5 ತಿಂಗಳ ಬಳಿಕ ಭಕ್ತರಿಗೆ ಪದ್ಮನಾಭ ಸ್ವಾಮಿಯ ಅನಂತ ದರ್ಶನ

| Updated By: ಸಾಧು ಶ್ರೀನಾಥ್​

Updated on: Aug 24, 2020 | 5:50 PM

ತಿರುವನಂತಪುರ: ಕೊರೊನಾ ಕಾಟಕ್ಕೆ ಕಂಗಾಲಾಗಿ ಹೋಗಿದ್ದ ಕೇರಳ ಇದೀಗ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ ರಾಜ್ಯದ ಪ್ರತಿಷ್ಠಿತ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವು ಮತ್ತೊಮ್ಮೆ ಸಾರ್ವಜನಿಕ ದರ್ಶನಕ್ಕೆ ತನ್ನ ಬಾಗಿಲನ್ನು ತೆರೆದಿದೆ. ಭಕ್ತರಿಗೆ ಆಗಸ್ಟ್​ 26ರಿಂದ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ದೇವಸ್ಥಾನಕ್ಕೆ ಭೇಟಿ ಕೊಡಲು ಇಚ್ಛಿಸುವ ಭಕ್ತರು ಒಂದು ದಿನ ಮುಂಚಿತವಾಗಿಯೇ ಬುಕ್ಕಿಂಗ್​ ಮಾಡಬೇಕಿದೆ. ಜೊತೆಗೆ, ದೇವರ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದ್ದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಹಾಗೂ ಸಾಯಂಕಾಲ 5ರಿಂದ […]

5 ತಿಂಗಳ ಬಳಿಕ ಭಕ್ತರಿಗೆ ಪದ್ಮನಾಭ ಸ್ವಾಮಿಯ ಅನಂತ ದರ್ಶನ
Follow us on

ತಿರುವನಂತಪುರ: ಕೊರೊನಾ ಕಾಟಕ್ಕೆ ಕಂಗಾಲಾಗಿ ಹೋಗಿದ್ದ ಕೇರಳ ಇದೀಗ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ ರಾಜ್ಯದ ಪ್ರತಿಷ್ಠಿತ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವು ಮತ್ತೊಮ್ಮೆ ಸಾರ್ವಜನಿಕ ದರ್ಶನಕ್ಕೆ ತನ್ನ ಬಾಗಿಲನ್ನು ತೆರೆದಿದೆ.

ಭಕ್ತರಿಗೆ ಆಗಸ್ಟ್​ 26ರಿಂದ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ದೇವಸ್ಥಾನಕ್ಕೆ ಭೇಟಿ ಕೊಡಲು ಇಚ್ಛಿಸುವ ಭಕ್ತರು ಒಂದು ದಿನ ಮುಂಚಿತವಾಗಿಯೇ ಬುಕ್ಕಿಂಗ್​ ಮಾಡಬೇಕಿದೆ. ಜೊತೆಗೆ, ದೇವರ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದ್ದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಹಾಗೂ ಸಾಯಂಕಾಲ 5ರಿಂದ 6.45ರವರೆಗೆ ಮಾತ್ರ ದರ್ಶನಕ್ಕೆ ಅನುಮತಿ ನೀಡಲಾಗಿದೆ.

ದೇವಸ್ಥಾನದ ಆಡಳಿತ ಮಂಡಳಿ ಹೊರಡಿಸಿರುವ ಮಾಧ್ಯಮ ಪ್ರಕಟಣೆ ಪ್ರಕಾರ ದೇವಸ್ಥಾನದ ಒಳಗಡೆಗೆ ಒಮ್ಮೆಗೆ 35 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗಿದೆ.