AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion Test: ಜೋಡಿ ಹಕ್ಕಿ ಅಥವಾ ಕುದುರೆ, ಇದರಲ್ಲಿ ಯಾವುದನ್ನು ಮೊದಲು ನೋಡಿದ್ದೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರ

ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ನೋಡಿರಬಹುದು. ಇದು ಮೆದುಳನ್ನು ಚುರುಕುಗೊಳಿಸುವ ಒಗಟಿನ ಆಟಗಳಾಗಿದ್ದು, ಹೆಚ್ಚಿನ ಜನರು ಈ ಒಗಟಿನ ಆಟವನ್ನು ಆಡಲು ಇಷ್ಟಪಡುತ್ತಾರೆ.  ಇದೇ ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಅದರಲ್ಲಿ ಮೊದಲು ಯಾವ ಒಂದು ಚಿತ್ರವನ್ನು ನೋಡುತ್ತೀರಿ ಎನ್ನುವುದರ  ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ನೀವು ತಿಳಿದುಕೊಳ್ಳಬಹುದು. 

Optical Illusion Test: ಜೋಡಿ ಹಕ್ಕಿ ಅಥವಾ ಕುದುರೆ, ಇದರಲ್ಲಿ ಯಾವುದನ್ನು ಮೊದಲು ನೋಡಿದ್ದೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರ
Optical Illusion Test
ಮಾಲಾಶ್ರೀ ಅಂಚನ್​
| Edited By: |

Updated on: Nov 30, 2023 | 6:24 PM

Share

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದು ಮೆದುಳನ್ನು ಚುರುಕುಗೊಳಿಸುವ  ಹಾಗೂ ಮನಸ್ಸಿನ ಏಕಾಗ್ರತೆಯನ್ನು ವೃದ್ಧಿಸುವ  ಅದ್ಭುತ ಒಗಟಿನ ಆಟಗಳಾಗಿದ್ದು, ಹೆಚ್ಚಿನವರು ಈ ಒಗಟಿನ ಆಟವನ್ನು ಆಡಲು ಇಷ್ಟಪಡುತ್ತಾರೆ.   ಇನ್ನೂ ಕೆಲವು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಲ್ಲಿ ಒಗಟನ್ನು ಬಿಡಿಸುವುದರ ಜೊತೆಗೆ  ನಿಮ್ಮ ವ್ಯಕ್ತಿತ್ವದ ಬಗ್ಗೆ ಕೂಡ ನೀವು ತಿಳಿದುಕೊಳ್ಳಬಹುದು. ಇದೇ ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಇದೀಗ  ಆಗಿದ್ದು, ಈ ಚಿತ್ರದಲ್ಲಿ ನೀವು ಮೊದಲು  ಯಾವುದನ್ನು ಗಮನಿಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಿರಿ.

ಈ ಆಪ್ಟಿಕಲ್ ಇಲ್ಯೂಷನ್ ಅನ್ನು ಬ್ರೈಟ್ ಸೈಡ್ ಎಂಬ ಯುಟ್ಯೂಬ್ ಚಾನೆಲ್ ಹಂಚಿಕೊಂಡಿದ್ದು, ಈ ಚಿತ್ರದಲ್ಲಿ  ಎರಡು ಹಕ್ಕಿಗಳು ಮರದ ಕೊಂಬೆಯ ಮೇಲೆ  ಕುಳಿತಿರುವುದು ಕಾಣಿಸುತ್ತವೆ. ಅಲ್ಲದೆ ಮರದ ಕೊಂಬೆ ವಿಸ್ತಾರವಾಗಿ ಹರಡಿರುವುದನ್ನು ಕಾಣಬಹುದು. ನೀವು ಸ್ವಲ್ಪ ಏಕಾಗ್ರತೆಯಿಂದ ಆ ಚಿತ್ರವನ್ನು ನೋಡಿದರೆ ಅದರಲ್ಲಿ ಒಂದು ಕುದುರೆ ಕೂಡಾ ಗೋಚರಿಸುತ್ತದೆ.  ಹೀಗೆ ನೀವು ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೊದಲಿಗೆ ಯಾವ  (ಕುದುರೆ ಅಥವಾ ಜೋಡಿಹಕ್ಕಿ) ಚಿತ್ರವನ್ನು ನೋಡುತ್ತೀರಿ ಎಂಬ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದು.

ಈ ಚಿತ್ರದಲ್ಲಿ ಮೊದಲಿಗೆ ನಿಮಗೆ ಜೋಡಿಹಕ್ಕಿಗಳು ಕಾಣಿಸಿಕೊಂಡರೆ, ನೀವು ನೇರ ನುಡಿಯ ವ್ಯಕ್ತಿತ್ವದವರು ಎಂದರ್ಥ. ಮತ್ತು ನೀವು ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡುವಂತಹ ವ್ಯಕ್ತಿಗಳಾಗಿರುತ್ತೀರಿ. ಹಾಗೂ ಕ್ಲಿಷ್ಟಕರ  ಯಾವುದೇ ವಿಷಯಗಳಾದರೂ ಸರಿ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ನಿಮ್ಮ ಗುರಿಗಳ ಮೇಲೆ ದೃಢವಾದ ಗಮನವನ್ನು ಕೇಂದ್ರೀಕರಿಸುವ ನೀವು, ತುಂಬಾ ಸರಳ ಜೀವನವನ್ನು ನಡೆಸಲು ಇಷ್ಟಪಡುತ್ತೀರಿ.

ಇದನ್ನೂ ಓದಿ: ಟರ್ಕಿ ಕೋಳಿಗಳ ನಡುವೆ ಕುಂಬಳಕಾಯಿ ಅಡಗಿದೆ, ಹುಡುಕುವಿರಾ?

ಈ ಆಪ್ಟಿಕಲ್ ಇಲ್ಯೂಷನ್  ಚಿತ್ರದಲ್ಲಿ ನಿಮಗೆ ಮೊದಲು ಕುದುರೆಗಳು ಕಾಣಿಸಿಕೊಂಡರೆ ನೀವು ಏಕಾಗ್ರ ದೃಷ್ಟಿಯನ್ನು ಹೊಂದಿದ್ದೀರಿ ಎಂದರ್ಥ. ಮತ್ತು ನೀವು ಅನಗತ್ಯ ಜಗಳಗಳನ್ನು ಇಷ್ಟಪಡುವುದಿಲ್ಲ. ನಿಮ್ಮ ಈ ಗುಣ ನಿಮ್ಮನ್ನು ಯಾವುದೇ ತೊಂದರೆಗೆ  ಅಥವಾ ವಿವಾದಗಳಲ್ಲಿ ಸಿಳುಕಿಕೊಳ್ಳದಂತೆ ನೋಡಿಕೊಳ್ಳುತ್ತದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್