AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎಫೆಕ್ಟ್: ಭಾರತದಲ್ಲಿ ನೆಲೆಯೂರಲು ಚೀನಾ ಕಂಪನಿಗಳು ಸಜ್ಜು, ಬೆಂಗಳೂರಿಗೆ ಎಷ್ಟು ಬರಲಿವೆ?

ದೆಹಲಿ: ಚೀನಾ ಹೆಸರು ಕೇಳಿದ್ರೆ ಸಾಕು ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಉರಿದುರಿದು ಬೀಳ್ತಿವೆ. ಇನ್ನು ಉತ್ಪಾದನಾ ವಲಯದ ದೈತ್ಯ ಚೀನಾಗೆ ಕೊರೊನಾ ವೈರಸ್ ವಿಲನ್ ಪಟ್ಟಕಟ್ಟಿದೆ. ಯಾಕಂದ್ರೆ ತನ್ನ ಪ್ರಜೆಗಳಿಗೆ ಸರಿಯಾಗಿ ಆಹಾರ ಪದ್ಧತಿ ಕಲಿಸದ ರಾಷ್ಟ್ರದಿಂದ ಏನೇನೋ ವಿಪತ್ತು ನಡೆದು ಹೋಗಿದೆ. ಚೀನಿಯರ ಆಹಾರ ಪದ್ಧತಿಯಿಂದಲೇ ಇವತ್ತಿನ ಸಂದಿಗ್ಧ ಸ್ಥಿತಿ ಎದುರಾಗಿರೋದು. ಹೀಗಾಗಿ ರಿವೇಂಜ್ ತೆಗೆದುಕೊಳ್ಳಲು ಜಗತ್ತಿನ ಪ್ರತಿ ರಾಷ್ಟ್ರವೂ ಕಾಯ್ತಾ ಇದೆ. ‘ಡ್ರ್ಯಾಗನ್’ ನಾಡಿನ ಕಂಪನಿಗಳಿಗೆ ಗಾಳ! ಕೊರೊನಾ ಅಟ್ಯಾಕ್ ಆದಾಗಿನಿಂದ ಚೀನಾ ಗ್ರಹಚಾರ […]

ಕೊರೊನಾ ಎಫೆಕ್ಟ್: ಭಾರತದಲ್ಲಿ ನೆಲೆಯೂರಲು ಚೀನಾ ಕಂಪನಿಗಳು ಸಜ್ಜು, ಬೆಂಗಳೂರಿಗೆ ಎಷ್ಟು ಬರಲಿವೆ?
ಸಾಧು ಶ್ರೀನಾಥ್​
|

Updated on:May 17, 2020 | 1:10 PM

Share

ದೆಹಲಿ: ಚೀನಾ ಹೆಸರು ಕೇಳಿದ್ರೆ ಸಾಕು ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಉರಿದುರಿದು ಬೀಳ್ತಿವೆ. ಇನ್ನು ಉತ್ಪಾದನಾ ವಲಯದ ದೈತ್ಯ ಚೀನಾಗೆ ಕೊರೊನಾ ವೈರಸ್ ವಿಲನ್ ಪಟ್ಟಕಟ್ಟಿದೆ. ಯಾಕಂದ್ರೆ ತನ್ನ ಪ್ರಜೆಗಳಿಗೆ ಸರಿಯಾಗಿ ಆಹಾರ ಪದ್ಧತಿ ಕಲಿಸದ ರಾಷ್ಟ್ರದಿಂದ ಏನೇನೋ ವಿಪತ್ತು ನಡೆದು ಹೋಗಿದೆ. ಚೀನಿಯರ ಆಹಾರ ಪದ್ಧತಿಯಿಂದಲೇ ಇವತ್ತಿನ ಸಂದಿಗ್ಧ ಸ್ಥಿತಿ ಎದುರಾಗಿರೋದು. ಹೀಗಾಗಿ ರಿವೇಂಜ್ ತೆಗೆದುಕೊಳ್ಳಲು ಜಗತ್ತಿನ ಪ್ರತಿ ರಾಷ್ಟ್ರವೂ ಕಾಯ್ತಾ ಇದೆ.

‘ಡ್ರ್ಯಾಗನ್’ ನಾಡಿನ ಕಂಪನಿಗಳಿಗೆ ಗಾಳ! ಕೊರೊನಾ ಅಟ್ಯಾಕ್ ಆದಾಗಿನಿಂದ ಚೀನಾ ಗ್ರಹಚಾರ ನೆಟ್ಟಗಿಲ್ಲ. ಅದಕ್ಕಿಂತ ಹೆಚ್ಚಾಗಿ ಚೀನಾದ ಕಂಪನಿಗಳೀಗ ಬರ್ಬಾದ್ ಆಗಿವೆ. ಹೀಗಾಗಿ ಚೀನಾದಿಂದ ಕಾಲುಕೀಳಲು ಚೀನಿ ಕಂಪನಿಗಳು ಸಿದ್ಧವಾಗಿವೆ. ಭಾರತವೇ ನಮಗೆ ಬೆಸ್ಟ್ ಅನ್ನೋದು ಚೀನಿ ಕಂಪನಿಗಳಿಗೆ ಅರಿವಾದಂತಿದೆ. ಭಾರತದಲ್ಲಿ ನೆಲೆಯೂರಲು ಚೀನಿ ಕಂಪನಿಗಳು ಸಿದ್ಧವಾಗಿವೆ. ಇನ್ನು ಹೀಗೆ ವಲಸೆ ಬರುವ ಕಂಪನಿಗಳಿಗೆ ಭಾರತದಲ್ಲಿ ಉದ್ಯಮ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಸಕಲ ವ್ಯವಸ್ಥೆ ಮಾಡಲು ಮುಂದಾಗಿದೆ. 10 ಮೆಗಾ ಕ್ಲಸ್ಟರ್​ಪ್ಲ್ಯಾನ್ ರೆಡಿಯಾಗಿದ್ದು 9 ರಾಜ್ಯಗಳ ಪೈಕಿ 10 ನಗರಗಳಲ್ಲಿ ಭರದ ಸಿದ್ಧತೆ ನಡೆದಿದೆ. ಹಾಗಾದ್ರೆ ಚೀನಿ ಕಂಪನಿಗಳಿಗೆ ಗಾಳ ಹಾಕಲು ಪ್ಲ್ಯಾನ್ ಹೇಗೆ ರೆಡಿಯಾಗಿದೆ ಅನ್ನೋದನ್ನ ನೋಡೋದಾದ್ರೆ.

ಚೀನಾಗೆ ಗುನ್ನಾ? ಗ್ರೇಟರ್ ನೋಯ್ಡಾ ಪ್ರದೇಶವನ್ನು ದೇಶದ ಎಲೆಕ್ಟ್ರಾನಿಕ್ಸ್ ಹಬ್ ಮಾಡಲು ಚಿಂತನೆ ನಡೆದಿದೆ. ಔಷಧ ತಯಾರಿಕಾ ವಲಯಕ್ಕೆ ಮುತ್ತಿನನಗರಿ ಹೈದರಾಬಾದ್ ಆಯ್ಕೆಯಾಗಿದೆ. ಆಟೋಮೊಬೈಲ್ ಉದ್ಯಮಕ್ಕೆ ಪುಣೆ ಮತ್ತು ಔರಂಗಾಬಾದ್‌ ಸೆಲೆಕ್ಟ್ ಆಗಿದ್ದರೆ, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ಕೂಡ ಮೆಗಾ ಕ್ಲಸ್ಟರ್​ ಲಿಸ್ಟ್​ನಲ್ಲಿವೆ. ಇನ್ನೂ ಗುಜರಾತ್​ನ ವಡೋದರ, ನೆಲ್ಲೂರು ಹಾಗೂ ಅಹಮದಾಬಾದ್​ಗೂ ಸ್ಥಾನ ಸಿಕ್ಕಿದೆ. ಆಂಧ್ರದ ತಿರುಪತಿ, ನೆಲ್ಲೂರಿಗೂ ಚೀನಾ ಕಂಪನಿಗಳು ಬರಲು ಸಿದ್ಧವಾಗಿವೆ.

ಒಟ್ನಲ್ಲಿ ವಿದೇಶಿ ನೇರ ಬಂಡವಾಳ ಸೆಳೆಯುವ ಜೊತೆಗೆ, ಬ್ರಾಂಡ್‌ ಇಂಡಿಯಾ ಹವಾ ಕ್ರಿಯೇಟ್ ಮಾಡೋಕೆ ಕೇಂದ್ರಸರ್ಕಾರ ಸಿದ್ಧವಾಗಿದೆ. ಇನ್ನೂ ಭಾರತದಲ್ಲಿ 22 ಮಿಲಿಯನ್ ಚದರ ಅಡಿ ಕೈಗಾರಿಕಾ ಜಾಗ ರೆಡಿಯಾಗಿದೆ. ಈ ಜಾಗವನ್ನು ಬಳಸಿಕೊಂಡು ಚೀನಾದಿಂದ ಬರುವ ಕೈಗಾರಿಕೆಗಳಿಂದ ಉತ್ಪಾದನಾ ವಲಯ ಸೃಷ್ಟಿಸಬಹುದು. ಭಾರತದಲ್ಲಿ ಉದ್ಯಮ ನಡೆಸುವುದು ಮೊದಲಿಗಿಂತ ಸುಲಭವಾಗಿದೆ. ಉದ್ಯಮ ಸರಳೀಕರಣದಲ್ಲಿ ಭಾರತದ ಬೆಸ್ಟ್ ಆಗಿದ್ದು, ಹಣದ ಉಳಿತಾಯವೂ ಆಗಲಿದೆ. ಚೀನಿ ಕಂಪನಿಗಳು ಎಂಟ್ರಿಯಾದ್ರೆ ಭಾರತದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಲಿದೆ.

Published On - 12:33 pm, Sun, 17 May 20

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?