ಪಶ್ಚಿಮ ಬಂಗಾಳ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಬಳಿಕ ರಕ್ತವಾಂತಿ, ರೋಗಿ ಸಾವು, ಪ್ರತಿಭಟನೆ
ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಬಳಿಕ ರೋಗಿಯೊಬ್ಬರು ರಕ್ತ ವಾಂತಿಯಾಗಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಡೆದಿದೆ. ಖಾಲಿಸಮರಿ ನಿವಾಸಿ ರವೀಂದ್ರನಾಥ್ ಬರ್ಮನ್ ಅವರನ್ನು ಆ್ಯಸಿಡಿಟಿ ಸಮಸ್ಯೆ ಎಂದು ತುರ್ತು ವಿಭಾಗಕ್ಕೆ ಕರೆತರಲಾಗಿತ್ತು. ಆದರೆ ತುರ್ತು ಚಿಕಿತ್ಸಾ ವಿಭಾಗದ ವೈದ್ಯರು ರವೀಂದ್ರನಾಥ್ ಬರ್ಮನ್ ಅವರಿಗೆ ಇಂಜೆಕ್ಷನ್ ನೀಡಿದ್ದಾರೆ. ವಾರ್ಡ್‌ಗೆ ಕರೆದೊಯ್ದ ನಂತರ ಚುಚ್ಚುಮದ್ದನ್ನು ನೀಡಲಾಯಿತು.

ಇದಾದ ನಂತರ ರವೀಂದ್ರನಾಥ್ ಬರ್ಮನ್ ಅವರ ಬಾಯಲ್ಲಿ ರಕ್ತ ಬರತೊಡಗಿತು. ಬಳಿಕ ಕರ್ತವ್ಯದಲ್ಲಿದ್ದ ವೈದ್ಯರು ರೋಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಯ ಕುರಿತು ರವೀಂದ್ರನಾಥ್ ಬರ್ಮನ್ ಅವರ ಸಂಬಂಧಿ ಕಮಲೇಂದು ಬರ್ಮನ್ ಮಾತನಾಡಿ, ನಾವು ಆ್ಯಸಿಡಿಟಿ ಸಮಸ್ಯೆ ಎಂದು ನಾವು ಅವರನ್ನು ಆಸ್ಪತ್ರೆಗೆ ಕರೆದಿಕೊಂಡು ಬಂದಿದ್ದೆವು, ವೈದ್ಯರು ತಾವೇ ವಾರ್ಡ್‌ಗೆ ಶಿಫ್ಟ್ ಮಾಡಿದ್ದರು.
ಮತ್ತಷ್ಟು ಓದಿ: ತಮಿಳುನಾಡು: ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ, ವೆಂಟಿಲೇಟರ್ನಲ್ಲಿದ್ದ ಮಹಿಳೆ ಸಾವು
ಬಳಿಕ ಚುಚ್ಚುಮದ್ದನ್ನು ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ರಕ್ತದ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಅವರಿಗೆ ಎದೆನೋವು ಎಂದು ಕರೆದುಕೊಂಡು ಬಂದಿದ್ದರು, ನಾವು ಪ್ರಥಮ ಚಿಕಿತ್ಸೆ ಆರಂಭಿಸಿದೆವು, ಇಸಿಜಿ ಸಿದ್ಧಪಡಿಸಲಾಗಿದೆ. ಆದರೆ ಅಷ್ಟರಲ್ಲಿ ರೋಗಿ ಸಾವನ್ನಪ್ಪಿದ್ದಾರೆ, ಸಮಯವಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮತ್ತೊಂದು ಘಟನೆ: ಆಸ್ಪತ್ರೆಯ ವೆಂಟಿಲೇಟರ್ನಲ್ಲಿದ್ದ ಮಹಿಳೆ ಸಾವು
ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ವೆಂಟಿಲೇಟರ್ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ವಾಸಕೋಶ ಸಂಬಂಧಿ ಸಮಸ್ಯೆಗಾಗಿ ತಮಿಳುನಾಡಿನ ತಿರುವರೂರು ಸರ್ಕಾರಿ ಆಸ್ಪತ್ರೆಗೆ 48 ವರ್ಷದ ಮಹಿಳೆ ದಾಖಲಾಗಿದ್ದರು. ವೆಂಟಿಲೇಟರ್‌ನಲ್ಲಿರುವಾಗ ವಿದ್ಯುತ್ ವ್ಯತ್ಯಯದಿಂದಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ ಸಾವನ್ನಪ್ಪಿದ್ದಾರೆ. ರೋಗಿಯ ಕುಟುಂಬ ಸದಸ್ಯರು, ಅಮರಾವತಿ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ವಿದ್ಯುತ್ ಬ್ಯಾಕಪ್ ಲಭ್ಯವಿಲ್ಲದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ