ಅಭಿಷೇಕವೆಂದರೆ ಅಮೃತದಂತೆ, ಆದರೆ ಇದೇನಿದು ಜೀವಂತವಾಗಿ ಸ್ವಾಮೀಜಿಗೆ ಖಾರಾಭಿಷೇಕ? ಯಾರ ಆರಾಧನೆ, ಆವಾಹನೆಗಾಗಿ?
ಯಪ್ಪಾ ಇದು ಸಾಧ್ಯವಾ ಅಂತಾ ಮೂಗೆಳೆಯಬೇಡಿ. ಸ್ವಾಮೀಜಿಗೆ ಮೆಣಸಿನ ಪುಡಿಯಿಂದ ಖಾರದ ಅಭಿಷೇಕ ಮಾಡಿದ್ದಾರೆ! ಸ್ವಾಮೀಜಿಗೆ ಜೀವಂತವಾಗಿ ಖಾರಾಭಿಷೇಕ? ಯಾರ ಆರಾಧನೆ, ಆವಾಹನೆಗಾಗಿ ಈ ಕಠಿಣ ತಪಸ್ಸು?
ಏಲೂರು, ಡಿಸೆಂಬರ್ 1: ಖಾರದ ಮೆಣಸಿನ ಪುಡಿ ಎಂದು ಹೇಳಿದ ಕೂಡಲೇ ಜನ ಓಡಿ ಹೋಗುತ್ತಾರೆ. ಏಕೆಂದರೆ ಮೆಣಸಿನಪುಡಿ (Chilli Powder) ಗುಣಲಕ್ಷಣವೇ ಅಂತಹುದು. ಖಾರವನ್ನು ಯಾರುತಾನೆ ಇಷ್ಟಪಡುತ್ತಾರೆ ಅಲ್ಲವಾ? ಅಡುಗೆಯಲ್ಲಿ ಚಿಟಿಕೆ ಮೆಣಸಿನಪುಡಿ ಜಾಸ್ತಿ ಇದ್ದರೆ ಅದು ನಮ್ಮ ನಾಲಿಗೆಗೆ ಬಡಿದ ತಕ್ಷಣ ಅದರ ಉರಿ/ ಖಾರಕ್ಕೆ ನಮ್ಮ ಕಣ್ಣಲ್ಲಿ ನೀರು ಬರುತ್ತದೆ. ನೀರು ಕುಡಡಿದರೂ ಸಕ್ಕರೆ ಬೊಕ್ಕಿದರೂ ಸಿಹಿಯನ್ನು ತಿಂದರೂ ಗಂಟಲಿನಲ್ಲಿ ಇಳಿದ ಉರಿ ಆರುವುದಿಲ್ಲ. ಅದೆಲ್ಲಾ ಹಾಗಿರಲಿ ಈಗ ಯಾಕೆ ಮೆಣಸಿನಕಾಯಿ/ಪುಡಿ ಬಗ್ಗೆ ಮಾತಾಡ್ತೀದೀವಿ ಅಂತ ಡೌಟು ಬರುವುದುಂಟು .. ಆದ್ರೆ ಈ ವಿಷಯ ನಿಮಗೆ ಹೇಳಲೇಬೇಕು. ಭಕ್ತರು ಸ್ವಾಮೀಜಿಯೊಬ್ಬರಿಗೆ (Shiva Swamiji) ಮೆಣಸಿನ ಪುಡಿ ಅಭಿಷೇಕ ಮಾಡಿದ್ದಾರೆ. ಅಭಿಷೇಕ ಅಂದರೆ ಒಂದೆರಡು ಚಿಟಿಕೆ ಖಾರದ ಪುಡಿಯಿಂದ ಅಲ್ಲ, ಒಂದು ಕೆಜಿ ಅಲ್ಲ, ಎರಡು ಕೆಜಿ, ಬರೋಬ್ಬರಿ ಅದು 60 ಕೆಜಿಗಿಂತ ಹೆಚ್ಚು. ಸಾಮಾನ್ಯವಾಗಿ ಅಭಿಷೇಕ ಎಂದರೆ ದೇವಾಲಯಗಳಲ್ಲಿ ಹಾಲು, ಪಂಚಾಮೃತಗಳು, ಜೇನುತುಪ್ಪ ಇತ್ಯಾದಿಗಳನ್ನು ದೇವರ ವಿಗ್ರಹಗಳಿಗೆ ಅಭಿಷೇಕ ಮಾಡುವುದುಂಟು. ಅದು ಸಿಹಿಸವಿಯಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು, ಸಿನಿಮಾ ತಾರೆಯರ ಫ್ಲೆಕ್ಸ್ಗಳಿಗೆ ಅಭಿಮಾನಿಗಳು ಅಭಿಷೇಕ ಮಾಡುವುದುಂಟು… ಆದರೆ ಇಲ್ಲಿ ಸ್ವಾಮೀಜಿಯೊಬ್ಬರ ದೇಹಕ್ಕೆ ಮೆಣಸಿನ ಪುಡಿ ಅಭಿಷೇಕ ಮಾಡಿರುವುದು ಅಚ್ಚರಿ ಮೂಡಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾರದ ಅಭಿಷೇಕ ಮಾಡಿದರೂ ಸ್ವಾಮಿ ಕದಲಲಿಲ್ಲ. ಹೌದು ಇಂತಹ ನೈಜ ಘಟನೆ ನಡೆದಿದೆ.
ಏಲೂರು ಜಿಲ್ಲೆಯ ದ್ವಾರಕಾತಿರುಮಲ ಮಂಡಲದ ದೊರಸಾನಿಪಾಡುವಿನ ಶ್ರೀ ಶಿವದತ್ತ ಪ್ರತ್ಯಂಗಿರಿ ವೃದ್ಧಾಶ್ರಮದಲ್ಲಿ (Dwaraka Tirumala Mandal Of Eluru District andhra pradesh) ತಪಸ್ಸು ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರು ಮತ್ತು ಭಕ್ತರು ಪ್ರತ್ಯಂಗಾರಿ ದೇವಿಯ ಆರಾಧಕರಾದ ಶಿವ ಸ್ವಾಮೀಜಿಗೆ ಖಾರದ ಪುಡಿಯಿಂದ ಅಭಿಷೇಕ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಮೊದಲು ಶಿವ ಸ್ವಾಮೀಜಿಗೆ ಪ್ರತ್ಯಂಗಾರಿ ದೇವಿ ಪೂರ್ಣಾಹುತಿ ಹೋಮ ನೆರವೇರಿಸಿದರು. ಬಳಿಕ ಪ್ರತ್ಯಂಗರಾ ದೇವಿಯನ್ನು ಆವಾಹನೆ ಮಾಡಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ದೇವಿಗೆ ಆವಾಹನೆ ಮಾಡುತ್ತಿದ್ದ ಸ್ವಾಮೀಜಿಗೆ ಭಕ್ತರು ಭಾರೀ ಪ್ರಮಾಣದ ಖಾರದ ಪುಡಿಯಿಂದ ಅಭಿಷೇಕ ಮಾಡಿದರು.
Also read: ಕಣ್ಣಿನೊಳಗೆ ಒಂದೊಮ್ಮೆ ಮೆಣಸಿನ ಪುಡಿ ಬಿದ್ದರೆ ಚಿಂತಿಸಬೇಡಿ, ಹೀಗೆ ಮಾಡಿ ನೋವಿನಿಂದ ಬೇಗ ಪರಿಹಾರ ಸಿಗುತ್ತೆ
ಈ ಕಾರ್ಯಕ್ರಮವನ್ನು ವೀಕ್ಷಿಸಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸುಮಾರು 60 ಕೆ.ಜಿ ಮೆಣಸಿನಕಾಯಿ ಪುಡಿಯಿಂದ ಸ್ವಾಮೀಜಿಗೆ ಅಭಿಷೇಕ ಮಾಡಿದರು. ಕವರ್ ಗಳಲ್ಲಿ ತಂದಿದ್ದ ಮೆಣಸಿನಕಾಯಿಪುಡಿಯನ್ನು ಅಭಿಷೇಕಕ್ಕೆ ಸುರಿದರು. ನರಸಿಂಹಸ್ವಾಮಿ ಹಿರಣ್ಯಕಶಿಪುನನ್ನು ಕೊಂದ ನಂತರ ಸ್ವಾಮಿಯ ಕೋಪವನ್ನು ಕಡಿಮೆ ಮಾಡಲು ಪ್ರತ್ಯಂಗಾರಿ ದೇವಿಯು ಕಾಣಿಸಿಕೊಂಡಳು ಎಂದು ಪುರಾಣಗಳು ಹೇಳುತ್ತವೆ. ಆದರೆ ಪ್ರತ್ಯಂಗಿರಿ ದೇವಿಗೆ ಕೆಂಪು ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ಅಲ್ಲದೆ ಪ್ರತ್ಯಂಗಿರಿ ದೇವಿಗೆ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗುತ್ತದೆ.
ಪ್ರತ್ಯಂಗಿರಿಯ ಆವಾಹನೆ ಮಾಡುವ ಶಿವ ಸ್ವಾಮೀಜಿಗೆ ಕೆಂಪುಮೆಣಸಿನಕಾಯಿ ಹಾರ, ಖಾತದ ಪುಡಿಯಿಂದ ಅಭಿಷೇಕ ಮಾಡಿದರೆ ಸಂಕಷ್ಟ-ಕಷ್ಟಗಳು ನಿವಾರಣೆಯಾಗುತ್ತದೆ, ಶತ್ರು ಸಂಹಾರವಾಗುತ್ತದೆ, ಲಕ್ಷ್ಮೀ ಕಟಾಕ್ಷ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಮೆಣಸಿನಕಾಯಿಯನ್ನು ದೇವಿಗೆ ಪ್ರಿಯವಾದ ನೈವೇದ್ಯವಾಗಿ ಬಳಸುತ್ತಾರೆ. 29 ವರ್ಷಗಳಿಂದ ಹೈದರಾಬಾದ್‌ನಲ್ಲಿ ಹೀಗೆ ಖಾರದ ಅಭಿಷೇಕ ನಡೆಯುತ್ತಿದೆ. ಅಲ್ಲದೆ, ದ್ವಾರಕಾ ತಿರುಮಲ ಮಂಡಲದ ದೊರಸಾನಿಪಾಡು ಶ್ರೀ ಶಿವದತ್ತ ಪ್ರತ್ಯಂಗಿರಿ ವೃದ್ಧಾಶ್ರಮದಲ್ಲಿ ಎರಡನೇ ವರ್ಷ ಕಾಳುಮೆಣಸಿನಿಂದ ಅಭಿಷೇಕ ಮಾಡಲಾಯಿತು ಎಂದು ಶಿವಸ್ವಾಮಿ ತಿಳಿಸಿದರು. ಈ ಖಾರಾಭಿಷೇಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ