ಏರ್​ ಇಂಡಿಯಾ ವಿಮಾನ ಸೋರುತ್ತಾ ಇದೆಯಂತೆ! ಬನ್ನಿ ಒಂದು ರೌಂಡ್​ ನೋಡಿ ಬರೋಣಾ!

ಈ ವೈರಲ್ ವೀಡಿಯೋಗೆ ಹಲವರು ಸಖತ್ತಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, "ಅಯ್ಯೋ, ಇದು ತುಂಬಾ ಭಯಾನಕ ವೀಡಿಯೊ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, "ಅದಕ್ಕಾಗಿಯೇ ನಾನು ವಿಮಾನದಲ್ಲಿ ಹಾರುವುದಿಲ್ಲ" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಪ್ರಯಾಣಿಕರ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ಖಾರವಾಗಿ ವ್ಯಾಖ್ಯಾನಿಸಿದ್ದಾರೆ.

ಏರ್​ ಇಂಡಿಯಾ ವಿಮಾನ  ಸೋರುತ್ತಾ ಇದೆಯಂತೆ! ಬನ್ನಿ ಒಂದು ರೌಂಡ್​ ನೋಡಿ ಬರೋಣಾ!
ಏರ್​ ಇಂಡಿಯಾ ವಿಮಾನ ಸೋರುತ್ತಾ ಇದೆಯಂತೆ!
Follow us
ಸಾಧು ಶ್ರೀನಾಥ್​
|

Updated on: Dec 01, 2023 | 6:05 PM

ಹಲವು ಸಿನಿಮಾಗಳಲ್ಲಿ ನೋಡಿದಂತೆ ದೋಣಿಯಲ್ಲಿ ಪ್ರಯಾಣಿಸುವಾಗ ಅದರಲ್ಲಿ ನೀರು ನುಗ್ಗುತ್ತದೆ, ಆಗ ಬೋಟ್ ಓಡಿಸುವ ಕ್ಯಾಪ್ಟನ್​​ ಅದನ್ನು ಉಳಿಸಲು ಚಾಕಚಕ್ಯತೆ ತೋರುವುದು ನಡೆಯುತ್ತದೆ. ಆದರೆ ಆಗ ಅದರಲ್ಲಿರುವ ಪ್ರಯಾಣಿಕರ ಎದೆಬಡಿತ ಹೆಚ್ಚುತ್ತದೆ ಎಂದೇ ಹೇಳಬೇಕು. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಆದರೆ ಇದು ಆಗಸದಲ್ಲಿ ತೇಲಾಡುವ ವಿಮಾನದಲ್ಲಿ ( flight ) ಅಂತಹ ಘಟನೆ ಜರುಗಿದೆ. ದೆಹಲಿಯಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ (Delhi to London Gatwick Airport) ವಿಮಾನದಲ್ಲಿ ಇದು ಸಂಭವಿಸಿದೆ.

ಇದು ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ (Air India Boeing B787 Dreamliner). ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ (Video video) ವಿಮಾನದಿಂದ ಹೊರಬಂದ ಮೇಲೆ ಜನ ರೊಚ್ಚಿಗೆದ್ದಿದ್ದಾರೆ. ಈ ಬಗ್ಗೆ ಹಲವರು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಅನೇಕ ನೆಟಿಜನ್‌ಗಳು ಈ ವಿಡಿಯೋವನ್ನು ಸಿಕ್ಕಾಪಟ್ಟೆ ಷೇರ್ ಮಾಡುತ್ತಿದ್ದಾರೆ.

Also Read: ಅಡುಗೆಮನೆಯಲ್ಲಿ ಕುಕ್ಕರ್​​ ನಿಮಗೆ ಕಾಟ ಕೊಡುತ್ತಿದೆಯಾ? ಹಾಗಾದರೆ ಇಲ್ಲಿದೆ ಕೆಲವು ಸೂಪರ್ ಟಿಪ್ಸ್!

ಈ ವೈರಲ್ ವೀಡಿಯೋದಲ್ಲಿ, ವಿಮಾನದ ಛಾವಣಿಯಿಂದ ( Ceiling) ನೀರು ಜಿನುಗುತ್ತಿರುವುದನ್ನು (leaking) ನೀವು ನೋಡಬಹುದು. ಈ ವೀಡಿಯೋ ನೋಡಿದ ಜನರು ತುಂಬಾ ಆಶ್ಚರ್ಯಗೊಂಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಲು ಜನರು ಸಾಕಷ್ಟು ಹಣ ವ್ಯಯಿಸುತ್ತಿದ್ದರೂ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಹಲವು ಪ್ರಯಾಣಿಕರು ದೂರುತ್ತಿದ್ದಾರೆ. ಇಂತಹ ಸಮಸ್ಯೆಗಳಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

@fl360aero ಟ್ವಿಟ್ಟರ್​​​ ಬಳಕೆದಾರರು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಬಳಕೆದಾರರು ಹೀಗೆ ಹೇಳಿದ್ದಾರೆ: ದೆಹಲಿ ಮತ್ತು ಲಂಡನ್ ಗ್ಯಾಟ್‌ವಿಕ್ ವಿಮಾನ ನಿಲ್ದಾಣದ ನಡುವಿನ ಹಾರಾಟದ ಸಮಯದಲ್ಲಿ, ಏರ್ ಇಂಡಿಯಾ ಬೋಯಿಂಗ್ ಬಿ 787 ಡ್ರೀಮ್‌ಲೈನರ್ ಓವರ್‌ಹೆಡ್ ಸ್ಟೋರೇಜ್ ಕ್ಯಾಬಿನ್‌ನಲ್ಲಿ ಸೋರಿಕೆ ಆಗುತ್ತಿರುವುದು ಅನುಭಕ್ಕೆ ಬಂದಿತು. ಆದರೂ ಕ್ಯಾಬಿನ್ ಸಿಬ್ಬಂದಿ ಅತ್ಯಂತ ಸಕ್ರಿಯವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎಂದು ಅವರು ಹೇಳಿದರು. ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನ ನಾನಾ ರೀತಿಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ