AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OROP: ರಕ್ಷಣಾ ಸಚಿವಾಲಯ ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವಂತಿಲ್ಲ: ಸುಪ್ರೀಂಕೋರ್ಟ್ ಛೀಮಾರಿ

ಕೆಲವು ರೀತಿಯ ವರ್ಗೀಕರಣ ಇರಬೇಕು ಮತ್ತು ವಯಸ್ಸಾದವರಿಗೆ ಮೊದಲು ಬಾಕಿ ಪಾವತಿಸಬೇಕು ಎಂದು ನಾವು ಬಯಸುತ್ತೇವೆ. ವ್ಯಾಜ್ಯ ಪ್ರಾರಂಭವಾದಾಗಿನಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಸಾವನ್ನಪ್ಪಿದ್ದಾರೆ" ಎಂದು ಪೀಠ ಹೇಳಿದೆ.

OROP: ರಕ್ಷಣಾ ಸಚಿವಾಲಯ ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವಂತಿಲ್ಲ: ಸುಪ್ರೀಂಕೋರ್ಟ್ ಛೀಮಾರಿ
ಒಆರ್‌ಒಪಿ
ರಶ್ಮಿ ಕಲ್ಲಕಟ್ಟ
|

Updated on:Mar 13, 2023 | 5:54 PM

Share

ದೆಹಲಿ: ಒಂದು ಶ್ರೇಣಿ ಒಂದು ಪಿಂಚಣಿ (OROP) ಬಾಕಿಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸುವ ಕುರಿತು ಸಂವಹನವನ್ನು ನೀಡುವ ಮೂಲಕ ರಕ್ಷಣಾ ಸಚಿವಾಲಯವು (Defence Ministry) ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court)ಸೋಮವಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಒಂದು ಶ್ರೇಣಿಒಂದು ಪಿಂಚಣಿ  ಬಾಕಿಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಹೇಳಿದ ಜನವರಿ 20 ರ ಸಂವಹನವನ್ನು ತಕ್ಷಣವೇ ಹಿಂಪಡೆಯುವಂತೆ ಸಚಿವಾಲಯಕ್ಕೆ ಹೇಳಿದೆ.

ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು, ಕೇಂದ್ರವು ಮಾಜಿ ಸೈನಿಕರಿಗೆ ಒಆರ್‌ಒಪಿ ಬಾಕಿಯ ಒಂದು ಕಂತು ಪಾವತಿಸಿದೆ ಆದರೆ ಹೆಚ್ಚಿನ ಪಾವತಿಗಳಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಮೊದಲು ಒಆರ್‌ಒಪಿ ಬಾಕಿ ಪಾವತಿಗೆ ನಿಮ್ಮ ಜನವರಿ 20 ರ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಿ, ನಂತರ ನಾವು ನಿಮ್ಮ ಅರ್ಜಿಯನ್ನು ಸಮಯಕ್ಕೆ ಪರಿಗಣಿಸುತ್ತೇವೆ ಎಂದು ಪೀಠ ವೆಂಕಟರಮಣಿಗೆ ತಿಳಿಸಿದೆ.

ರಕ್ಷಣಾ ಸಚಿವಾಲಯದ ಜನವರಿ 20 ರ ಸಂವಹನವು ಅದರ ತೀರ್ಪಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಒಆರ್‌ಒಪಿ ಬಾಕಿಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸುವುದಾಗಿ ಏಕಪಕ್ಷೀಯವಾಗಿ ಹೇಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಪಾವತಿಸಬೇಕಾದ ಪಾವತಿಯ ಪ್ರಮಾಣ, ಅಳವಡಿಸಿಕೊಳ್ಳಬೇಕಾದ ವಿಧಾನಗಳು ಮತ್ತು ಬಾಕಿ ಪಾವತಿಗೆ ಆದ್ಯತೆಯ ವಿಭಾಗ ಯಾವುದು ಎಂಬ ವಿವರಗಳನ್ನು ನೀಡುವ ಟಿಪ್ಪಣಿಯನ್ನು ಸಿದ್ಧಪಡಿಸಲು ಅಟಾರ್ನಿ ಜನರಲ್ ಅವರಲ್ಲಿ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Same Sex Marriage: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಅರ್ಜಿ ವಿಚಾರಣೆ ಏ.18ಕ್ಕೆ ಮುಂದೂಡಿದ ಸುಪ್ರೀಂ

“ಕೆಲವು ರೀತಿಯ ವರ್ಗೀಕರಣ ಇರಬೇಕು ಮತ್ತು ವಯಸ್ಸಾದವರಿಗೆ ಮೊದಲು ಬಾಕಿ ಪಾವತಿಸಬೇಕು ಎಂದು ನಾವು ಬಯಸುತ್ತೇವೆ. ವ್ಯಾಜ್ಯ ಪ್ರಾರಂಭವಾದಾಗಿನಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಸಾವನ್ನಪ್ಪಿದ್ದಾರೆ” ಎಂದು ಪೀಠ ಹೇಳಿದೆ.ಭಾರತೀಯ ಮಾಜಿ ಸೈನಿಕರ ಆಂದೋಲನ (ಐಇಎಸ್‌ಎಂ) ವಕೀಲ ಬಾಲಾಜಿ ಶ್ರೀನಿವಾಸನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ, ಇದರಲ್ಲಿ ಅವರು ರಕ್ಷಣಾ ಸಚಿವಾಲಯದ ಜನವರಿ 20 ರ ಸಂವಹನವನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.

ಫೆಬ್ರವರಿ 27 ರಂದು, ಸಶಸ್ತ್ರ ಪಡೆಗಳ ಅರ್ಹ ಪಿಂಚಣಿದಾರರಿಗೆ ಒಆರ್‌ಒಪಿ ಬಾಕಿ ಪಾವತಿ ವಿಳಂಬದ ಬಗ್ಗೆ ಸುಪ್ರೀಂಕೋರ್ಟ್ ರಕ್ಷಣಾ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದು  ನ್ಯಾಯಾಲಯವು ನಿಗದಿಪಡಿಸಿದ ಪಾವತಿಗಳಿಗೆ ಸಮಯವನ್ನು ವಿಸ್ತರಿಸುವ ಸಂವಹನವನ್ನು ಹೊರಡಿಸಿದ ಕಾರ್ಯದರ್ಶಿಯಿಂದ ವಿವರಣೆಯನ್ನು ಕೇಳಿತು.

ಜನವರಿ 9 ರಂದು ಸುಪ್ರೀಂ ಒಆರ್‌ಒಪಿನ ಒಟ್ಟು ಬಾಕಿಯನ್ನು ಪಾವತಿಸಲು ಕೇಂದ್ರಕ್ಕೆ ಮಾರ್ಚ್ 15 ರವರೆಗೆ ಸಮಯವನ್ನು ನೀಡಿತು. ಆದರೆ ಜನವರಿ 20 ರಂದು, ಸಚಿವಾಲಯವು ನಾಲ್ಕು ವಾರ್ಷಿಕ ಕಂತುಗಳಲ್ಲಿ ಬಾಕಿಯನ್ನು ಪಾವತಿಸುವುದಾಗಿ ಸಂವಹನವನ್ನು ಹೊರಡಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Mon, 13 March 23