Viral Video: ಡ್ರೈವರಣ್ಣ ಬಸ್ ನಿಲ್ಸೋ, ನಾನು ಬರ್ತೀನಿ, ಕ್ವಾಟ್ಲೆ ಕೊಟ್ಟ ಗಜರಾಜ

ಸಾಮಾಜಿಕ ಜಾಲತಾಣದಲ್ಲಿ  ಪ್ರಾಣಿಗಳ ಕುರಿತ ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಕೆಲವೊಂದು ವಿಡಿಯೋಗಳು ಪ್ರಾಣಿಗಳ ನಡುವಿನ ಕಾದಟಕ್ಕೆ ಸಂಬಂಧಿಸಿದ್ದರೆ, ಇನ್ನೂ ಹಲವು ವಿಡಿಯೋಗಳು ನೋಡಲು ತುಂಬಾ ತಮಾಷೆಯಾಗಿರುತ್ತವೆ. ಇದೀಗ ಅಂತಹದ್ದೇ  ಹಾಸ್ಯಮಯ ವಿಡಿಯೋವೊಂದು ಹರಿದಾಡುತ್ತಿದ್ದು, ದೈತ್ಯ ಆನೆಯೊಂದು ರಸ್ತೆಯಲ್ಲಿ ಹೋಗಿ ಬರೋ ಬಸ್ಸುಗಳನ್ನೆಲ್ಲಾ ನಿಲ್ಲಿಸಲು ಪ್ರಯತ್ನಿಸುತ್ತದೆ. ಈ ವಿಡಿಯೋವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Viral Video: ಡ್ರೈವರಣ್ಣ ಬಸ್ ನಿಲ್ಸೋ, ನಾನು ಬರ್ತೀನಿ, ಕ್ವಾಟ್ಲೆ ಕೊಟ್ಟ ಗಜರಾಜ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 30, 2023 | 9:49 AM

ಆನೆಗಳಿಗೆ ಕೆಲವೊಮ್ಮೆ ಮದವೇರಿದರೂ ಕೂಡಾ ಅವುಗಳು ಶಾಂತ ಪ್ರಾಣಿಗಳು. ಹೆಚ್ಚಿನ ಸಂದರ್ಭಗಳಲ್ಲಿ ಅವುಗಳು ಶಾಂತವಾಗಿರುತ್ತವೆ.  ಕೆಲವೊಂದು ಬಾರಿ ಅವುಗಳು ಚೇಷ್ಟೆಗಳನ್ನೂ ಕೂಡ ಮಾಡುವುದುಂಟು. ಹೀಗೆ ಆನೆಗಳು ಇತರ ಪ್ರಾಣಿಗಳಿಗೆ ಕೀಟಲೆ ಮಾಡುವ, ನೀರಿನಲ್ಲಿ ಆಟವಾಡುವ, ಮಾವುತನಿಗೆ ಕೀಟಲೆ ಮಾಡುವ,  ಕ್ರಿಕೆಟ್ ಆಡುವ ಅದೆಷ್ಟೋ ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ  ಕೆಲವು ವಿಡಿಯೋಗಳು ಎಷ್ಟು ಮುದ್ದಾಗಿರುತ್ತವೆ ಎಂದರೆ ಅದನ್ನು ಮತ್ತೆ ಮತ್ತೆ ನೋಡಬೇಕೆಂದೆನಿಸುತ್ತದೆ. ಈಗ ಅಂತಹದ್ದೇ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡ್ರೈವರಣ್ಣ ಬಸ್ ನಿಲ್ಸೋ  ನಾನು  ಬರ್ತೀನಿ… ಎನ್ನುತ್ತಾ  ರಸ್ತೆಯಲ್ಲಿ ಹೋಗಿ ಬರೋ ಬಸ್ಸುಗಳನ್ನೆಲ್ಲಾ ಆನೆಯೊಂದು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸುತ್ತದೆ.

@sahara_rider16 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಗಜರಾಜ ರಸ್ತೆಯಲ್ಲಿ ಹೋಗಿ ಬರೋ ಬಸ್ಸುಗಳನ್ನೆಲ್ಲಾ ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ದೈತ್ಯ ಆನೆಯೊಂದು ಬಸ್ಸು ಬರುವುದನ್ನು ನೋಡಿ ತಕ್ಷಣವೇ ರಸ್ತೆ ಮಧ್ಯೆ ಬಂದು ಆ ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸುತ್ತದೆ, ಆದರೆ ಚಾಲಾಕಿ ಬಸ್ಸ್ ಚಾಲಕ ಆನೆ ಈ ಕಡೆ ಬರುವಾಗ ಆ ಕಡೆಯಿಂದ ಬಸ್ಸನ್ನು ಸ್ಪೀಡ್ ಆಗಿ ಓಡಿಸಿಕೊಂಡು ಹೋಗುತ್ತಾನೆ. ಹೀಗೆ  ಡ್ರೈವರಣ್ಣ ಬಸ್ ನಿಲ್ಸೋ  ನಾನು ನಿಮ್ ಜೊತೆ ಬರ್ತೀನಿ ಎನ್ನುತ್ತಾ ರಸ್ತೆಯಲ್ಲಿ ಹೋಗಿ ಬರೋ ಬಸ್ಸುಗಳನ್ನೆಲ್ಲಾ ಗಜರಾಜ  ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸುತ್ತಾನೆ. ಆದರೆ ಬಸ್ ಚಾಲಕರು ಬಸ್ಸುಗಳನ್ನು ನಿಲ್ಲಿಸದೆ  ಚಿರತೆ ವೇಗದಲ್ಲಿ ಬಸ್ಸುಗಳನ್ನು ಓಡಿಸಿಕೊಂಡು  ಹೋಗುವುದನ್ನು ಕಾಣಬಹುದು.

ಇದನ್ನೂ ಓದಿ: ಬೈಕ್ ಸವಾರಿ ಯಾರಿಗ್ ಬೇಕು ಗುರು, ಇದೇ ಒಂತರಾ ಚೆನ್ನಾಗಿದೆ, ಎಮ್ಮೆ ಸವಾರಿ ಹೋಗಿದೆ ನೋಡಿ 

ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 17.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.2 ಮಿಲಿಯನ್ ಲೈಕ್ಸ್ಗಳನ್ನು  ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನೋಡಲು ತಮಾಷೆಯಾಗಿ ಕಾಣಬಹುದು, ಆದರೆ  ಪಾಪ ಆ ಆನೆಗೆ ಏನು ಸಹಾಯ ಬೇಕಾಗಿತ್ತೋ ಏನೋ ಅದಕ್ಕಾಗಿಯೇ ಬಸ್ಸುಗಳನ್ನು ನಿಲ್ಲಿಸಲು ಪ್ರಯತ್ನಿಸಿದೆʼ ಎಂದು ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ಆನೆಗೆ ಬಸ್ಸ್ ಹತ್ತಿ ಊರು ಸುತ್ತಬೇಕೆನ್ನುವ  ಆಸೆಯಾಗಿದೆ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯ ತುಂಬಾ ಹಾಸ್ಯಮಯವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ