನಲ್ಲಿ ಸಿಲುಕಿದ್ದ 588 ಭಾರತೀಯರನ್ನು ಇಂದು ಕೇರಳದ ಕೊಚ್ಚಿಗೆ ಕರೆತರಲಾಗಿದೆ.
ಅನಿವಾಸಿ ಭಾರತೀಯರನ್ನು ಕರೆತರಲು ಮುಂಬೈನ ಕರಾವಳಿ ತೀರದಿಂದ ಐಎನ್ಎಸ್ ಜಲಾಶ್ವ ಹಡಗನ್ನು ಕಳುಹಿಸಲಾಗಿತ್ತು. ಆಪರೇಷನ್ ಸಮುದ್ರ ಸೇತು ಹೆಸರಿನಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಹಡಗಿನಲ್ಲಿ ಕರೆತರಲಾಗುತ್ತಿದೆ.
ಅದರಂತೆ ಮಾಲ್ಡೀವ್ಸ್ನಲ್ಲಿರುವ ಭಾರತೀಯರನ್ನು ವೈದ್ಯಕೀಯ ತಪಾಸಣೆ ನಡೆಸಿ ಕೇರಳದ ಕೊಚ್ಚಿಗೆ ಕರೆತರಲಾಗಿದೆ. ಇಂದು ಮತ್ತೊಮ್ಮೆ ಕೊಚ್ಚಿಯಲ್ಲಿ 588 ಭಾರತೀಯರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.