Viral Video: ರೆಡಿಮೇಡ್ ಗುಲಾಬ್ ಜಾಮೂನು ತಿನ್ನುವ ಮುನ್ನ ಈ ವಿಡಿಯೋ ಒಮ್ಮೆ ನೋಡಿ

ಬಹುತೇಕ ಎಲ್ಲರಿಗೂ ಗುಲಾಬ್ ಜಾಮೂನು ಎಂದರೆ ಬಲು ಇಷ್ಟ. ಮನೆಯಲ್ಲಿ ಗುಲಾಬ್ ಜಾಮೂನು ಮಾಡಲು ತುಂಬಾ ಸಮಯ ಹಿಡಿಯುತ್ತೇ ಎನ್ನುವವರಿಗಂತಲೇ ಮಾರುಕಟ್ಟೆಗಳಲ್ಲಿ ರೆಡಿಮೇಡ್ ಗುಲಾಬ್ ಜಾಮೂನುಗಳು ಲಭ್ಯವಿದೆ. ಈಗಂತೂ ಎಲ್ಲರೂ ಏನಾದರೂ ಸಿಹಿ ತಿನ್ನಬೇಕೆಂದೆನಿಸಿದಾಗ ಇಂತಹ ರೆಡಿಮೇಡ್ ಗುಲಾಬ್ ಜಾಮೂನುಗಳನ್ನೇ ತಿನ್ನುತ್ತಾರೆ. ನೀವು ಕೂಡ ಅದೇ ಗುಂಪಿಗೆ ಸೇರಿದವರಾಗಿದ್ದರೆ, ಈ ವಿಡಿಯೋವನ್ನೊಮ್ಮೆ ನೋಡಿ.  

Viral Video: ರೆಡಿಮೇಡ್ ಗುಲಾಬ್ ಜಾಮೂನು ತಿನ್ನುವ ಮುನ್ನ ಈ ವಿಡಿಯೋ ಒಮ್ಮೆ ನೋಡಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 29, 2023 | 4:57 PM

ಸಿಹಿ ತಿನಿಸುಗಳು ಎಂದಾಗ ಹೆಚ್ಚಿನವರಿಗೆ ಥಟ್ಟನೆ ನೆನಪಾಗುವುದೇ ಗುಲಾಬ್ ಜಾಮೂನ್. ಬಹಳ ಮೃದುವಾಗಿರುವ ಹಾಗೂ  ಬಾಯಲ್ಲಿಟ್ಟರೆ ಕರಗುವಂತಿರುವ ಈ ಒಂದು ಸಿಹಿ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಆದರೆ ಈ  ಗುಲಾಬ್ ಜಾಮೂನನ್ನು ಮನೆಯಲ್ಲಿಯೇ ತಯಾರಿಸಲು ಸ್ವಲ್ಪ ತಾಳ್ಮೆ ಮತ್ತು ಸಮಯ ಬೇಕಾಗುತ್ತವೆ.  ಅದಕ್ಕಾಗಿಯೇ ಇಂದು ಮಾರುಕಟ್ಟೆಗಳಲ್ಲಿ ವಿವಿಧ ಕಂಪೆನಿಗಳ ರೆಡಿಮೇಡ್ ಗುಲಾಬ್ ಜಾಮೂನುಗಳು, ರಸಗುಲ್ಲಾ ಸೇರಿದಂತೆ ಹಲವಾರು ಸ್ವೀಟ್ಸ್ ಲಭ್ಯವಿದೆ.  ಅನೇಕರು  ತಮಗೆ ಸ್ವೀಟ್ ಕ್ರೇವಿಂಗ್ಸ್ ಆದಾಗ ಅಥವಾ ಯಾವುದೇ ಹಬ್ಬದ ಸಂದರ್ಭದಲ್ಲಿ ಇದೇ ಪ್ಯಾಕೇಜ್ಡ್ ಗುಲಾಬ್ ಜಾಮೂನುಗಳನ್ನು ಮನೆಗೆ ತಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ಗುಲಾಬ್ ಜಾಮುನುಗಳು ನಿಮ್ಮ ಸಮಯವನ್ನು ಉಳಿಸುತ್ತವೆ ನಿಜ. ಆದರೆ ಇದನ್ನು ಯಾವಾಗ ತಯಾರಿಸಿದ್ದು, ತಯಾರಿಸುವಾಗ ಎಷ್ಟು ನೈರ್ಮಲ್ಯ ಕ್ರಮಗಳನ್ನು ಪಾಲಿಸಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಈ ರೆಡಿಮೇಡ್ ಸ್ವೀಟ್ಸ್ ಎಷ್ಟು ಆರೋಗ್ಯಕರವಾಗಿರುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತದೆ. ಆದರೆ ಇದೀಗ ರೆಡಿಮೇಡ್ ಗುಲಾಬ್ ಜಾಮೂನ್ ಒಂದರಲ್ಲಿ ಬಿಳಿ ಬಣ್ಣದ ಹುಳಗಳು ಪತ್ತೆಯಾಗಿದ್ದು, ಇದನ್ನು ಕಂಡ ಅನೇಕರು ಇನ್ನು ಮುಂದೆ ಇಂತಹ ರೆಡಿಮೇಡ್ ಸಿಹಿ ಪದಾರ್ಥಗಳನ್ನು ತಿನ್ನುವ ಮೊದಲು ನೂರು ಬಾರಿ ಯೋಚಿಸುವುದು ಉತ್ತಮ ಎಂದು   ಹೇಳಿದ್ದಾರೆ.

@tn38_foodie ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೆಡಿಮೇಡ್ ಗುಲಾಬ್ ಜಾಮೂನು ಬಾಕ್ಸ್ ಒಳಗಡೆ ಬಿಳಿ ಬಣ್ಣದ ಹುಳವೊಂದು (ಥ್ರೆಡ್ ವರ್ಮ್) ಓಡಾಡುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ರೆಡಿಮೇಡ್ ಗುಲಾಬ್ ಜಾಮೂನ್ ಖರೀದಿಸುತ್ತಾರೆ. ಅದನ್ನು ಓಪನ್ ಮಾಡಿ ನೋಡಿದಾಗ, ಅದರಲ್ಲಿರುವ ಒಂದು  ಗುಲಾಬ್ ಜಾಮೂನಿನ ಮೇಲೆ ಬಿಳಿ ಬಣ್ಣದ ಹುಳವೊಂದು (ಥ್ರೆಡ್ ವರ್ಮ್) ಇರುವುದು ಪತ್ತೆಯಾಗಿದೆ. ಇಂತಹ ಪ್ಯಾಕೇಜ್ಡ್ ತಿನಿಸುಗಳು ತಿನ್ನಲು ಸೂಕ್ತವೇ ಎಂಬ ಪ್ರಶ್ನೆ ಇದೀಗ ಎಲ್ಲರ ಮನದಲ್ಲೂ ಮೂಡಿದೆ.

ಇದನ್ನೂ ಓದಿ: ಮಾಜಿ ಪತ್ನಿಯನ್ನೇ ಮರು ಮದುವೆಯಾದ ವ್ಯಕ್ತಿ;  ಎಲ್ಲರನ್ನೂ ಭಾವುಕರನ್ನಾಗಿಸಿದ ಅಪರೂಪದ ಪ್ರೇಮಕಥೆ 

ನವೆಂಬರ್ 20 ರಂದು ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾದ  ಈ ವಿಡಿಯೋ 4.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  28.8K ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವರು ಈ ವಿಡಿಯೋವನ್ನು ಕಂಡು ಗಾಬರಿಯಾಗಿದ್ದಾರೆ.  ಒಬ್ಬ ಬಳಕೆದಾರರು ʼಈ ಹುಳಗಳನ್ನು ಥ್ರೆಡ್ ವರ್ಮ್ ಅಥವಾ ಪಿನ್ ವರ್ಮ್ ಅಥವಾ ಸೀಟ್ ವರ್ಮ್ ಎಂದು ಕರೆಯಲಾಗುತ್ತದೆ. ಆಹಾರವನ್ನು ತಯಾರಿಸುವ ಸ್ಥಳಗಳಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿದ್ದರೆ ಇಂತಹ ಹುಳಗಳು ಉತ್ಪತ್ತಿಯಾಗುತ್ತವೆ. ಅಲ್ಲದೆ ಸರಿಯಾಗಿ ಕೈ ತೊಳೆಯದಿರುವುದು ಕೂಡಾ ಇದಕ್ಕೆ ಒಂದು ಕಾರಣʼ ಎಂದು ಗುಲಾಬ್ ಜಾಮೂನಿನಲ್ಲಿ ಉತ್ಪತ್ತಿಯಾಗಿರುವ ಹುಳಗಳ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಹೋದರ ನೀನು ಬೇಗ ಗುಲಾಬ್ ಜಾಮೂನನ್ನು ತಿಂದು ಬಿಡು, ಇಲ್ಲದಿದ್ದರೆ ಆ ಹುಳಗಳೇ ಗುಲಾಬ್ ಜಾಮೂನನ್ನು ಖಾಲಿ ಮಾಡಿಬಿಡುತ್ತವೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಇಂತಹ ಪ್ಯಾಕೇಜ್ಡ್ ಆಹಾರಗಳನ್ನು ತಿನ್ನುವ ಮೊದಲು ಜಾಗರೂಕರಾಗಿರುವುದು ತುಂಬಾ ಅಗತ್ಯವಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು