ಕೇರಳ: ಆರ್ಥೊಡಾಕ್ಸ್ ಚರ್ಚ್ ಪಾದ್ರಿ, 50 ಕ್ರೈಸ್ತ ಕುಟುಂಬಗಳು ಬಿಜೆಪಿಗೆ ಸೇರ್ಪಡೆ

ದಕ್ಷಿಣ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಆರ್ಥೊಡಾಕ್ಸ್ ಚರ್ಚ್ ನಿಲಕ್ಕಲ್ ಭದ್ರಾಸನಂನ ಕಾರ್ಯದರ್ಶಿ ಫಾದರ್ ಶೈಜು ಕುರಿಯನ್ ಅವರೊಂದಿಗೆ ಸುಮಾರು ಐವತ್ತು ಕ್ರಿಶ್ಚಿಯನ್ ಕುಟುಂಬಗಳು ಕೇಂದ್ರ ಸಚಿವ ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.

ಕೇರಳ: ಆರ್ಥೊಡಾಕ್ಸ್ ಚರ್ಚ್ ಪಾದ್ರಿ, 50 ಕ್ರೈಸ್ತ ಕುಟುಂಬಗಳು ಬಿಜೆಪಿಗೆ ಸೇರ್ಪಡೆ
ಬಿಜೆಪಿ ಸೇರಿದ ಕ್ರೈಸ್ತ ಸಮುದಾಯದ ಸದಸ್ಯರು
Follow us
ರಶ್ಮಿ ಕಲ್ಲಕಟ್ಟ
|

Updated on:Jan 01, 2024 | 1:19 PM

ಕೇರಳ ಜನವರಿ 01: ಕೇರಳದಲ್ಲಿ ಕ್ರೈಸ್ತ (Christian)ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಬಿಜೆಪಿ ‘ಸ್ನೇಹ ಯಾತ್ರೆ’(Sneha Yatra) ಆರಂಭಿಸಿದ ನಂತರ ಆರ್ಥೊಡಾಕ್ಸ್ ಚರ್ಚ್ ಪಾದ್ರಿ ಮತ್ತು ಸುಮಾರು 50 ಕ್ರಿಶ್ಚಿಯನ್ ಕುಟುಂಬಗಳು ಬಿಜೆಪಿಗೆ (BJP) ಸೇರ್ಪಡೆಗೊಂಡಿವೆ. ಕ್ರೈಸ್ತ ಸಮುದಾಯದ ಒಬ್ಬ ಪಾದ್ರಿ ಮತ್ತು ಐವತ್ತು ಕುಟುಂಬಗಳು ಡಿಸೆಂಬರ್ 30 ರಂದು ಕೇರಳದಲ್ಲಿ ಬಿಜೆಪಿ ಸೇರಿವೆ. ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಓಲೈಕೆಯನ್ನು ಪಕ್ಷವು ಕೆಲವು ದಿನಗಳಿಂದ ನಡೆಸುತ್ತಿದೆ. ದಕ್ಷಿಣ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಆರ್ಥೊಡಾಕ್ಸ್ ಚರ್ಚ್ ನಿಲಕ್ಕಲ್ ಭದ್ರಾಸನಂನ ಕಾರ್ಯದರ್ಶಿ ಫಾದರ್ ಶೈಜು ಕುರಿಯನ್ ಅವರೊಂದಿಗೆ ಸುಮಾರು ಐವತ್ತು ಕ್ರಿಶ್ಚಿಯನ್ ಕುಟುಂಬಗಳು ಕೇಂದ್ರ ಸಚಿವ ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಹೇಳಿದೆ.

ಅದೇ ದಿನ ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರ ಸಮ್ಮುಖದಲ್ಲಿ ಕೇರಳ ಕಾಂಗ್ರೆಸ್ (ಜೇಕಬ್) ಬಣದ ಹೆಚ್ಚಿನ ಸಂಖ್ಯೆಯ ಸದಸ್ಯರು ಪಕ್ಷಕ್ಕೆ ಸೇರಿದ್ದಾರೆ. ಮೋದಿ ಸರ್ಕಾರವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ದೃಷ್ಟಿಯಲ್ಲಿ ಮುನ್ನಡೆಯುತ್ತಿದೆ. ಕಳೆದ ದಶಕದಲ್ಲಿ ಅದು ಅಭಿವೃದ್ಧಿಗೆ ಬಲವಾದ ಸಮರ್ಪಣೆಯನ್ನು ತೋರಿಸಿದೆ. ಇದು ಅಲ್ಪಸಂಖ್ಯಾತರನ್ನು ಬೆಂಬಲಿಸಲು ಮತ್ತು ಬಿಜೆಪಿಗೆ ಸೇರಲು ಪ್ರೇರೇಪಿಸುವ ಮಹತ್ವದ ಅಂಶವಾಗಿದೆ. ‘ಸ್ನೇಹ ಯಾತ್ರೆ’ಯಂತಹ ಕಾರ್ಯಕ್ರಮಗಳು ಬಿಜೆಪಿ ಬಗ್ಗೆ ಅಲ್ಪಸಂಖ್ಯಾತ ಗುಂಪುಗಳಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿವೆ. ಅಭಿವೃದ್ಧಿ ರಾಜಕಾರಣದಲ್ಲಿ ಪಾಲ್ಗೊಳ್ಳಲು ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆಯಿದೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಹೇಳಿದೆ

ಬಿಜೆಪಿ ಕೇರಳದಲ್ಲಿನ ಕ್ರಿಶ್ಚಿಯನ್ ಸಮುದಾಯದೊಂದಿಗೆ ಬಲವಾದ ಸಂಪರ್ಕವನ್ನು ನಿರ್ಮಿಸಲು ಪ್ರಯತ್ನಿಸುವ ‘ಸ್ನೇಹ ಯಾತ್ರೆ’ ಎಂಬ ಉಪಕ್ರಮವನ್ನು ಪ್ರಾರಂಭಿಸಿದ ನಂತರ ಕ್ರೈಸ್ತ ಸಮುದಾಯದವರು ಬಿಜೆಪಿ ಸೇರಿರುವ ಸುದ್ದಿ ಬಂದಿದೆ. ಈ ವರ್ಷದ ಈಸ್ಟರ್ ಋತುವಿನಲ್ಲಿ ಮೊದಲು ಪ್ರಚಾರವನ್ನು ಪ್ರಾರಂಭಿಸಲಾಯಿತು. ಕ್ರಿಸ್‌ಮಸ್ ಅವಧಿಯಲ್ಲಿ ಯಾತ್ರೆಯನ್ನು ಕೈಗೊಳ್ಳಲು ಪಕ್ಷವು ಇತ್ತೀಚಿನ ರಾಜ್ಯ ಸಮಿತಿಯ ಸಭೆಯಲ್ಲಿ ನಿರ್ಧರಿಸಿತು.

ಕಾಕ್ಕನಾಡ್‌ನ ಸೇಂಟ್ ಥಾಮಸ್ ಮೌಂಟ್‌ನಲ್ಲಿರುವ ಪ್ರಸಿದ್ಧ ಸಿರೋ-ಮಲಬಾರ್ ಚರ್ಚ್‌ನ ಹಿಂದಿನ ನಾಯಕ ಕಾರ್ಡಿನಲ್ ಜಾರ್ಜ್ ಅಲೆಂಚೇರಿ ಮತ್ತು ಬಿಜೆಪಿಯಿಂದ ವೆರಾಪೊಲಿ ಲ್ಯಾಟಿನ್ ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಜೋಸೆಫ್ ಕಲಾತಿಪರ್ಬಿಲ್ ಸೇರಿದಂತೆ ರಾಜ್ಯದ ಪ್ರಮುಖ ಧರ್ಮಗುರುಗಳಿಗೆ ಮೋದಿ ವೈಯಕ್ತಿಕವಾಗಿ ಕ್ರಿಸ್‌ಮಸ್ ಶುಭಾಶಯಗಳನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು

ಈಸ್ಟರ್ ಸಂದರ್ಭದಲ್ಲಿ ಬಿಜೆಪಿ.ಯ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಯಾತ್ರೆ ಕೈಗೊಂಡು ಕ್ರಿಶ್ಚಿಯನ್ನರ ಮನೆಗಳು ಮತ್ತು ಪೂಜಾ ಸ್ಥಳಗಳಿಗೆ ಭೇಟಿ ನೀಡಿದ್ದರು.

ಮೊದಲ ಬಾರಿಗೆ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಯಾಥೋಲಿಕ್ ಪಾದ್ರಿಯೊಬ್ಬರು ಈ ವರ್ಷದ ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು, 73 ವರ್ಷದ ಫಾದರ್ ಕುರಿಯಾಕೋಸ್ ಮಟ್ಟಮ್ ಅವರನ್ನು ಅಧಿಕೃತವಾಗಿ ರಾಜಕೀಯ ಪಕ್ಷಕ್ಕೆ ಪ್ರಾಥಮಿಕ ಸದಸ್ಯರಾಗಿ ಸ್ವೀಕರಿಸಲಾಗಿಗದೆ. ಬಿಜೆಪಿ ಇಡುಕ್ಕಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಅಜಿ ಅವರಿಗೆ ಸದಸ್ಯತ್ವ ನೀಡಿದರು. ಕಳೆದ ಮೂರು ವರ್ಷಗಳಿಂದ ಫಾದರ್ ಕುರಿಯಾಕೋಸ್ ಮಟ್ಟಮ್ ಅವರು ಮಂಕುವಾ ಸೈಂಟ್ ಥಾಮಸ್ ಚರ್ಚ್‌ನ ಪ್ಯಾರಿಷ್ ಅರ್ಚಕರಾಗಿ ಕಳೆದಿದ್ದಾರೆ. ಅವರು ನಿವೃತ್ತರಾಗಲು ಇನ್ನೂ ಎರಡು ವರ್ಷಗಳು ಉಳಿದಿವೆ. ಪ್ರಸ್ತುತ ವಿದ್ಯಮಾನಗಳನ್ನು ‘ತೀಕ್ಷ್ಮವಾಗಿ ಗಮನಿಸಿದ’ ನಂತರ, ಫಾದರ್ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಕೆಎಸ್ ಅಜಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Mon, 1 January 24

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್