ಪಶ್ಚಿಮ ಬಂಗಾಳದಲ್ಲಿರುವುದು ಪಾಕಿಸ್ತಾನವನ್ನು ಪ್ರೀತಿಸುವ ಸರ್ಕಾರ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ್ ಮಜುಂದಾರ್ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನವನ್ನು ಬೆಂಬಲಿಸುವುದಕ್ಕಾಗಿಯೇ ರಾಜ್ಯದಲ್ಲಿ ಐಎಸ್ಐ ಏಜೆಂಟ್ಗಳು ನೆಲೆಸಿದ್ದು, ಸರ್ಕಾರದ ಬೆಂಬಲ ಅವರಿಗಿದೆ ಎಂದರು. ಬಂಗಾಳದಲ್ಲಿ ಪಾಕಿಸ್ತಾನವನ್ನು ಪ್ರೀತಿಸುವ ಸರ್ಕಾರ ಕುಳಿತಿದೆ, ಅಷ್ಟೇ ಏಕೆ, ಪಾಕಿಸ್ಥಾನಕ್ಕೆ ಸಹಾಯ ಮಾಡುವ ಏಜೆಂಟರು, ಸುಲಭವಾಗಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಉತ್ತರ ಪ್ರದೇಶದಂತೆ ಯೋಗಿ ಆದಿತ್ಯನಾಥ್ ಅವರಂತಹ ವ್ಯಕ್ತಿಯಿಂದ ಮಾತ್ರ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡಲು ಪ್ರಾರಂಭಿಸಬೇಕು ಎಂದು ಹೇಳಿದರು.
#WATCH | West Bengal BJP president Sukanta Majumdar says, “The current government in West Bengal is a Pakistan-loving government. This is the reason why people working for Pakistan such as ISI agents are staying in West Bengal and using it as the epicentre to work against our… pic.twitter.com/MBRIKRQwOK
— ANI (@ANI) August 27, 2023
ಪಶ್ಚಿಮ ಬಂಗಾಳದ ಸಂಸ್ಥಾಪನಾ ದಿನದ ವಿಚಾರದಲ್ಲಿ ಬಿಜೆಪಿ ಟಿಎಂಸಿಯನ್ನು ಟೀಕಿಸಿದೆ. ವಾಸ್ತವವಾಗಿ, ಜೂನ್ 20 ರಿಂದ ಏಪ್ರಿಲ್ 15 ಕ್ಕೆ ರಾಜ್ಯ ಸಂಸ್ಥಾಪನಾ ದಿನವನ್ನು ಬದಲಾಯಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕಾಗಿ ವಿರೋಧ ವ್ಯಕ್ತವಾಗಿದೆ.
ಮತ್ತಷ್ಟು ಓದಿ:ಇಂಡಿಯಾ ವಿಪಕ್ಷಗಳ ಮೈತ್ರಿಕೂಟದ ವಿರುದ್ಧದ ಅಮಿತ್ ಶಾ ಆರೋಪಗಳಿಗೆ ಉತ್ತರಕೊಟ್ಟ ಮಮತಾ ಬ್ಯಾನರ್ಜಿ
ಸಂಸ್ಥಾಪನಾ ದಿನದ ಬಗ್ಗೆ ಚರ್ಚಿಸಲು ಮಮತಾ ಬ್ಯಾನರ್ಜಿ ಅವರು ಆಗಸ್ಟ್ 29 ರಂದು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಇತಿಹಾಸವನ್ನು ತಿರುಚಲು ನಿರ್ಧರಿಸಿದ್ದು, ಪ್ರತಿಪಕ್ಷಗಳು ಅದನ್ನು ಬೆಂಬಲಿಸಬೇಕೆಂದು ಬಯಸುತ್ತಿದೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ