ಬಿಹಾರದಲ್ಲಿ “ಪಕದ್ವಾ ವಿವಾಹ”: ಶಿಕ್ಷಕನನ್ನು ಅಪಹರಿಸಿ ಮಗಳ ಜತೆಗೆ ಮದುವೆ ಮಾಡಿದ ವ್ಯಕ್ತಿ

ಬಿಹಾರದಲ್ಲಿ ಪಕದ್ವಾ ವಿಹಾಹ ಪದ್ಧತಿ ಹೆಚ್ಚಾಗಿದೆ. ಈ ಪದ್ಧತಿಗೆ ಯುವಕರೇ ಗುರಿಯಾಗುತ್ತಿದ್ದಾರೆ. ಗೌತಮ್​​​ ಕುಮಾರ್​​ ಎಂಬ ಶಿಕ್ಷಕ ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪಾಸ್​​​ ಮಾಡಿಕೊಂಡಿದ್ದು, ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಈ ವೇಳೆ ಮೂರ್ನಾಲ್ಕು ಮಂದಿ ಶಾಲೆ ಬಂದು ಬಲವಂತವಾಗಿ ಗೌತಮ್​​ ಅವರನ್ನು ಕರೆದುಕೊಂಡು ಹೋಗಿ, ಬಂದೂಕು ತೋರಿಸಿ ವ್ಯಕ್ತಿಯೊಬ್ಬರ ಮಗಳ ಜತೆಗೆ ಮದುವೆ ಮಾಡಿದ್ದಾರೆ.

ಬಿಹಾರದಲ್ಲಿ ಪಕದ್ವಾ ವಿವಾಹ: ಶಿಕ್ಷಕನನ್ನು ಅಪಹರಿಸಿ ಮಗಳ ಜತೆಗೆ ಮದುವೆ ಮಾಡಿದ ವ್ಯಕ್ತಿ
ವೈರಲ್​​​ ಫೋಟೋ

Updated on: Dec 01, 2023 | 4:05 PM

ಬಿಹಾರದಲ್ಲಿ (Bihar) ಶಿಕ್ಷಕರೊಬ್ಬರನ್ನು ಅಪಹರಿಸಿ ಮಗಳ ಜೊತೆಗೆ ಮದುವೆ ಮಾಡಿರುವ ಘಟನೆಯೊಂದು ನಡೆದಿದೆ. ಇದೀಗ ಈ ವಿಚಾರ ಎಲ್ಲ ಕಡೆ ವೈರಲ್​​​ ಆಗಿದೆ. ಗೌತಮ್​​​ ಕುಮಾರ್​​ ಎಂಬ ಶಿಕ್ಷಕ ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಪಾಸ್​​​ ಮಾಡಿಕೊಂಡಿದ್ದು, ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಈ ವೇಳೆ ಮೂರ್ನಾಲ್ಕು ಮಂದಿ ಶಾಲೆ ಬಂದು ಬಲವಂತವಾಗಿ ಗೌತಮ್​​ ಅವರನ್ನು ಕರೆದುಕೊಂಡು ಹೋಗಿ, ಬಂದೂಕು ತೋರಿಸಿ ವ್ಯಕ್ತಿಯೊಬ್ಬರ ಮಗಳ ಜತೆಗೆ ಮದುವೆ ಮಾಡಿದ್ದಾರೆ.

ಬ್ರಹ್ಮಚಾರಿಯಾಗಿರುವ ಯುವಕರ ಜೀವನದಲ್ಲಿ ಇಂತಹ ಘಟನೆಗಳು ನಡೆಯಬಹುದು ಎಂಬುದಕ್ಕೆ ಗೌತಮ್​​ ಕುಮಾರ್​​​ನಂತಹ ವ್ಯಕ್ತಿಗಳು ಸಾಕ್ಷಿ. ಮದುವೆಯ ಬಗ್ಗೆ ಯೋಚನೆಯೇ ಮಾಡದೆ ಇರುವ ಗೌತಮ್​​​​ ಅವರಿಗೆ ಏಕಾಏಕಿ ಬಂದು ಮದುವೆ ಮಾಡಿಸುತ್ತಾರೆ ಎಂದು ಕನಸಿನಲ್ಲು ಅಂದುಕೊಂಡಿರಲಿಕ್ಕಿಲ್ಲ. ಅಪಹರಣ ಮಾಡಿ ಮದುವೆ ಮಾಡಿಸುವುದು ಬಿಹಾರದಲ್ಲಿ ಸಾಮಾನ್ಯವಾಗಿದೆ. ಇದನ್ನು ‘ಪಕದ್ವಾ ವಿವಾಹ’ ಅಥವಾ ವರನ ಅಪಹರಣ ಮದುವೆ ಎಂದು ಕರೆಯುತ್ತಾರೆ.

ಪೊಲೀಸರ ಪ್ರಕಾರ, ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕ ಗೌತಮ್ ಕುಮಾರ್. ಅಪಹರಣ ನಂತರ ಗೌತಮ್​​​ ಅವರನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕೂ ಮೊದಲು ಗೌತಮ್​​​ ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಜತೆಗೆ ತನ್ನ ಮಗನಿಗೆ ಅನ್ಯಾಯ ಮಾಡಿದ್ದಾರೆ ಎಂದು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.

ಈ ಪ್ರಕರಣಕ್ಕೆ ರಾಜೇಶ್ ರೈ ವ್ಯಕ್ತಿ ಕಾರಣ ಎಂದು ಗೌತಮ್​​​ ಕುಮಾರ್​​ ಮನೆಯವರು ಆರೋಪಿಸಿದ್ದಾರೆ. ತನ್ನ ಮಗನನ್ನು ಬಲವಂತವಾಗಿ ಅಪಹರಿಸಿ, ರಾಜೇಶ್​ ರೈ ತನ್ನ ಮಗಳು ಚಾಂದಿನಿಯೊಂದಿಗೆ ವಿವಾಹ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆಯೇ ನಮ್ಮ ಮನೆಗೆ ಬಂದು ಅವರು ಮದುವೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ನಾವು ಒಪ್ಪಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ನನ್ನ ಮಗನಿಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡೆತ್​ನೋಟ್​ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ: ಹನಿಟ್ರ್ಯಾಪ್, ಪೊಲೀಸ್​ನಿಂದ ಮಾನಸಿಕ‌ ಕಿರುಕುಳ ಆರೋಪ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಅಪಹರಣಕಾರರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಬಿಹಾರದಲ್ಲಿ ‘ಪಕದ್ವಾ ವಿವಾಹ’ ಸಾಮಾನ್ಯವಾಗಿದ್ದು, ಕಳೆದ ವರ್ಷ, ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಣಿಯನ್ನು ಪರೀಕ್ಷಿಸಲು ಕರೆದ ಪಶುವೈದ್ಯರನ್ನು ಮೂರು ಜನರು ಅಪಹರಿಸಿ ಬೇಗುಸರಾಯ್‌ನಲ್ಲಿ ಬಲವಂತವಾಗಿ ಮದುವೆ ಮಾಡಿಸಿದ್ದರು. ಇಂತಹ ಅನೇಕ ಘಟನೆಗಳು ಬಿಹಾರದಲ್ಲಿ ನಡೆಯುತ್ತಿರತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:02 pm, Fri, 1 December 23