AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದು ಕಾಣಲು ಒಣ ಕಡ್ಡಿಯಂತೆಯೇ ಇದೆ, ಆದರೆ ಇದು ಕಡ್ಡಿಯಲ್ಲ, ಹಾಗಾದ್ರೆ ಏನಿದು? 

ಈ ಜಗತ್ತಿನಲ್ಲಿ ಹಲವಾರು ಜಾತಿಯ ಜೀವಿಗಳಿವೆ. ಅನೇಕ ಜೀವಿಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಇನ್ನೂ ಕೆಲವು ಜೀವಿಗಳಿವೆ. ಅವುಗಳು ನಿಜವಾಗಿಯೂ ಜೀವಂತ ಜೀವಿಯೇ ಅಥವಾ ಇನ್ನಾವುದೋ ವಸ್ತುವೇ ಎಂದು ಕಂಡು ಹಿಡಿಯಲು ಕೂಡಾ ಕಷ್ಟಕರವಾಗುತ್ತದೆ. ಅಂತಹ ಚಿತ್ರವಿಚಿತ್ರ ಜೀವಿಗಳೂ ಈ ಭೂಮಿಯ ಮೇಲಿದೆ.  ಅವುಗಳಲ್ಲಿ  ಕಡ್ಡಿ ಕೀಟ ಕೂಡಾ ಒಂದು. ನೋಡಲು ಥೇಟ್ ಒಣ ಕಡ್ಡಿಯಂತೆ ಕಾಣುವ ಈ ಕೀಟದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ನಿಜವಾಗಿಯೂ ಕೀಟವೇ ಅಥವಾ ಕಡ್ಡಿಯೇ ಎಂದು ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗಿದ್ದಾರೆ.

Viral Video: ಇದು ಕಾಣಲು ಒಣ ಕಡ್ಡಿಯಂತೆಯೇ ಇದೆ, ಆದರೆ ಇದು ಕಡ್ಡಿಯಲ್ಲ, ಹಾಗಾದ್ರೆ ಏನಿದು? 
ವೈರಲ್​​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Nov 29, 2023 | 5:58 PM

Share

ಪ್ರಕೃತಿಯಲ್ಲಿ ಎಂತೆಂತಹ ಅದ್ಭುತಗಳಿವೆ ಅಲ್ವಾ…  ಪ್ರಕೃತಿಯಲ್ಲಿನ ಈ ಕೆಲವೊಂದು ಅಚ್ಚರಿಗಳು ನಂಬಲಾಸಾಧ್ಯವಾಗಿರುತ್ತದೆ. ಮರ ಗಿಡಗಳು ಮಾತ್ರವಲ್ಲದೆ ಇಂತಹ ಅನೇಕ ವಿಶಿಷ್ಟ ಜೀವಿಗಳೂ ಕೂಡಾ ಇವೆ. ಪರಭಕ್ಷಕಗಳಿಂದ  ಪ್ರಾಣರಕ್ಷಣೆಗಾಗಿ ತಮ್ಮ ರೂಪವನ್ನು ಬದಲಾಯಿಸುವ ಕೆಲವು ಜೀವಿಗಳಿವೆ. ಅವುಗಳು ತಮ್ಮ ರೂಪವನ್ನು ಎಷ್ಟರ ಮಟ್ಟಿಗೆ ಬದಲಾಯಿಸುತ್ತವೆ ಎಂದರೆ ಇವುಗಳು  ನಿಜವಾಗಿಯೂ ಜೀವಂತ ಜೀವಿಯೇ ಅಥವಾ ಇನ್ನಾವುದೋ ನಿರ್ಜೀವ ವಸ್ತುವೇ ಎಂದು ತಿಳಿಯಲು ಸಹ ನಮಗೆ ಕಷ್ಟಸಾಧ್ಯವಾಗಿರುತ್ತದೆ. ಇಂತಹ ವಿಶಿಷ್ಟ ಜೀವಿಗಳ ಕುರಿತ ಕುತೂಹಲಕಾರಿ ವಿಡಿಯೋಗಳನ್ನು ನಾವೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಇದೀಗ ಅಂತಹದ್ದೇ ಒಂದು ಅಚ್ಚರಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇಲ್ಲಿ ಥೇಟ್ ಒಣ ಮರದ ಕಡ್ಡಿಯಂತೆ ಕಾಣುವ ಕಡ್ಡಿ ಕೀಟವನ್ನು ಕಾಣಬಹುದು. ಇದು ನಿಜವಾಗಿಯೂ ಕೀಟವೇ ಅಥವಾ ಕಡ್ಡಿಯೇ ಎಂದು ಈ ವಿಡಿಯೋ ನೋಡಿದವರು ಕನ್ಫ್ಯೂಸ್ ಆಗಿದ್ದಾರೆ.

@jungle_pearl ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯಾವುದೋ ಒಣ ಮರದ ಕಡ್ಡಿಯಂತೆ ಕಾಣುವ ವಿಶೇಷ ಕಡ್ಡಿ ಕೀಟವನ್ನು ಕಾಣಬಹುದು.

ಈ ವಿಡಿಯೋವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ಕಡ್ಡಿಯೊಂದನ್ನು ಕೈಗೆತ್ತಿಕೊಳ್ಳುವುದನ್ನು ಕಾಣಬಹುದು. ನಂತರ ಅವರು ಇದು ಯಾವುದೋ ಮರದ ಕಡ್ಡಿಯಲ್ಲ, ಬದಲಿಗೆ ಇದು ಕಡ್ಡಿ ಕೀಟ ಎಂದು ಹೇಳುತ್ತಾರೆ. ಬಳಿಕ ಅದರ ದೇಹದ ಭಾಗಗಳ ಬಗ್ಗೆ ವಿವರಿಸಿ, ಈ ಕೀಟವು ಹತ್ತಿರದಲ್ಲಿ ಅಪಾಯವಿದೆ ಎಂದು ತಿಳಿದ ತಕ್ಷಣ ಅದು ತನ್ನ ರೂಪವನ್ನು ನಿರ್ಜೀವ ಕಡ್ಡಿಯಂತೆ ಬದಲಾಯಿಸಿಕೊಳ್ಳುತ್ತದೆ.  ಆದರೆ ಇದನ್ನು ಎಲೆಯ ಮೇಲೆ ಬಿಟ್ಟ ತಕ್ಷಣ ಅದರ ನಿಜ ರೂಪಕ್ಕೆ ಮರಳುವುದನ್ನು ನೋಡಿ  ಎಂದು ವಿವರಿಸುತ್ತಾರೆ. ಈ ವಿಶಿಷ್ಟ ಜೀವಿಯನ್ನು ಕಂಡು ಹಲವರು ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: ರೆಡಿಮೇಡ್ ಗುಲಾಬ್ ಜಾಮೂನು ತಿನ್ನುವ ಮುನ್ನ ಈ ವಿಡಿಯೋ ಒಮ್ಮೆ ನೋಡಿ

ಈ ವೈರಲ್ ವೀಡಿಯೋ 44 ಮಿಲಿಯನ್  ವೀಕ್ಷಣೆಗಳನ್ನು ಹಾಗೂ  2 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಈ ಬಗ್ಗೆ ಅನೇಕರು ಕಮೆಂಟ್​​​ ಮಾಡಿದ್ದಾರೆ.  ಒಬ್ಬ ಬಳಕೆದಾರರು ʼಇದನ್ನು ನೋಡಿ ನಾನು ಇದು ನಿಜ ಕಡ್ಡಿಯೆಂದು ಭಾವಿಸಿದೆʼ ಎಂದು ಹೇಳಿದ್ದಾರೆ.   ಇನ್ನೊಬ್ಬ ಬಳಕೆದಾರರು ʼದೇವರ ಸೃಷ್ಟಿಯೇ ಅತ್ಯದ್ಭುತ ʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ.  ಇನ್ನೂ ಅನೇಕರು ಈ ಕೀಟವನ್ನು ಕಂಡು ಇವೆಲ್ಲಾ ಪ್ರಕೃತಿಯ ಅದ್ಭುತ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ