Viral Video: ಅಯ್ಯೋ ಇದು ಯಾರು? ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಹೌಹಾರಿದ ಕರಡಿ

ಪ್ರಾಣಿಗಳು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡಾಗ  ಅವುಗಳಿಗೆ ಹೇಗೆ ಅನಿಸುತ್ತದೆ  ಹಾಗೂ ಅವುಗಳು ಹೇಗೆ ಪ್ರತಿಕ್ರಿಯಿಸಬಹುದು ಎಂದು ನೀವು ಎಂದಾದರೂ ನೋಡಿದ್ದೀರಾ? ಇತ್ತೀಚಿಗೆ ಇಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕರಡಿಯೊಂದು ತನ್ನ ಪ್ರತಿಬಿಂಬವನ್ನು ಕನ್ನಡಿಯಲ್ಲಿ ಕಂಡು ಬೆಚ್ಚಿಬಿದ್ದಿದೆ.  ಕರಡಿಯ  ಈ ಪ್ರತಿಕ್ರಿಯೆಯನ್ನು ಕಂಡು  ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.   

Viral Video: ಅಯ್ಯೋ ಇದು ಯಾರು? ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಹೌಹಾರಿದ ಕರಡಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 01, 2023 | 3:18 PM

ಮನುಷ್ಯರಾದ ನಮಗೆ ಕನ್ನಡಿಯಲ್ಲಿ ನಮ್ಮ ಮುಖವನ್ನು ನಾವೇ ನೋಡುವುದೆಂದರೆ ತುಂಬಾ ಇಷ್ಟ. ಆದರೆ ಪ್ರಾಣಿಗಳು  ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡರೆ   ಹೇಗಿರಬಹುದು ಊಹಿಸಿ.   ಖಂಡಿತವಾಗಿಯೂ ಇದು ಯಾವುದೋ  ಬೇರೆ ಪ್ರಾಣಿ ಇರಬಹುದು ಎಂದು  ಅವುಗಳು ಬೆಚ್ಚಿ ಬೀಳುವುದಂತೂ ನಿಜ.  ಅದೇ ರೀತಿ ಇಲ್ಲೊಂದು ಕರಡಿ ಕನ್ನಡಿಯಲ್ಲಿ ತನ್ನ ಮುಖವನ್ನು ಕಂಡು ಬೆಚ್ಚಿ ಬಿದ್ದು, ಇದಾವುದೋ ಬೇರೆ ಪ್ರಾಣಿ ಎಂದು ಭಾವಿಸಿ ಕನ್ನಡಿಯ ಮೇಲೆ ದಾಳಿ ಮಾಡಲು ಆರಂಭಿಸಿದೆ.  ಈ ಹಾಸ್ಯಮಯ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ  ಮುಗ್ಧ ಕರಡಿಯೊಂದು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಇದಾವುದೋ ಬೇರೆ ಪ್ರಾಣಿ ಇರಬಹುದೆಂದು ಕೋಪಗೊಂಡು ಕನ್ನಡಿಯ ಮೇಲೆ ದಾಳಿ ಮಾಡುವುದನ್ನು ಕಾಣಬಹುದು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

ಈ ವಿಡಿಯೋದಲ್ಲಿ ಕರಡಿಯೊಂದು ಕಾಡಿನಲ್ಲಿ ತನ್ನ ಪಾಡಿಗೆ ತಾನು ಓಡಾಡುತ್ತಿರುತ್ತದೆ. ಆ ಸಂದರ್ಭದಲ್ಲಿ  ಅದರ ಕಣ್ಣಿಗೆ ಕನ್ನಡಿಯೊಂದು  ಕಾಣಿಸುತ್ತದೆ. ಇದೇನಿದು ವಿಚಿತ್ರ ವಸ್ತು ಎಂದು ಅದರ ಬಳಿ ಬಂದಾಗ ಕನ್ನಡಿಯಲ್ಲಿ ತನ್ನ ಮುಖವನ್ನು ಕಂಡು ಕರಡಿ ಬೆಚ್ಚಿ ಬಿದ್ದಿದೆ.  ಮತ್ತು ಭಯದಿಂದ ಒಮ್ಮೆಲೆ ಜಿಗಿದು ಕನ್ನಡಿಯ ಹಿಂದೆ ಯಾರಿದ್ದಾರೆ ಎಂದು ನೊಡಲು  ಹೋಗುತ್ತದೆ. ಹಿಂದೆ ಯಾರು ಕಾಣದಿದ್ದಾಗ ಕನ್ನಡಿಯ ಮುಂದೆ ಬಂದು ಮತ್ತೊಮ್ಮೆ ತನ್ನನ್ನು ನೋಡಿ ಭಯಪಡುತ್ತದೆ. ತನ್ನ ಪ್ರತಿಬಿಂಬವನ್ನು ಕಂಡು ಇದಾವುದೋ ಬೇರೆ ಪ್ರಾಣಿಯೇ ಇರಬಹುದು ಎಂದು ಭಾವಿಸಿ ನನ್ನನ್ನೇ ಭಯಪಡಿಸುವೆಯಾ ನಿನ್ನ ಸೊಕ್ಕನ್ನಡಗಿಸುವೇ ಎಂದುಕೊಂಡು  ಕರಡಿ ಕೋಪದಿಂದ  ಕನ್ನಡಿಯ ಮೇಲೆ ದಾಳಿ ಮಾಡಲು ಆರಂಭಿಸುತ್ತದೆ.  ಕೊನೆಯಲ್ಲಿ  ಕನ್ನಡಿಯನ್ನೇ ನೆಲಕ್ಕುರುಳಿಸಿ ಪುಡಿ ಮಾಡಿಬಿಡುತ್ತದೆ.   ಕರಡಿಯ ಈ ಪ್ರತಿಕ್ರಿಯೆ ಕಾಣಲು ತುಂಬಾ ಹಾಸ್ಯಮಯವಾಗಿತ್ತು.

ಇದನ್ನೂ ಓದಿ: ಬೆಕ್ಕುಗಳ ಬಲೆಯಿಂದ ತಪ್ಪಿಸಿಕೊಳ್ಳಲು ಪುಟ್ಟ ಹಕ್ಕಿಯ ಸಖತ್ ಪ್ಲಾನ್ ನೋಡಿ, ಶಕ್ತಿಗಿಂತ ಯುಕ್ತಿ ಮೇಲು 

Nature is Amazing ಎಂಬ X  ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 14.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.  ಹಾಗೂ   ಕನ್ನಡಿಯನ್ನು ಕಂಡು ಕರಡಿ ಪ್ರತಿಕ್ರಿಯಿಸಿದ ರೀತಿಯನ್ನು  ನೋಡಿ ಸಾಮಾಜಿಕ ಮಾಧ್ಯಮ  ಬಳಕೆದಾರರು ಹಾಸ್ಯಮಯವಾಗಿ ಕಮೆಂಟ್ ಮಾಡಿದ್ದಾರೆ.  ಒಬ್ಬ ಬಳಕೆದಾರರು ನೀವು ಸ್ವತಃ ನಿಮ್ಮನ್ನೇ ದ್ವೇಷಿಸಿದಾಗ ಹೀಗೆ ಇರುತ್ತೆ” ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.  ಇನ್ನೊಬ್ಬ ಬಳಕೆದಾರರು ಪ್ರಾಣಿಗಳಿಗೆ ಹೆದರಿಕೆಯಾಗುವಂತ ಇಂತಹ ವಸ್ತುಗಳನ್ನು ಕಾಡಿನಲ್ಲಿ ಇಡಬಾರದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಕರಡಿ ತನ್ನನ್ನು ತಾನು ತುಂಬಾ ದ್ವೇಷಿಸುತ್ತಿರುವಂತಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ