ಇಡೀ ದೇಶಾದ್ಯಂತ ಕೊರೊನಾ ಕ್ರಿಮಿ ತಾಂಡವವಾಡುತ್ತಿದೆ. ಸಿಕ್ಕಸಿಕ್ಕವರ ದೇಹಹೊಕ್ಕಿ ಅಟ್ಟಹಾಸ ಮೆರೆಯುತ್ತಿದೆ. ಎಷ್ಟೇ ಕ್ರಮಗಳನ್ನು ಕೈಗೊಂಡ್ರೂ ಕೊರೊನಾ ನಿಯಂತ್ರಣಕ್ಕೆ ಬರ್ತಿಲ್ಲ. ಈ ನಡುವೆ ಲಾಕ್‌ಡೌನ್ 3.0 ಅಜ್ಞಾತವಾಸಕ್ಕೆ ಇಂದು ಫುಲ್ಸ್ಟಾಪ್ ಬೀಳ್ತಿದೆ. ಈ ಮಧ್ಯೆ ಕೆಲವು ರಾಜ್ಯಗಳು ಲಾಕ್‌ಡೌನ್ 4.O ಅನೌನ್ಸ್ ಮಾಡಿವೆ. ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಆಯಾ ರಾಜ್ಯ ಸರ್ಕಾರಗಳು ಪಣತೊಟ್ಟಿವೆ. ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡಿನಲ್ಲಿ ಮೇ 31ರವರೆಗೂ ಲಾಕ್‌ಡೌನ್ ವಿಸ್ತರಣೆ ಮಾಡಿ ಆಯಾ ರಾಜ್ಯ […]
ಇಡೀ ದೇಶಾದ್ಯಂತ ಕೊರೊನಾ ಕ್ರಿಮಿ ತಾಂಡವವಾಡುತ್ತಿದೆ. ಸಿಕ್ಕಸಿಕ್ಕವರ ದೇಹಹೊಕ್ಕಿ ಅಟ್ಟಹಾಸ ಮೆರೆಯುತ್ತಿದೆ. ಎಷ್ಟೇ ಕ್ರಮಗಳನ್ನು ಕೈಗೊಂಡ್ರೂ ಕೊರೊನಾ ನಿಯಂತ್ರಣಕ್ಕೆ ಬರ್ತಿಲ್ಲ. ಈ ನಡುವೆ ಲಾಕ್‌ಡೌನ್ 3.0 ಅಜ್ಞಾತವಾಸಕ್ಕೆ ಇಂದು ಫುಲ್ಸ್ಟಾಪ್ ಬೀಳ್ತಿದೆ. ಈ ಮಧ್ಯೆ ಕೆಲವು ರಾಜ್ಯಗಳು ಲಾಕ್‌ಡೌನ್ 4.O ಅನೌನ್ಸ್ ಮಾಡಿವೆ.
ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಆಯಾ ರಾಜ್ಯ ಸರ್ಕಾರಗಳು ಪಣತೊಟ್ಟಿವೆ. ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡಿನಲ್ಲಿ ಮೇ 31ರವರೆಗೂ ಲಾಕ್‌ಡೌನ್ ವಿಸ್ತರಣೆ ಮಾಡಿ ಆಯಾ ರಾಜ್ಯ ಸರ್ಕಾರಗಳು ಆದೇಶ ನೀಡಿವೆ.